ಮಂಗಳೂರು : ಪಡೀಲ್ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಬಜಾಲ್ ಪಡೀಲ್ ವಾಸಿಗಳ ಎರಡು ದಶಕಗಳ ಬೇಡಿಕೆ ಈಡೇರಿಸಲಾಗದ ಸರಕಾರ ಇರುವುದಾದರೂ ಏತಕ್ಕೆ , ಒಂದು ಗಂಟೆಯಲ್ಲಿ ನಾಲ್ಕೈದು ಬಾರಿ ಗೇಟ್ ಹಾಕುವುದರಿಂದ ಸಾರ್ವಜ ನಿಕರು ಪರದಾಡುವಂತಾಗಿದೆ. ಜನ ಪ್ರತಿನಿಧಿಗಳ ಸೋಮಾರಿತನವೇ ರೈಲ್ವೆ ಇಲಾಖೆಯ ನಿರ್ಲಕ್ಷಕ್ಕೆ ಕಾರಣ ಎಂದು ಅವರು ಆರೋಪಿಸಿದರು.
ಪಡೀಲ್ ರೈಲ್ವೆ ಕೆಳ ಸೇತುವೆ ನಿರ್ಮಾಣದ ಬೇಡಿಕೆಯೂ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ರಾಜಿ ರಹಿತ ಹೋರಾಟ ನಡೆಸಲಾಗುವುದು ಎಂದುಮುನೀರ್ ಕಾಟಿಪಳ್ಳ ಅವರು ಹೇಳಿದರು.
ಪ್ರತಿಭಟನೆಯ ಬಳಿಕ ರೈಲು ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ಸಾಗಿ ಸ್ಟೇಷನ್ ಮಾಸ್ಟರ್ ಮೂಲಕ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ರೈಲ್ವೆ ಗೇಟ್ ಕೆಳ ಸೇತುವೆ ಹೋರಾಟ ಸಮಿತಿಯ ಮುಖಂಡ ಅಹ್ಮದ್ ಬಾವ, ಡಿವೈಎಫ್‌ಐ ನಗರ ಪ್ರಮುಖರಾದ ಸಾದಿಕ್ ಕಣ್ಣೂರು, ಕಾರ್ಮಿಕ ಮುಖಂಡ ಸುರೇಶ್ ಬಜಾಲ್, ಲೋಕೇಶ್ ಎಂ., ಪ್ರೇಮಾ ಜಲ್ಲಿಗುಡ್ಡೆ, ಸಂತಿ, ಗುಲಾಬಿ, ನವೀನ್, ವರ ಪ್ರಸಾದ್, ಜಗದೀಶ್, ದೀಪಕ್, ಯಶ್‌ಪಾಲ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English