ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರಾವಳಿ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಡಿ14. ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಆಯುಕ್ತ ರು ಕಲಾವಿದ ಮಾತಿನಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಕಲೆಯ ಮೂಲಕ ವ್ಯಕ್ತ ಪಡಿಸುತ್ತಾನೆ. ಮನುಷ್ಯ ನೆಮ್ಮದಿಯನ್ನು ಕಾಣಲು ಕಲಾ ಪ್ರಕಾರಗಳನ್ನು ತಿಳಿಯಬೇಕು. ಇಂದಿನ ದಿನಗಳಲ್ಲಿ ನಾವು ಒತ್ತಡದ ಬದುಕಿನಲ್ಲಿ ಜೀವಿಸುತ್ತಿದ್ದೇವೆ. ಇಂತಹ ಕಲಾ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಕರಾವಳಿ ಕಲಾ ಚಾವಡಿ ನಗರದ ಜನರಿಗೆ ಕಲೆಯಲ್ಲಿ ಆಶಕ್ತಿ ಮೂಡುವಂತೆ ಮಾಡಿದೆ ಎಂದು ಹೇಳಿದರು.
ಸ್ಥಳೀಯ ಕಾರ್ಪೋರೇಟರ್ ರೂಪಾ ಡಿ ಬಂಗೇರ ಕಲಾ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಿದರು. ಇತ್ತೀಚಿನ್ ದಿನಗಳಲ್ಲಿ ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಹಾಗಾಗಿ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಆಯೋಜಕರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಸಿ. ಚು. ಕೃಷ್ಣಯ್ಯ ಸೆಟ್ಟಿ, ಕರಾವಳಿ ಕಲಾ ಚಾವಡಿ ಅಧ್ಯಕ್ಷ ವಿಷ್ಣು ಶಿವು ಗುರು, ಚಾವಡಿಯ ಗೌರವ ಸಲಹೆಗಾರ ಕೋಟಿ ಪ್ರಸಾದ್ ಆಳ್ವ, ಕರ್ನಾಟಕ ಲಲಿತ ಕಲಾ ಅಕಾಡೆಮಿ ರಿಜಿಸ್ಟ್ರಾರ್ ಕೆ.ಸುಧೀಂದ್ರ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಲಾವಿದ ಜಗದೀಶ್ ಅಮ್ಮುಂಜೆ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕಲಾ ಮೇಳದಲ್ಲಿ ಒಟ್ಟು 180 ಕಲಾವಿದರ ಸುಮಾರು 10000 ಕ್ಕೂ ಅಧಿಕ ಕಲಾಕೃತಿಗಳು 137 ಮಳಿಗೆಗಳಲ್ಲಿ ಪ್ರದರ್ಶನಕ್ಕಿವೆ.
Click this button or press Ctrl+G to toggle between Kannada and English