ಮಂಗಳೂರು: ರಥಬೀದಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ಪ್ರಿಯಕರ ಮದನ್ ಮೃತ ದೇಹ ಮುಳಿಹಿತ್ಲು ಐಸ್ ಪ್ಲಾಂಟ್ ಸಮೀಪ ಇದೆ ಎಂಬ ಜ್ಯೋತಿಷಿಯೊಬ್ಬರ ಮಾಹಿತಿಯಂತೆ ಮನೆಯವರು ನಿನ್ನೆ ಹುಡುಕಾಟಕ್ಕೆ ಇಳಿ ಅಕ್ಷತಾಳ ಪ್ರಿಯಕರ ಮದನ್ ಕಳೆದ ಕೆಲ ವಾರಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯವರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಈ ವೇಳೆ ಕನ್ಯಾನದ ಜ್ಯೋತಿಷಿಯೊಬ್ಬರು ಮದನ್ ಬದುಕುಳಿದಿಲ್ಲ, ಆತ ಕೂಡ ಸಾವನ್ನಪ್ಪಿದ್ದಾನೆ. ಅವನ ಮೃತದೇಹ ಅಕ್ಷತಾಳ ಶವ ಸಿಕ್ಕ ಜಾಗದಲ್ಲೇ ಇದೆ. ಅಲ್ಲಿ ಹೋಗಿ ಹುಡುಕಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ ಮೊನ್ನೆ ಜ್ಯೋತಿಷಿಯ ಇಬ್ಬರು ಸಹಾಯಕರು ಬಂದು ನಿರ್ದಿಷ್ಟ ಸ್ಥಳದಲ್ಲಿ ಗುರುತು ಹಾಕಿ ಹೋಗಿದ್ದಾರೆ. ಹೀಗಾಗಿ ನಿನ್ನೆ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಮದನ್‌ನ ತಂದೆ ಮತ್ತು ಮಂಜೇಶ್ವರದ ಕೆಲ ಸ್ಥಳೀಯದಿದ್ದು, ಆದರೆ ಯಾವುದೇ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ.
ವ್ಯಕ್ತಿಗಳು ಬಂದು ಗುರುತು ಹಾಕಿದ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಮಧ್ಯಾಹ್ನದ ತನಕ ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ಶವ ಪತ್ತೆಯಾಗಿರಲಿಲ್ಲ. ಈ ವೇಳೆ ಮದನ್ ಶವ ಪತ್ತೆಯಾಗಿದೆ ಎಂಬ ಗಾಳಿ ಸುದ್ದಿ ಹಬ್ಬಿದ್ದು, ಮಾಧ್ಯಮದವರು ಮತ್ತು ಪೊಲೀಸರು ಕೂಡ ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಕೂಡ ಸ್ಥಳದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಹಾಗಾಗಿ ಇಲ್ಲಿನ ಕೆಲ ಸ್ಥಳೀಯರು ಮಧ್ಯಾಹ್ನದ ವೇಳೆಗೆ ನೀರಿನ ಹರಿವು ಹೆಚ್ಚಾಗಿರುತ್ತದೆ. ಸಂಜೆ ಐದು ಘಂಟೆಯ ನಂತರ ಬಂದು ಶೋಧ ನಡೆಸಿ ಎಂದು ಸೂಚಿಸಿದ್ದಾರೆ.
ಹೀಗಾಗಿ ಮದನ್ ಮನೆಯವರು ಸಂಜೆ ಐದರ ಸುಮಾರಿಗೆ ನದಿ ಕಿನಾರೆ ಯಲ್ಲಿ ಮತ್ತೆ ಹುಡುಕಾಟ ನಡೆಸಿದ್ದು, ಈ ವೇಳೆ ಎಷ್ಟೇ ಶೋಧ ನಡೆಸಿದರೂ ಯಾವುದೇ ಶವ ಪತ್ತೆಯಾಗಿಲ್ಲ. ಈ ವೇಳೆ ಮದನ್ ತಂದೆ ದೂರವಾಣಿ ಮೂಲಕ ಜ್ಯೋತಿಷಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದ ದೃಶ್ಯವೂ ಕಂಡುಬಂತು. ಆದರೆ ಎಷ್ಟೇ ಹುಡುಕಿದರೂ ಫಲಿತಾಂಶ ಮಾತ್ರ ಶೂನ್ಯ. ಕೊನೆಗೆ ಹುಡುಕಿ-ಹುಡುಕಿ ಸುಸ್ತಾಗಿ ಖಾಲಿ ಕೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ಇದೊಂದು ವದಂತಿಯಷ್ಟೇ ಎಂದಿದ್ದು, ಯಾವುದೇ ಮೃತದೇಹ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Click this button or press Ctrl+G to toggle between Kannada and English