‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಕದ್ರಿ ಪಾರ್ಕ್‌ನಲ್ಲಿ ಚಾಲನೆ

Saturday, November 26th, 2016
wine fest

ಮಂಗಳೂರು : ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಸರಕಾರದ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಆಶ್ರಯದಲ್ಲಿ ಆರೋಗ್ಯಕರ ವೈನ್ ಬಳಕೆಗೆ ಉತ್ತೇಜನ ಮತ್ತು ಅರಿವು ಮೂಡಿಸುವ ಸಲುವಾಗಿ ನಗರದ ಕದ್ರಿ ಪಾರ್ಕ್‌ನಲ್ಲಿ ನ.28ರವರೆಗೆ ಬೆಳಗ್ಗೆ 11ರಿಂದ 9 ಗಂಟೆಯವರೆಗೆ ಆಯೋಜಿಸಿರುವ ‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಶನಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ದ್ರಾಕ್ಷಾರಸ ಆರೋಗ್ಯಕ್ಕೆ ಹಿತಕಾರಿ ಮಾತ್ರವಲ್ಲದೆ, ಔಷದಿಯ ಗುಣವನ್ನು ಇದು ಹೊಂದಿದೆ […]

ಕರ್ಣಾಟಕ ಬ್ಯಾಂಕ್‌ನಿಂದ ಕದ್ರಿ ಪಾರ್ಕ್‌ಗೆ 18 ಲಕ್ಷ ರೂ. ವೆಚ್ಚದ ಸೌರದೀಪ ಅಳವಡಿಕೆ

Wednesday, August 17th, 2016
Karnataka Bank

ಮಂಗಳೂರು: ನಗರದ ಕದ್ರಿ ಪಾರ್ಕ್‌ನ ಅಭಿವೃದ್ಧಿಗೆ ಕರ್ಣಾಟಕ ಬ್ಯಾಂಕ್‌, ಸಾರ್ವಜನಿಕರ ಸಂಜೆಯ ವಾಯುವಿಹಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉದ್ಯಾನವನದ ಕಾಲು ದಾರಿಯುದ್ದಕ್ಕೂ 18 ಲಕ್ಷ ರೂ. ವೆಚ್ಚದ ಸುಮಾರು 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಕೊಡುಗೆಯಾಗಿ ನೀಡಿದೆ . ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪ್ರಾಯೋಜಿಸಲಾಗಿರುವ ಈ ಸೋಲಾರ್‌ ದೀಪಗಳ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಜಯರಾಂಭಟ್‌ ಮಂಗಳವಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕರ್ಣಾಟಕ ಬ್ಯಾಂಕ್‌ ಸುಮಾರು […]

ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಚಾಲನೆ

Saturday, December 14th, 2013
Kudla kala Mela

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರಾವಳಿ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಡಿ14. ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಯುಕ್ತ ರು ಕಲಾವಿದ ಮಾತಿನಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಕಲೆಯ ಮೂಲಕ ವ್ಯಕ್ತ ಪಡಿಸುತ್ತಾನೆ. ಮನುಷ್ಯ ನೆಮ್ಮದಿಯನ್ನು ಕಾಣಲು ಕಲಾ ಪ್ರಕಾರಗಳನ್ನು ತಿಳಿಯಬೇಕು. ಇಂದಿನ […]

ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ.

Tuesday, October 1st, 2013
park-lobo

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಡಾ.ಕೆ.ಆರ್.ಶೆಟ್ಟಿ ಹಾಗೂ ಇತರರಿಂದ ನಗರದ ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಕ್ರಮಗಳು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುವಂತೆ ನೀಡಿರುವ ಮನವಿಗೆ ಸ್ಪಂದಿಸಿದ ಶಾಸಕ ಜೆ.ಆರ್.ಲೋಬೊ ಪಾರ್ಕ್ ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆ ಪಾರ್ಕ್ ಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗೆಗೆ ಹಾಗೂ ಅಭಿವೃದ್ದಿ ಕಾರ್ಯಗಳ ಬಗೆಗೆ ಮಂಗಳವಾರ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಡಾ.ಕೆ.ಆರ್.ಶೆಟ್ಟಿ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಗಳ ಬಗೆಗೆ […]

ಕದ್ರಿ ಉದ್ಯಾವನದಲ್ಲಿ ಫಲಪುಷ್ಪ ಹಾಗೂ ಮಧುವೇಳದ ಉದ್ಘಾಟನೆ

Saturday, March 9th, 2013
Palapushpa pradarshana

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಿರಿ ತೋಟಗಾರಿಕೆ ಸಂಘ (ರಿ) ಹಾಗೂ ತೋಟಗಾರಿಕೆ ಇಲಾಖೆ ದ.ಕ ಮಂಗಳೂರು ಇವುಗಳ ಜಂಟಿ ಆಶ್ರಮದಲ್ಲಿ ಫಲಪುಷ್ಪ ಪ್ರದರ್ಶನ – 2013 ಹಾಗೂ ಮಧುವೇಳವು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮಾರ್ಚ್ 9ನೇ ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನು ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇವರು ನೆರೆವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಡಾ. ಮೋಹನ್ ಆಳ್ವ. ಸಸ್ಯ ಸಂಪತ್ತು […]

ಕದ್ರಿ ಪಾರ್ಕ್ ಬಳಿ ಅಪರಿಚತ ಯುವಕನ ಶವ ಪತ್ತೆ ಕೊಲೆ ಶಂಕೆ

Wednesday, December 26th, 2012
Kadri Park

ಮಂಗಳೂರು :ಮಂಗಳವಾರ ಕದ್ರಿ ಪಾರ್ಕ್ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು ಇದೊಂದು ಸಲಿಂಗ ಕಾಮದ ಉದ್ದೇಶದಿಂದ ನಡೆದ ಕೊಲೆ ಎಂದು ಶಂಕಿಸಲಾಗಿದೆ. ಕದ್ರಿ ಪಾರ್ಕ್ ಹೊರಗಡೆಯಿರುವ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಯುವಕನಿಗೆ ಸುಮಾರು 20 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಗಿಸಲಾಗಿದೆ. ಬಲಕಿವಿಯ ಪಕ್ಕ ರಕ್ತ ಮಡುಗಟ್ಟಿದ ಗುರುತು ಕಂಡುಬಂದಿದ್ದು, ಮೂಗಿನಲ್ಲಿ ರಕ್ತದ ಗುರುತಿದೆ. ದಾರಿಹೊಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವಿದ್ದ ಸ್ಥಳದಲ್ಲಿ ದೊಡ್ಡ ಗಾತ್ರದ ಕಲ್ಲೊಂದು ಪತ್ತೆಯಾದರು ಈತನ ಸಾವಿಗೂ ಕಲ್ಲಿಗೂ […]