ಅಂಚೆ ಮೂಲಕ ಬಂದ ಸಿದ್ಧಾಂತ ಮಂದಿರದ ವಿಗ್ರಹಗಳು

2:26 PM, Thursday, November 7th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

basadiಮಂಗಳೂರು: ಸಿದ್ದಾಂತ ಮಂದಿರದಿಂದ ಕಳವಾದ ವಿಗ್ರಹಗಳು ಪೊಲೀಸ್ ಆಯುಕ್ತರ ಕಚೇರಿಗೆ ಅಂಚೆ ಮೂಲಕ ಬಂದಿದ್ದರೂ ಅದನ್ನು ಮರೆಮಾಚುವ ಸಲುವಾಗಿ ತಾವೇ ಛತ್ತಿಸ್‍ಗಡದಿಂದ ವಶಪಡಿಸಿಕೊಂಡಿದ್ದು ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೊಲೀಸ್ ಆಯುಕ್ತರು ನಿನ್ನೆ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಿದ್ಧಾಂತ ಮಂದಿರದ ವಿಗ್ರಹಗಳು ಅಂಚೆ ಮೂಲಕ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸ್ಪೀಡ್‍ಪೋಸ್ಟ್ ಮೂಲಕ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದ ವಿಗ್ರಹಗಳನ್ನು ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ ಕಳುಹಿಸಲಾಗಿದ್ದರೂ ಪೊಲೀಸರು ಮಾತ್ರ ಛತ್ತೀಸ್‍ಗಡದ ಹೆಸರನ್ನು ಪದೇ ಪದೇ ಬಳಸುತ್ತಿರುವುದು ಶಂಕೆಯನ್ನುಂಟು ಮಾಡಿದೆ.

ಕಳೆದ ಜುಲೈ 6 ರಂದು ಮೂಡಬಿದ್ರೆ ಜೈನ ಬಸದಿಯ ಸಿದ್ಧಾಂತ ಮಂದಿರಕ್ಕೆ ನುಗ್ಗಿದ ಕಳ್ಳರು 75 ಕೋಟಿ ಬೆಲೆ ಬಾಳುವ 20 ವಿಗ್ರಹಗಳನ್ನು ಕಳವುಗೈದಿದರು. ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಎರಡೇ ವಾರದಲ್ಲಿ ನಾಲ್ಕು ಆರೋಪಿಗಳ ಸಹಿತ ಮೂರು ಜೈನ ವಿಗ್ರಹ ಮತ್ತು 5 ಐದು ವಿಗ್ರಹ ಕರಗಿಸಿದ 1.22 ಕೆ.ಜಿ ಚಿನ್ನ ಮತ್ತು 2.5ಲಕ್ಷ ನಗದನ್ನು ವಶ ಪಡಿಸಿಕೊಂಡಿದ್ದರು. ಆ ಬಳಿಕ ಉಳಿದ ವಿಗ್ರಹಗಳ ಪತ್ತೆಗಾಗಿ ಬಲೆ ಬೀಸಲಾಗಿತ್ತು.

ಈ ನಡುವೆ ನವೆಂಬರ್ 5 ರಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಒಂದು ಪಾರ್ಸೆಲ್ ಬಂದಿದ್ದು ಅದರಲ್ಲಿ ಸಿದ್ಧಾಂತ ಮಂದಿರದ ಉಳಿದ 12 ವಿಗ್ರಹಗಳೂ ಇದ್ದವು. ಈ ಪರ್ಸೆಲನ್ನು ನವೆಂಬರ್ 2 ರಂದು ಭುವನೇಶ್ವರದಿಂದ ಕಳುಹಿಸಲಾಗಿತ್ತು ಎನ್ನುವುದು ಅಂಚೆ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ ಕಳುಹಿಸಿದವರ ಹೆಸರೂ ಮಾತ್ರ ದಾಖಲುಗೊಂಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

basadi

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English