ಮಂಗಳೂರು : ಮಂಗಳೂರಿನ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ‘ಪುಸ್ತಕ ಮೇಳ- ವಿಶನ್ ಎಕ್ಸ್ಪೋ’ ಸಮಾರಂಭ ಕಾರ್ಯಕ್ರಮವನ್ನು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಸೋಮವಾರ ನಗರದ ಪುರಭವನದಲ್ಲಿ ಉದ್ಘಾಟನೆ ಮಾಡಿದರು.
ಸಚಿವ ರಮಾನಾಥ್ ರೈ ಮಾತಾನಾಡಿ , ಈ ಸಮಾಜದಲ್ಲಿ ಪ್ರತಿದಿನ ತಪ್ಪುಗಳು ಸಂಭವಿಸುತ್ತಲೇ ಇದೆ. ಹೀಗಿರುವಾಗ ಅದನ್ನು ಸರಿಪ ಡಿಸುವವರು ಯಾರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಹಾಗಾಗಿ ಸ್ವತಃ ಮನುಷ್ಯರೇ ಆ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ಸುಂದರ ಸಮಾಜವನ್ನು ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟರು.
ಮನುಷ್ಯರ ಮಧ್ಯೆ ಅಪನಂಬಿಕೆ, ತಪ್ಪುಕಲ್ಪನೆ ಹೆಚ್ಚಾಗುತ್ತಿದೆ. ಜತೆಗೆ ತಪ್ಪುಗಳನ್ನು ಮತ್ತೆ ಮತ್ತೆ ಮಾಡುವ ಹಾಗು ಮಾಡಿಸುವ ಜನರೂ ಇದ್ದಾರೆ. ಹಾಗಾಗಿ ಸಮಾಜ ಇಂತಹ ಜನರ ಬಗ್ಗೆ ಜಾಗೃತರಾಗುವುದರ ಜೊತೆಗೆ ಭೂತ ಕಾಲದಲ್ಲಾದ ತಪ್ಪು ಗಳನ್ನು ವರ್ತಮಾನದಲ್ಲಾದರೂ ತಿದ್ದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ರೈ ಹೇಳಿದರು.
ಈ ಕಾರ್ಯಕ್ರಮದಲ್ಲಿ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‍ನ ಅಧ್ಯಕ್ಷ ಡಾ. ಸಿ.ಪಿ. ಹಬೀಬ್ ರಹ್ಮಾನ್, ಆರೋಗ್ಯ ಸಚಿವ ಯು.ಟಿ.ಖಾದರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊಯಿದಿನ್ ಬಾವ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಜಮೀಯ್ಯತುಲ್ ಫಲಾಹ್ ದ.ಕ.ಜಿಲ್ಲಾಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್, ಮಾಜಿ ಸಚಿವ ಬಿ.ಎ. ಮೊಯಿದಿನ್, ಕಸಾಪ ಜಿಲ್ಲಾ ಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಶುಭ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English