ಮಂಗಳೂರು: ಸೌಜನ್ಯ ಹತ್ಯೆ ಪ್ರಕರಣವಾಗಿ ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿ ಮಾತುಗಳು ಕೇಳಿಬರುತ್ತಿದೆ. ಇದನ್ನು ಶ್ರೀರಾಮಸೇನೆ ಸಹಿಸುವುದಿಲ್ಲ, ಅದಕ್ಕಾಗಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಶ್ರೀರಾಮ ಸೇನೆ ರಾಜ್ಯ ಉಪಾ ಧ್ಯಕ್ಷ ಕುಮಾರ್ ಮಾಲೆಮಾರ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೆಮಾರ್ ಅವರು, ಸೌಜನ್ಯ ಸಾವಿನ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಧ್ವನಿ ಎತ್ತಿದ್ದಾರೆ. ಆದರೆ ಇದನ್ನು ಖಂಡಿಸುವವರು ತುಂಬಾ ಜನರಿದ್ದಾರೆ. ಕರಾವಳಿಯಲ್ಲಿ ಹುಡುಗಿ ಯರು ಗಾಂಜಾ, ಹಫಿಮ್. ಚರಸ್‍ಗೆ ಬಲಿಯಾಗುವಾಗ ಅದನ್ನು ತಡೆಯಲು ದಾಳಿ ಮಾಡಿದರೆ ಎಷ್ಟೋ ಬುದ್ದಿ ಜೀವಿಗಳು ಕೇಸನ್ನು ಸಿಐಡಿ, ಸಿಬಿಐಗೆ ನೀಡಿ ಎಂದು ಪ್ರತಿಭಟನೆ ಮಾಡುತ್ತಾರೆ. ಆದರೆ ಹಣವಂತರು ಸೌಜನ್ಯ ಎಂಬ ಅಮಾಯಕ ಹುಡುಗಿಯನ್ನು ಕೊಲೆ ಮಾಡಿದರೆ ಈ ಕೇಸನ್ನು ಸಿಬಿಐಗೆ ನೀಡಿ ಎಂದು ಹೇಳಲು ಯಾವುದೇ ಬುದ್ದಿ ಜೀವಿಗಳು ಮುಂದೆಬರುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರಕಾರ ಈ ಕೊಲೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಕಾಂಗ್ರೆಸ್ ಸರಕಾರವೂ ಕಣ್ಣು ಮುಚ್ಚಿ ಕೂತಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಆದೇಷ್ಟು ಬೇಗ ಆರೋಪಿಗಳೀಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಲ್ಪಸಂಖ್ಯಾತರಿಗೆ ಮಂಚ, ಬೆಡ್, ತಲೆದಿಂಬು ಹಾಗೂ ಎರಡನೇ ಮದುವೆ ಆಗುವವರಿಗೆ 50,000 ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ಕೇವಲ ಅಲ್ಪಸಂಖ್ಯಾತರು ಮಾತ್ರ ಕಾರಣವಲ್ಲ, ಬರೀ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದರೆ ಬೀದಿಗಿ ಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀವನ್ ನೀರುಮಾರ್ಗ, ಪ್ರದೀಪ್ ಮೂಡುಶೆಡ್ಡೆ, ಕೀರ್ತನ್ ಅಡ್ಯಾರ ಪದವು, ಗಣೇಶ್ ಅತ್ತಾವರ್ ಉಪಸ್ಥಿ ತರಿದ್ದರು.
Click this button or press Ctrl+G to toggle between Kannada and English