ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರ ನೇಮಕ

9:10 PM, Thursday, October 3rd, 2013
Share
1 Star2 Stars3 Stars4 Stars5 Stars
(4 rating, 6 votes)
Loading...
Two widows given right to perform puja at Kudroli Gokarnatheshwara Temple

ಮಂಗಳೂರು: ವೇದ ಪುರಾಣಗಳನ್ನು ಕಲಿಸಿ ಅ.6ರಂದು ವಿಧವೆಯರಿಂದ ಪೂಜಾವಿಧಾನ ನಡೆಸುವುದರೊಂದಿಗೆ ಅವರನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಅರ್ಚಕರಾಗಿ ನೇಮಕ ಮಾಡಲಾಗುವುದು ಎಂದು  ಬಿ.ಜನಾರ್ದನ ಪೂಜಾರಿ  ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಇಬ್ಬರು ಅರ್ಚಕಿಯರಿಗೆ ನಾಲ್ಕು ತಿಂಗಳಿನಿಂದ ವೇದ ಪುರಾಣಗಳ ತರಬೇತಿಯನ್ನು ನೀಡಲಾಗಿದೆ, ವಿಧವೆಯರನ್ನೂ ಸಮಾಜ ಕೀಳು ದೃಷ್ಟಿಯಿಂದ ಕಾಣುತ್ತಿದೆ ಈ ಭಾವನೆಯನ್ನು ಹೋಗಲಾಡಿಸಲು ವಿಧವೆಯರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಅ.5 ರಂದು ಬೆಳಿಗ್ಗೆ 11ಕ್ಕೆ ಶಾರದೆ ಮತ್ತು ನವದುರ್ಗೆಯರು, ಗಣಪತಿ, ಪ್ರತಿಷ್ಟೆ ನಡೆಯಲಿದೆ ಎಂದು ಹೇಳಿದರು.

ಅ.12 ರಂದು ಕ್ಷೇತ್ರದ ಅಭೀವೃದ್ಧಿ ಸಮಿತಿ ಸದಸ್ಯ ಬಿ. ದೇವದಾಸ್ ಕಂಟ್ರಾಕ್ಟರ್ ಅವರು ಬರೆದ ”ಮನಸ್ಸಿದ್ದರೆ ಮಾರ್ಗ” ಸತ್ಯ ಘಟನೆಗಳು ಪುಸ್ತಕವನ್ನು ಕ್ಷೇತ್ರದ ಸಂತೋಷಿ ಕಲಾಮಂಟಪ’ದಲ್ಲಿ ನೆರವೇರಿಸಲಾಗುವುದು. ಸಮಾರಂಭದಲ್ಲಿ ಪದ್ಮಭೂಷಣ ಡಾ. ಬಿ.ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಲಿರುವರು, ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ. ಕುಲಪತಿ ಡಾ. ಶಿವಶಂಕರ ಮೂರ್ತಿ, ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ, ಹೆಚ್.ಎಸ್. ಸಾಯಿರಾಮ, ಊರ್ಮಿಳಾ ರಮೇಶ್ ಕುಮಾರ್ ಮತ್ತಿತರರು ಆಗಮಿಸಲಿರುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಹೆಚ್ ಎಸ್ ಸಾಯಿರಾಂ, ಹರಿಕ್ರುಷ್ಣ ಬಂಟ್ವಾಳ್, ರಾಘವೇಂದ್ರ ಕೂಳೂರು, ಪದ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English