ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶಾರದೇ ಸಹಿತ ನವ ದುರ್ಗೆಯರ ಪ್ರತಿಷ್ಠಾಪನೆ

Monday, October 16th, 2023
Kudroli-Devasthana

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಮತ್ತು ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಮಹಾಗಣಪತಿ, ಶಾರದೆ, ಆದಿಶಕ್ತಿಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ ಪ್ರತಿಷ್ಠಾಪನೆ ಪೂಜೆ ರವಿವಾರ ಜರುಗಿತು. ಗಣಪತಿ, ಆದಿಶಕ್ತಿ ಮತ್ತು ನವದುರ್ಗೆಯರನ್ನು ತಂದ ಬಳಿಕ ದೇವಸ್ಥಾನದಲ್ಲಿ ಗುರುಪ್ರಾರ್ಥನೆ, ಕಲಶ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು. ಬಳಿಕ ಸ್ಯಾಕ್ಸ್‌ಫೋನ್ ತಂಡ, ಬ್ಯಾಂಡ್, ಚೆಂಡೆ ತಂಡ, ಹುಲಿ ವೇಷದೊಂದಿಗೆ ಶಾರದೆ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ […]

ನವರಾತ್ರಿ – ಶಸ್ತ್ರಾಸ್ತ್ರ, ವಾಹನಗಳಿಗೆ ಆಯುಧ ಪೂಜೆ

Saturday, October 24th, 2020
Ayudha Pooja

ಮಂಗಳೂರು : ಆಯುಧ ಪೂಜೆ ನವರಾತ್ರಿ ಹಬ್ಬದ ದಿನಗಳಲ್ಲಿ ಬರುವ ಒಂದು ವಿಶೇಷ ದಿನ. ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಯಲ್ಲಿ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ ಅದನ್ನೇ ಆಯುಧ ಪೂಜೆ ಎಂದು ಕರೆಯಲಾಗುತ್ತದೆ ನವರಾತ್ರಿಯ ಸಂದರ್ಭದಲ್ಲಿ ಬರುವ ಆಯುಧ ಪೂಜೆಯ ದಿನ ಜನರು ಜೀವನೋಪಾಯಕ್ಕಾಗಿ ಬಳಸುವ ಸಾಧನಗಳು ಮತ್ತು ವಸ್ತುಗಳನ್ನು ಪೂಜಿಸಿವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಿಂದೂ ಸಮುದಾಯದ ಪೂಜಾ ಸಾಧನಗಳು, ವಿದ್ಯುತ್ ಉಪಕರಣಗಳು, ವಾಹನಗಳು ಮತ್ತುತಮ್ಮ ಜೀವನೋಪಾಯವನ್ನು ಗಳಿಸಲು ಬಳಸುವ ಉಪಕರಣಗಳಿಗೆ […]

ದೇವಿಯರ ಹಬ್ಬ “ನವರಾತ್ರಿ – ದಸರಾ”

Saturday, October 24th, 2020
Nava durge

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ `ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ 9 ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಕೂರಿಸಿ ಪೂಜಿಸಲಾಗುತ್ತದೆ. ವಿಜಯದಶಮಿಯ ದಿನ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ, ಪಂಜಾಬ್ನಲ್ಲಿ ಭಕ್ತರು 7 ದಿನಗಳ ಕಾಲ ಉಪವಾಸ ಮಾಡಿದ ನಂತರ ಎಂಟನೇ ದಿನ ಪುಟ್ಟ್ […]

ಕರಾವಳಿಯ ದೇವಿ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ಆರಂಭ

Monday, September 30th, 2019
dhevi

ಮಂಗಳೂರು : ಕರಾವಳಿಯ ಪ್ರಮುಖ ದೇವಿ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ರವಿವಾರದಿಂದ ಆರಂಭವಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಸಡಗರ ಆರಂಭವಾಗಿದ್ದು, ಮೊದಲ ದಿನವಾದ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಗಳಿಗೆ ಆಗಮಿಸಿದರು. “ಮಂಗಳೂರು ದಸರಾ’ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ದಿನಿ, ಉರ್ವಾ ಶ್ರೀ ಮಾರಿಯಮ್ಮ, ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನ, ಉಡುಪಿ ನಗರದ […]

ಶ್ರೀ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

Friday, October 19th, 2018
mangaladevi

ಮಂಗಳೂರು: ನವರಾತ್ರಿಯ ಕಡೆಯ ದಿನವಾದ ಇಂದು ವಿಜಯದಶಮಿ ಆಚರಿಸಲಾಗುತ್ತದೆ. ಶುಭಕಾರ್ಯಗಳಿಗೆ ಈ ದಿನ ಸೂಕ್ತವೆಂಬ ನಂಬಿಕೆಯಿದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪ್ರಶಸ್ತವಾದ ದಿನ ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಇಂದು ಮಂಗಳಾದೇವಿ ದೇವಾಲಯದಲ್ಲಿ ಮಕ್ಕಳ ಅಕ್ಷರಾಭ್ಯಾಸ ಪೂಜೆಯು ಬೆಳಗ್ಗೆ 9 ಗಂಟೆಯಿಂದ ಶುರುವಾಗಿ ಮಧ್ಯಾಹ್ನ 12 ಗಂಟೆವೆರೆಗೂ ನಡೆಯಿತು. ಈ ಸಂದರ್ಭ ಸುಮಾರು 300 ಪುಟಾಣಿ ಮಕ್ಕಳು ಅಕ್ಷರಾಭ್ಯಾಸ ಪೂಜೆಯಲ್ಲಿ ಭಾಗವಹಿಸಿ, ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. […]

ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರ

Friday, September 22nd, 2017
Mangaladevi

ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ನವರಾತ್ರಿ ಮಹೋತ್ಸವ ಆರಂಭಗೊಂಡಿ ದೆ. ಮಂಗಳಾದೇವಿಯಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಸೆಪ್ಟೆಂಬರ್ 25 ರಂದು ಲಲಿತಪಂಚಮಿ, 26 ರಂದು ಚಂಡಿಕಾ ಹೋಮ ಸಣ್ಣ ರಥೋತ್ಸವ 30 ರಂದು ವಿಜಯದಶಮಿ, ವಿದ್ಯಾರಂಭ, ರಾತ್ರಿ ರಥೋತ್ಸವ ನಡೆಯಲಿದೆ. ಮತ್ತು ಅಕ್ಟೊಬರ್ 1 ರಂದು ಅವಬೃತ ಮಂಗಳ ಸ್ನಾನ ಹಾಗೂ  ನವರಾತ್ರಿ ಮಹೋತ್ಸವದ ಸಮಾರೋಪ ನಡೆಯಲಿದೆ. ಈ ದೇವಾಲಯವು 9 ನೇ ಶತಮಾನದಲ್ಲಿ ಅಲುಪಾ ರಾಜವಂಶದ ಅತ್ಯಂತ ಪ್ರಸಿದ್ಧ ರಾಜ […]

ಹೆಣ್ಣುಮಕ್ಕಳಿಗೆ ಚುಡಾಯಿಸುತ್ತಿದ್ದ ವ್ಯಕ್ತಿಗೆ ಪೊಲೀಸರಿಂದ ಧರ್ಮದೇಟು

Saturday, October 15th, 2016
Traffic police

ಮಂಗಳೂರು: ಸಂಚಾರಿ ಪೊಲೀಸ್‌ ಅಧಿಕಾರಿಯೊಬ್ಬರು ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೀಗ ವೈರಲ್ ಆಗುತ್ತಿದೆ. ನವರಾತ್ರಿ ಅಂಗವಾಗಿ ವೆಂಕಟರಮಣ ದೇವಸ್ಥಾನದ ಬಳಿ ನಡೆದ ಶಾರದೋತ್ಸವ ಮೆರವಣಿಗೆಯ ವೇಳೆ ಅತಿರೇಕವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಸಂಚಾರಿ ಪಶ್ಚಿಮ ವಿಭಾಗದ ಪೇದೆ ಗಜೇಂದ್ರ ಎನ್ನುವವರು ಥಳಿಸಿದ ದೃಶ್ಯಾವಳಿ ಇದೀಗ ಪೊಲೀಸ್ ಕಮೀಷನರ್ ಅವರಿಗೂ ತಲುಪಿದೆ. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಸಂಚಾರಿ ಎಸಿಪಿ ತಿಲಕ್‌ಚಂದ್ರ ಅವರಿಗೆ ಸೂಚಿಸಿದ್ದಾರೆ. ರಥಬೀದಿ ಬಳಿ ಶಾರದೋತ್ಸವದಂಗವಾಗಿ ನಡೆದ ಶೋಭಾಯಾತ್ರೆಯ ಸಂದರ್ಭ ಯುವಕರ […]

ನವರಾತ್ರಿ ಸಂದರ್ಭ 4 ದಿನಗಳ ಕಾಲ ಅರಮನೆ ಪ್ರವೇಶಕ್ಕೆ ನಿರ್ಬಂಧ

Monday, September 26th, 2016
mysore-aramane

ಮೈಸೂರು: ನವರಾತ್ರಿಯಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ. ಅ. 1ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಖಾಸಗಿ ದರ್ಬಾರ್ ಹಾಗೂ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಹಾಗಾಗಿ ಅರಮನೆ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, 2.30ರ ನಂತರ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವಿರುತ್ತದೆ. ಅಕ್ಟೋಬರ್ 10ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಅರಮನೆಯಲ್ಲಿ ಆಯುಧ ಪೂಜೆ ನಡೆಯಲಿದ್ದು, 1.30ರ […]

ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

Friday, October 11th, 2013
virendra-hegde

ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ವತಿಯಿಂದ ನಡೆಯುವ ವಿಶ್ವ ವಿಖ್ಯಾತ ವರ್ಣರಂಜಿತ, ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಗುರುವಾರ ಪದ್ಮಭೂಷಣ, ರಾಜರ್ಷಿ, ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಮಂಗಳೂರು ನಗರಕ್ಕೆ ಬಹಳ ಮಹತ್ತರವಾದ ಕೊಡುಗರಯನ್ನು ನೀಡಿದೆ. ಹಾಗಾಗಿ ನಗರಕ್ಕೆ ಯಾರೇ ಬಂದರೂ ಒಮ್ಮೆ ಅವರು ಈ ದೇವಾಲಯ ನೋಡಲೇ ಬೇಕು. ಹಿಂದಿನ […]