ಮಂಗಳೂರು: ದುಬೈಯಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ಹೇಳಲಾಗಿತ್ತು. ಆದರೆ ಅವರಿಗೆ ಕೊಟ್ಟಿದ್ದು ಗಿಡ ನೆಡುವ ಕೆಲಸವನ್ನು. ಇತ್ತ ಕೊಟ್ಟ ಹಣವೂ ಇಲ್ಲದೆ, ಅತ್ತ ಕೆಲಸವೂ ಇಲ್ಲದೆ ಕನಸು ಕಟ್ಟಿಕೊಂಡು ವಿದೇಶಕ್ಕೆ ಹಾರಿದವರು ಇದೀಗ ಬರಿಗೈಲಿ ಮರಳಿದ್ದರೆ. ದಕ್ಷಿಣ ಕನ್ನಡ, ಉಡುಪಿ ಮೂಲದ 2೧ ಮಂದಿ ಯುವಕರು ವಂಚನೆಗೆ ಒಳಗಾಗಿದ್ದು, ಅವರಲ್ಲಿ ಒಂಬತ್ತು ಮಂದಿ ಸಾಲ ಮಾಡಿ ಊರಿಗೆ ವಾಪಸ್ ಆಗಿದ್ದರೆ ಇನ್ನುಳಿದವರು ವಿದೇಶಿ ನೆಲದಲ್ಲಿ ಬೀದಿಪಾಲಾಗಿದ್ದಾರೆ.
ಕೊಪ್ಪದ ಅಬ್ದುಲ್ ಜಾವೇದ್, ಮನೋಹರ ಕೈರೋಚ್, ಹೊನ್ನಾವರದ ಜಗದೀಶ ಮುರ್ಡೇಶ್ವರ, ಉಳ್ಳಾಲದ ಅಶ್ರಫ್ ಮುಹಮ್ಮದ್, ಮುರ್ಡೇಶ್ವರದ ರಹೀಂ, ಉಪ್ಪಿನಂಗಡಿಯ ಬಶೀರ್ ಮುಹಮ್ಮದ್, ನೌಶಾದ್ ಉಳ್ಳಾಲ, ಪಡುಬಿದ್ರಿಯ ಜಕಾರಿಯಾ ಹುಸೈನ್ ಹಾಗೂ ಕುಂದಾಪುರದ ರಾಘವ ಪೂಜಾರಿ ಎಂಬವರು ಮಂಗಳೂರಿನ ಸಂಸ್ಥೆಯೊಂದರ ಮೂಲಕ ದುಬೈಗೆ ತೆರಳಿದ್ದರು. ಅವರಿಂದ ಒಟ್ಟು 9೦ ಸಾವಿರ ರೂ. ವಸೂಲಿ ಮಾಡಲಾಗಿತ್ತು. ಅಲ್ಲಿ ರಸ್ತೆ ಬದಿ ಗಿಡ ನೆಡುವ ಕೆಲಸವನ್ನು ಅವರಿಗೆ ವಹಿಸಲಾಗಿತ್ತು.
ಅಲ್ಲಿ ಅನ್ನ, ನೀರು ಇಲ್ಲದೆ ದಿನ ಕಳೆದ ಇವರು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ವಾಪಸ್ ಬಂದಿದ್ದಾರೆ. ಇನ್ನುಳಿದವರು ಅಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English