ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

2:58 PM, Friday, October 11th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

virendra-hegde

ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ವತಿಯಿಂದ ನಡೆಯುವ ವಿಶ್ವ ವಿಖ್ಯಾತ ವರ್ಣರಂಜಿತ, ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಗುರುವಾರ ಪದ್ಮಭೂಷಣ, ರಾಜರ್ಷಿ, ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಮಂಗಳೂರು ನಗರಕ್ಕೆ ಬಹಳ ಮಹತ್ತರವಾದ ಕೊಡುಗರಯನ್ನು ನೀಡಿದೆ. ಹಾಗಾಗಿ ನಗರಕ್ಕೆ ಯಾರೇ ಬಂದರೂ ಒಮ್ಮೆ ಅವರು ಈ ದೇವಾಲಯ ನೋಡಲೇ ಬೇಕು. ಹಿಂದಿನ ಇತಿಹಾಸ ವೀಕ್ಷಿಸಿದರೆ ಅಂದಿನ ದೇವಾಲಯಗಳ ಶಿಲಾನ್ಯಾಸವು ಅಷ್ಟೇ ಅದ್ಬುತವಾಗಿತ್ತು. ಯಾಕೆ ಅಷ್ಟೊಂದು ವಿಭಿನ್ನವಾಗಿ ನಿರ್ಮಿಸುತ್ತಿದ್ದರೆಂದರೆ ದೇವರು ಇರುವ ಸ್ಥಳವು ಸಾಮಾನ್ಯ ಮನುಷ್ಯನಿಗು ಆ ತರಹದ ಮನೆ ಕಟ್ಟಿಕೊಳ್ಳಲು ಸಾಧ್ಯವಿರಬಾರದೆಂದು. ಹಾಗಾಗಿ ಈ ದೇವಾಲಯವು ಅದೇ ತರಹ ಬಹಳ ವರ್ಣರಂಜಿತವಾಗಿದ್ದು ವಿಭಿನ್ನ ಶೈಲಿಯಲ್ಲಿದೆ. ದೇವಾಲಯದ ಸುತ್ತಮುತ್ತಲೂ ಭಗವಂತನ ಕಥೆಗಳನ್ನು ತಿಳಿಸುವ ಫಲಕಗಳಿವೆ. ಶಿವನ ನಾನಾ ಅವತಾರಗಳ ಮೂರ್ತಿಶಿಲ್ಪಗಳಿವೆ. ಹಾಗಾಗಿ ಬಹುಶಃ ಮಂಗಳೂರಿನಲ್ಲಿ ಯಾರ ಮನೆಯೂ ಈ ಕ್ಷೇತ್ರದ ತರಹ ಇರದು ಎಂದು ತಿಳಿಸಿದರು.

ಮೈಸೂರು ದಸರ ಸರಕಾರದ ಆಶ್ರಯದಲ್ಲಿ ನಡೆದರೆ, ಮಂಗಳೂರು ದಸರವು ಜನತೆಯ ಆಶ್ರಯದಲ್ಲಿ ನಡೆಯುತ್ತಿದೆ. ವಿದೇಶಕ್ಕೆ ಹೋದವರು ದೇಶದ ಮೂಲ ಸಂಸ್ಕೃತಿಯನ್ನು ಮರೆಯಬಾರದು. ವಿಶ್ವದಲ್ಲಿ ಭಾರತವನ್ನು ಗುರುತಿಸುವುದು ಹಣದಿಂದಲ್ಲ ಬದಲಿಗೆ ದೇಶದ ಧರ್ಮ ಸಂಸ್ಕೃತಿಯಿಂದ. ಸ್ವಾತಂತ್ರ ಸಿಕ್ಕಿದ ಮೇಲೆ ಸಮಾನತೆ ಸಿಕ್ಕಿರುವುದು ಭಾರತದಲ್ಲಾದ ಮುಖ್ಯ ಬಲಾವಣೆ. ನಾವು ಒಳಿತಿಗಾಗಿ ಸ್ತ್ರೀ ರೂಪವನ್ನು ಗೌರವಿಸುತ್ತೇವೆ. ಅಂತಯೇ ಎಲ್ಲಾ ಶುಭ ಕಾರ್ಯಗಳಿಗೂ ಸ್ತ್ರೀಯನ್ನೇ ಪೂಜಿಸುತ್ತೇವೆ. ನಮಗೆ ಸಂಬಂಧ ಪಟ್ಟ ಎಲ್ಲಾ ಒಳಿತು ವಸ್ತುಗಳನ್ನು ಸ್ತ್ರೀಗೆ ಹೋಲಿಸುತ್ತೇವೆ. ಈ ಸ್ತ್ರೀ ಆದಿಶಕ್ತಿಯ ಸ್ವರೂಪಿಣಿ. ಹಾಗಾಗಿ ನವರಾತ್ರಿಯ ಈ ಘಳಿಗೆಯಲ್ಲಿ ನಮ್ಮಲ್ಲಿರುವ ಎಲ್ಲಾ ಕೆಟ್ಟ ಗುಣಗಳನ್ನು ಹೊರಹಾಕಬೇಕು. ಸಾತ್ವಿಕತೆಯ ಕಡೆಗೆ ನಮ್ಮನ್ನು ಧರ್ಮ, ಭಕ್ತಿ, ಶೃದ್ದೆ ಕೊಂಡೊಯ್ಯುತ್ತದೆ. ನಗರದ ಎಲ್ಲಾ ಜನತೆಗೆ ನವಶಕ್ತಿಗಳ ಅನುಗ್ರಹ ಸಿಗಲಿ ಎಂದು ಶುಭಹಾರೈಸಿದರು.

