ಗ್ರಾಮ ಸಹಾಯಕವನ್ನು ‘ಡಿ’ ದರ್ಜೆ ನೌಕರರಾಗಿ ಖಾಯಂ ಗೊಳಿಸಲು ಒತ್ತಾಯಿಸಿ ಸಾಂಕೇತಿಕ ಮುಷ್ಕರ

4:17 PM, Monday, October 7th, 2013
Share
1 Star2 Stars3 Stars4 Stars5 Stars
(0 rating, 6 votes)
Loading...

D-group-protestಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ.ರಿ. ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇವರ ವತಿಯಿಂದ ಸಾಂಕೇತಿಕ ಮುಷ್ಕರವನ್ನು   ಅಕ್ಟೋಬರ್ 7, 2013ನೇ  ಸೋಮವಾರ ಮಂಗಳೂರು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು.

ಪರಮೇಶ್ವರ ನಾಯಕ್, ಕಂದಾಯ ಇಲಾಖೆ ನೌಕರರ ಸಂಘ ಅಧ್ಯಕ್ಷ ಮಾತನಾಡಿ ಸರಕಾರಿ ಆದೇಶ ಸಂಖ್ಯೆ : ಕಂ.ಇ.3.ಯು.ವಿ.ಎಸ್.77 ದಿನಾಂಕ 16/9/1998 ಮತ್ತು ಕಂ.ಇ.83.ಯು.ವಿ.ಎಸ್(1)82 ದಿನಾಂಕ 23/09/82ರ ಅನ್ವಯ ಸರಕಾರವು ರಾಜ್ಯದ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು.  ಈ ಹುದ್ದೆಯನ್ನು ಕಳೆದ 34 ವರ್ಷಗಳಿಂದಲೂ ಪದೇ ಪದೇ ಮುಂದುವರಿಸುತ್ತಿದ್ದರು. ಸರಕಾರದ ಆದೇಶದ ಸಂಖ್ಯೆ : ಕಂ.ಇ.ರಿ.20 ಎಸ್.ಸಿ. 2005, ಬೆಂಗಳೂರು ದಿ: 10/07/2007 ಅನ್ವಯ  ಆಗುವಂತೆ ಸರಕಾರವು ರಾಜ್ಯದಲ್ಲಿರುವ 10,450 ಗ್ರಾಮ ಸಹಾಯಕರ ಹುದ್ದೆಯನ್ನು ಕಂದಾಯ ಇಲಾಖೆಯಲ್ಲಿ ಖಾಯಂ ಹುದ್ದೆ ಎಂದು ಪರಿಗಣಿಸಿದೆ. ಆದರೆ ಕಳೆದ 34 ವರ್ಷಗಳಿಂದ ನಗರ ಮತ್ತು ಗ್ರಾಮಂತರ ಪ್ರದೇಶದಲ್ಲಿ ಜೀತದಾಳುಗಳಂತೆ ಸರಕಾರದ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿರುವ ಗ್ರಾಮ ಸಹಾಯಕರಿಗೆ ಮಾಸಿಕ ಸಂಭಾವನೆ ರೂ.7000/- ( ಏಳು ಸಾವಿರ) ಮಾತ್ರ ನೀಡುತ್ತಿದ್ದು, ಈಗಿನ ದುಬಾರಿ ವೆಚ್ಚದ ದಿನಗಳಲ್ಲಿ ಕುಟುಂಬ ಮುನ್ನಡೆಸುವುದು, ಆರೋಗ್ಯ ಸುಧಾರಣೆ, ಮಕ್ಕಳ ವಿದ್ಯಾಭ್ಯಾಸ ನಡೆಸುವುದು, ವೃದ್ಧರಾದ ತಂದೆ ತಾಯಿಯವರನ್ನು ಪೋಷಣೆ ಮಾಡುವುದು, ಈ ವೇತನದಿಂದ ಹೇಗೆ ತಾನೆ ಗ್ರಾಮ ಸಹಾಯಕರ  ಜೀವನ ನಡೆಸಲು ಸಾಧ್ಯ ? ಎಂಬುದನ್ನು ಸರಕಾರವು ಗಮನ ಹರಿಸಬೇಕಾದ ವಿಚಾರ ಎಂದು ಹೇಳಿದರು.

D-group-protestಶಂಕರ ಸುವರ್ಣ, ಗ್ರಾಮ ಲೆಕ್ಕಾಧಿಕಾರಿ ಸಂಘ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಈ ವಿಚಾರದಲ್ಲಿ ಸರಕಾರವನ್ನು ಹಲವಾರು ಬಾರಿ ಖಾಯಂ ಗೊಳಿಸಬೇಕೆಂದು ಮನವಿ ಮಾಡಿ ಕೊಂಡರು ಸರಕಾರವು ಸ್ಪಂದಿಸದೇ ನಮ್ಮನ್ನು ಕಡೆಗಣಿಸಿದೆ.   ಈಗಾಗಲೇ ಎಷ್ಟೋ ಮಂದಿ ಗ್ರಾಮ ಸಹಾಯಕರು ಸೇವೆಯಲ್ಲಿರುವಾಗಲೇ  ಮೃತಪಟ್ಟಿರುತ್ತಾರೆ. ಅವರಿಗೆ ಸರಕಾರದಿಂದ ಯಾವುದೇ ಸವಲತ್ತುಗಳಾಗಲೀ, ಪರಿಹಾರವಾಗಲೀ ನೀಡಿರುವುದಿಲ್ಲ. ಅದ್ದರಿಂದ ಸರಕಾರವು ಗ್ರಾಮ ಸಹಾಯಕರ ಹುದ್ದೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ  ಸಂಘದ ಕರೆಯ ಮೇರೆಗೆ ರಾಜ್ಯಾದ್ಯಾಂತ ದಿನಾಂಕ 07/10/2013ನೇ ಸೋಮವಾರ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷರು ಪ್ರಕಾಶ್ ಕೆ. ಮೂಡಬಿದ್ರಿ ,ಉಪಾಧ್ಯಕ್ಷರು ಉಮೇಶ್ ಪುತ್ತೂರು, ಗುಣಕರ ಹೆಗ್ಡೆ ಬೆಳ್ತಂಗಡಿ, ರಾಘವ ಗೌಡ ಬಂಟ್ವಾಳ , ಜೊತೆ ಕಾರ್ಯದರ್ಶಿ ಚಂದಪ್ಪ ಬಂಟ್ವಾಳ, ಸಂಜೀವ ನಾಯ್ಕ ಪುತ್ತೂರು ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ. ಕೃಷ್ಣಪ್ಪ ಪೂಜಾರಿ ಮಂಗಳೂರು ಉಪಸ್ಥಿತರಿದ್ದರು.

ಈ ಪ್ರತಿಭಟನೆಗೆ 345 ಗ್ರಾಮಸಹಾಯಕರು ಮತ್ತು ಗ್ರಾಮ ಲೆಕ್ಕಿಗರ ಸಂಘ ಬೆಂಬಲ ನೀಡಿದರು.

D-group-protest

D-group-protest

D-group-protest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English