ಅಕ್ರಮ ಗೋಮಾಂಸ ಮಾರಾಟ: ಅಧಿಕಾರಿಗಳ ದಾಳಿ

Friday, April 16th, 2021
cow meat

ಚಿಕ್ಕಮಗಳೂರು : ಶುಕ್ರವಾರ ಬೆಳ್ಳಗ್ಗೆ ಸುಮಾರು 7- 40 ರ ಸಮಯ, ನಗರಸಭೆ ಆಯುಕ್ತರಾದ ಬಸವರಾಜ್ ಹಾಗೂ ಕೆಲ ಅಧಿಕಾರಿಗಳು ಮತ್ತು ಮೇಸ್ತ್ರಿಗಳಾದ ಅಣ್ಣಯ್ಯ, ರಮೇಶ್, ಮುರ್ಗೆಶ್ ಇನ್ನಿತರರು ನಗರದ ತಮಿಳ್ ಕಾಲೋನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಕೊಂಡಿದ್ದ 200 ಕೆ.ಜಿ.ಗೂ ಅಧಿಕ ಗೋಮಾಂಸವನ್ನು ಸೀಜ್ ಮಾಡಿ ಅಂಗಡಿಯನ್ನೂ ಸೀಲ್ ಮಾಡಿದ್ದಾರೆ. ಗೋಮಾಂಸದ ಅಂಗಡಿಗೆ ಸಂಬಂಧ ಪಟ್ಟವರು ಪರಾರಿಯಾಗಿದ್ದಾರೆಂದು ನಗರಸಭೆಯವರು ಮಾಹಿತಿ ನೀಡಿದ್ದಾರೆ. ಇವತ್ತಿನ ನಗರಸಭೆಯ ಕಾರ್ಯಾಚರಣೆಯನ್ನು ಶ್ರೀರಾಮಸೇನೆಯವರು ತುಂಬು ಹೃದಯದಿಂದ ಹೊಗಳಿದ್ದಾರೆ. ವರದಿ : ಶಂಭು ಮೆಗಾಮೀಡಿಯಾ […]

ಗರ್ಭ ಧರಿಸಿದ ದನದ ಕಾಲು ಕತ್ತರಿಸಿದ ಆರೋಪಿಯ ಬಂಧನ, ಉಳಿದ ಮೂವರಿಗೆ ಶೋಧ

Sunday, April 19th, 2020
ಗರ್ಭ ಧರಿಸಿದ ದನದ ಕಾಲು ಕತ್ತರಿಸಿದ ಆರೋಪಿಯ ಬಂಧನ,  ಉಳಿದ ಮೂವರಿಗೆ ಶೋಧ

ತೀರ್ಥಹಳ್ಳಿ: ಗರ್ಭ ಧರಿಸಿದ  ದನದ ಎರಡೂ ಕಾಲು ಕಡಿದು ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ತೀರ್ಥಹಳ್ಳಿ  ಪೊಲೀಸರು ಬಂಧಿಸಿದ್ದಾರೆ.  ಉಳಿದ ಮೂರು ಮಂದಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಬಾಳೇಬೈಲು ಸರ್ಕಾರಿ ಹಿ.ಪ್ರಾ.ಶಾಲೆ ಸಮೀಪ ಶುಕ್ರವಾರ ರಾತ್ರಿ ಗರ್ಭ ಧರಿಸಿದ  ದನವೊಂದರ ಹಿಂದಿನ ಎರಡು ಕಾಲುಗಳನ್ನು ಬರ್ಬರವಾಗಿ ಕಡಿದು ಕಸಾಯಿ ಖಾನೆಗೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ಮನೆಯವರು ಎಚ್ಚರಗೊಂಡು ನೋಡಿದ್ದರಿಂದ ದನವನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಆರೋಪಿಗಳ ಪತ್ತೆ ಕಾರ್ಯಚರಣೆ ನಡೆಸಿದ ತೀರ್ಥಹಳ್ಳಿ ಡಿವೈಎಸ್ಪಿ ಡಾ.ಸಂತೋಷ್ ಹಾಗೂ […]

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುತ್ತಿಗೆ ಯತ್ನ: ಮಂಗಳೂರಲ್ಲಿ ಕಾರ್ಯಕರ್ತರ ಬಂಧನ

Saturday, November 10th, 2018
bajarangdal

ಮಂಗಳೂರು: ನಗರದಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಉರ್ವಸ್ಟೋರ್ನಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆಯುವ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ. ಮೆರವಣಿಗೆ ಮೂಲಕ ಟಿಪ್ಪು ವಿರುದ್ಧ ಘೋಷಣೆ ಕೂಗುತ್ತಾ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರನ್ನು ಉರ್ವ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಂಧಿಸಲಾಯಿತು. ಬಳಿಕ ಮತ್ತೊಂದು ಮೆರವಣಿಗೆ ಮೂಲಕ ಬಂದ ಶ್ರೀರಾಮಸೇನೆ ಕಾರ್ಯಕರ್ತರನ್ನು […]

ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲಿರುವ ಶ್ರೀರಾಮಸೇನೆ ಅಭ್ಯರ್ಥಿಗಳು