virendra-hegde

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಇಂದು ಶಿರಡಿ ಸಾಯಿಬಾಬಾನ ಪ್ರತಿಷ್ಟೆ ಮಾಡಲಾಗಿದೆ. ಪೂಜ್ಯರಾದ ಹೆಗ್ಗಡೆಯವರು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ತೋರಿಸಿದ್ದಾರೆ. ವಿದ್ಯಾದಾನ, ಆರ್ಥಿಕದಾನ ಮಾಡಿ ಬಡವರ ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ. ಜನರ ಸೇವೆ ಮಾಡಬೇಕೆಂಬ ಧ್ಯೇಯವನ್ನಿಟ್ಟುಕೊಂಡು, ಮಹಿಳೆಯರನ್ನು ಪೂಜ್ಯತಾ ಭಾವನೆಯಿಂದ , ನೋಡುತ್ತಿದ್ದಾರೆ. ಮಂಜುನಾಥನ ಸೇವೆಯೇ ಜನತೆ ಸೇವೆ ಎಂಬ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಧಾರ್ಮಿಕ ಕ್ಷೇತ್ರದಲ್ಲಿ ಜನರಿಗೆ ಮಾರ್ಗದರ್ಶನ ಮಾಡಿ, ದೇವರಲ್ಲಿ ಭಕ್ತಿ ಮೂಡಿಸುವಂತಹ ಕೆಲಸಮಾಡುತ್ತಿದ್ದಾರೆ.ಮುಂದೊಂದು ದಿನ ಜನರು ಅವರಿಗೆ ಮಂದಿರವನ್ನು ನಿರ್ಮಿಸಿ ಅವರನ್ನು ಪೂಜಿಸಲಿದ್ದಾರೆ. ಹಾಗೂ ಅವರು ಮಾಡಿದ ಸೇವೆಗೆ ಸರಕಾರದಿಂದ ಭಾರತ ರತ್ನ ಪ್ರಶಸ್ತಿ ಕೊಡುವ ಕೆಲಸವಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ದ.ಕ ಉಸ್ತುವಾರಿ ಸಚಿವರಾದ ಬಿ.ರಮನಾಥ ರೈ, ಕರ್ನಾಟಕ ಸರಕಾರದ ಯುವಜನ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವರಾದ ಅಭಯ್ ಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ , ಶಂಕುತಳ ಶೆಟ್ಟಿ, ಜೆ.ಆರ್.ಲೊಬೋ, ಕರ್ನಾಟಕ ರಾಜ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಜೆ.ಪಿ.ನಾರಾಯಣ ಸ್ವಾಮಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾದ ಜಯ ಸಿ ಸುವರ್ಣ, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಸಭೆಯ ಅಧ್ಯಕ್ಷರಾದ ಕೆ.ಪಿ.ನಂಜುಂಡಿ, ಹಾಗೂ ಕ್ಷೇತ್ರದ ನವೀಕರಣ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ಆರತಿ ಕೃಷ್ಣ, ಮಾಲತಿ.ಜೆ.ಪೂಜಾರಿ ಇವರುಗಳು ಭಾಗವಹಿಸಿದ್ದರು.

ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷರಾದ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ ಆರ್, ಕಾರ್ಯದರ್ಶಿ ಬಿ.ಮಾದವ ಸುವರ್ಣ,, ಟ್ರಸ್ಟಿಗಳಾದ ಬಿ.ಕೆ.ತಾರನಾಥ, ರವಿಶಂಕರ್ ಮಿಜಾರ್, ಮಹೇಶ್ಚಂದ್ರ ಹಾಗೂ ಇನ್ನಿತ್ತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  virendra-hegde

virendra-hegde

virendra-hegde

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English