Tuesday, April 25th, 2017
pramod Muthalik

ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ  ಶ್ರೀರಾಮಸೇನೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ನಾವು ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಈ ಕುರಿತು ಅಂತಿಮ ನಿರ್ಧಾರವಾಗಿಲ್ಲ ಎಂದು ಪ್ರಮೋದ್ ಮುತಾಲಿಕ್  ಹೇಳಿದರು. ಹಿಂದೂಗಳ ಮೇಲೆ ದೌರ್ಜನ್ಯ, ಹಿಂದೂ ನಾಯಕರ ಕೊಲೆ ಯತ್ನದ ಸಂಚು ನಡೆಯತ್ತಿದೆ. ಇದರ ಹಿಂದೆ ಪಿಎಫ್ಐ ಇದೆ. ರಾಜ್ಯ ಸರ್ಕಾರ ಪಿಎಫ್ಐ ನಿಷೇಧಿಸುವ ಬದಲು ಪ್ರೋತ್ಸಾಹಿಸುತ್ತಿದೆ. ಹಿಂದೂ ಮುಖಂಡರುಗಳ ಹತ್ಯೆ ಸರ್ಕಾರಿ ಪ್ರಾಯೋಜಕತ್ವದಲ್ಲಿ […]

ಶ್ರೀರಾಮಸೇನೆ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು: ಮಹೇಶ್ ಕುಮಾರ್

Friday, August 5th, 2016
SRS

ಮಂಗಳೂರು: ಶಾಲೆಗಳಲ್ಲಿ ಅರೆಬಿಕ್ ಕಲಿಸುವುದನ್ನು ಶ್ರೀರಾಮಸೇನೆ ಖಂಡಿಸಿದ್ದು, ಬೊಂಡಂತಿಲ ಶಾಲೆಯಲ್ಲಿ ಅರೆಬಿಕ್ ಕಲಿಸದಂತೆ ಮನವಿ ಮಾಡಿದ್ದನ್ನೇ ನೆಪಮಾಡಿಕೊಂಡು ಅಲ್ಲಿಗೆ ಹೋದವರ ವಿರುದ್ಧ ಕೇಸ್‌‌ ದಾಖಲಿಸಿ ಬಂಧಿಸಿರುವವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕೊಪ್ಪ, ಅನುದಾನಿತ ಶಾಲೆಯಲ್ಲಿ ಸರ್ವಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವಾಗ ಒಂದು ಧರ್ಮಕ್ಕೆ ಸೀಮಿತವಾದ ಭಾಷೆಯನ್ನು ಕಾನೂನಿಗೆ ವಿರುದ್ಧವಾಗಿ ಕಲಿಸುವುದು ಸರಿಯಿಲ್ಲ. ಇವರಿಗೆ ಶಿಕ್ಷಣ ಇಲಾಖೆಯಿಂದ ಕೂಡಾ ಯಾವುದೇ ಅನುಮತಿ ಪತ್ರ ನೀಡಿಲ್ಲ. ಅರೆಬಿಕ್ ಕಲಿಸುವುದಾದಲ್ಲಿ ಹಿಂದೂ […]

ಸೆಂಟ್ ಥಾಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀರಾಮಸೇನೆ ಕಾರ್ಯಕರ್ತರ ದಾಳಿ

Wednesday, August 3rd, 2016
Thomas-Kannada-Medium-School

ಮಂಗಳೂರು: ನೀರುಮಾರ್ಗ ಸಮೀಪದ ಬೊಂಡಂತಿಲ ಸೆಂಟ್ ಥಾಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅರೇಬಿಕ್ ಭಾಷೆ ಕಲಿಸುವುದನ್ನು ವಿರೋಧಿಸಿ ದಾಳಿ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಸುಮಾರು 30 ಮಂದಿ ಶಾಲೆಗೆ ನುಗ್ಗಿ ಮಕ್ಕಳ ಪುಸ್ತಕಗಳನ್ನು ಕಿತ್ತುಕೊಂಡಿದ್ದಲ್ಲದೆ, ಮಕ್ಕಳಿಗೆ ಅರೇಬಿಕ್ ಕಲಿಸದಂತೆ ಶಿಕ್ಷಕರಿಗೆ ಧಮ್ಕಿ ಹಾಕಿದ್ದರು. ಈ ಸಂಬಂಧ ಶಿಕ್ಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೊಂಡಂತಿಲ ನಿವಾಸಿಗಳಾದ ಸುನಿಲ್, ನಿತಿನ್, ರಾಜೇಶ್, ರಾಘವೇಂದ್ರ, ರವಿ, ನಿತಿನ್ ಶೆಟ್ಟಿ, ಕಿಶೋರ್, ಸನಿಲ್, […]

ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ : ಶ್ರೀರಾಮ ಸೇನೆ

Saturday, October 19th, 2013
shri-ram-sena

ಮಂಗಳೂರು: ಸೌಜನ್ಯ ಹತ್ಯೆ ಪ್ರಕರಣವಾಗಿ ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿ ಮಾತುಗಳು ಕೇಳಿಬರುತ್ತಿದೆ. ಇದನ್ನು ಶ್ರೀರಾಮಸೇನೆ ಸಹಿಸುವುದಿಲ್ಲ, ಅದಕ್ಕಾಗಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಶ್ರೀರಾಮ ಸೇನೆ ರಾಜ್ಯ ಉಪಾ ಧ್ಯಕ್ಷ ಕುಮಾರ್ ಮಾಲೆಮಾರ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೆಮಾರ್ ಅವರು, ಸೌಜನ್ಯ ಸಾವಿನ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಧ್ವನಿ ಎತ್ತಿದ್ದಾರೆ. ಆದರೆ ಇದನ್ನು ಖಂಡಿಸುವವರು ತುಂಬಾ […]