ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಿರಿ ತೋಟಗಾರಿಕೆ ಸಂಘ (ರಿ) ಹಾಗೂ ತೋಟಗಾರಿಕೆ ಇಲಾಖೆ ದ.ಕ ಮಂಗಳೂರು ಇವುಗಳ ಜಂಟಿ ಆಶ್ರಮದಲ್ಲಿ ಫಲಪುಷ್ಪ ಪ್ರದರ್ಶನ – 2013 ಹಾಗೂ ಮಧುವೇಳವು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮಾರ್ಚ್ 9ನೇ ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನು ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇವರು ನೆರೆವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಡಾ. ಮೋಹನ್ ಆಳ್ವ. ಸಸ್ಯ ಸಂಪತ್ತು ಮನುಕುಲದ ಏಳಿಗೆಗೆ ಅತ್ಯಗತ್ಯ. ನಮ್ಮ ಮನೆಯಂಗಳದಲ್ಲಿ ಹೂವಿನ ತೋಟವಿದ್ದರೆ ಎಷ್ಟು ಚಂದವೋ ಅಷ್ಟೇ ಆರೋಗ್ಯಕರ ಎಂದು ಹೇಳಿದರು.
ಮಧುಮೇಳವನ್ನು ಎನ್.ಪ್ರಕಾಶ್ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಇವರು ಉದ್ಘಾಟಿಸಿದರು. ಜೇನು ಕೃಷಿಯಿಂದ ರೈತರಿಗೆ ಉತ್ತಮ ಲಾಭವಿದೆ. ಹಿಂದೆ ಕಾಡಲ್ಲಿದ್ದ ಜೇನುಗೂಡುಗಳಿಂದ ಕೆಲವೇ ವರ್ಗದ ಜನ ಕೃಷಿ ಮಾಡುತ್ತಿದ್ದರು ಈಗ ಸರಕಾರ ಜೇನು ಸಾಕಾಣಿಗೆ ಸವಲತ್ತುಗಳನ್ನು ನೀಡುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದ.ಕ ಜಿಲ್ಲಾ ಪಂಚಾಯತ್ನ ಡಾ.ಕೆ.ಎನ್ ವಿಜಯ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಏರ್ಪಡಿಸಿದ್ದ ತರಕಾರಿ ಕೈ ತೋಟದ ಉದ್ಘಾಟನೆಯನ್ನು ಡಾ.ಕೆ.ಹರೀಶ್ ಕುಮಾರ್ ಆಯುಕ್ತರು ಮಹಾನಗರ ಪಾಲಿಕೆ ಇವರು ನೆರೆವೇರಿಸಿದರು.
ತೋಟಗಾರಿಗೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು ಯೋಗೇಶ್ ಹೆಚ್.ಆರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಜೋ ಪ್ರದೀಪ್ ಡಿ’ಸೋಜ ಹಿರಿಯಸಹಾಯಕ ತೋಟಗಾರಿಕೆ ನಿದರ್ೇಶಕರು, ಶ್ರೀಮತಿ ಲಕ್ಷ್ಮಿರಾವ್ ಆರೂರು, ಶ್ರಿ.ಕೆ ನೇಮಿರಾಜ್ ಕೊಂಡೆ, ಶ್ರೀ ಎನ್.ವಿ.ಕೆ. ಭಟ್ರಕೋಡಿ, ಶ್ರೀಮತಿ ಶಾರಾದ ಆಚಾರ್, ಶ್ರೀಮತಿ ಶಶಿ ವಿ.ಶೆಟ್ಟಿ, ಡಾ| ಭಾರತೀ ನಿರ್ಮಲ್, ಶ್ರೀಮತಿ ವಿಜಯಲಕ್ಷ್ಮೀ ಆರ್ ರಾವ್, ಶ್ರೀಮತಿ ಜುಡಿತ್ ಮಸ್ಕರೇನಸ್, ಶ್ರೀಮತಿ ಫಿಲೋಮಿನಾ ಫೆನಾಂಡೀಸ್, ಶ್ರೀ ಸುಭಾಶ್ಚಂದ್ರ ರೈ ಉಪಸ್ಥಿತರಿದ್ದರು.
ಬೆಳಿಗ್ಗೆ 10.30 ರಿಂದ ಮಧುವೇಳದ ವಿಚಾರಗೋಷ್ಟಿ ನಡೆಯಿತು. ಶ್ರೀ ಯೋಗೇಶ್ ಹೆಚ್.ಆರ್, ಶ್ರೀ ಶ್ಯಾಮ್ ಭಟ್, ಅಧ್ಯಕ್ಷರು ಜೇನು ವ್ಯವಸಾಯ ಸಹಕಾರ ಸಂಘ ಪುತ್ತೂರು, ಡಾ.ಆರ್ ಕೆಂಚಾರೆಡ್ಡಿ ಸಹ ಪ್ರದ್ಯಾಪಕರು, ಅರಣ್ಯ ವಿಜ್ಣಾನ ವಿದ್ಯಾಲಯ, ಪೊನ್ನಂಪೇಟೆ ಕೊಡಗು, ಡಾ.ಎಲ್ ಸಿ ಸೋನ್ಸ್ ಪ್ರಗತಿ ಪರ ಕೃಷಿಕರು ಮೂಡಬಿದ್ರೆ, ಶ್ರಿ ಪುಟ್ಟಣ್ಣ ಗೌಡ, ಪ್ರಗತಿಪರ ಜೇನು ಕೃಷಿಕರು ಸುಳ್ಯ ಇವರು ವಿಚಾರಗೋಷ್ಟಿಯನ್ನು ನಡೆಸಿಕೊಟ್ಟರು.
ತೋಟಗಾರಿಕೆ ಇಲಾಖೆಯ ವಿವಿಧ ಜಾತಿಯ ಫಲ-ಪುಷ್ಪಗಳು ತರಕಾರಿ ಕೈತೋಟ, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ತೋಟಗಾರಿಕಾ ಮಳಿಗೆಗಳು, ಹೂಗಳಿಂದ ನಿಮರ್ಿಸಿದರು ಆಕರ್ಷಕ ಆಕೃತಿಗಳು, ತರಕಾರಿ ಕೆತ್ತನೆಗಳು, ತರಕಾರಿ ಕೃಷಿ ಮೇಲ್ಪಾವಳಿ ಔಷಧಿ ಗಿಡಗಳ ಪ್ರದರ್ಶನ ಹಾಗೂ ವಿಚಾರಗೋಷ್ಟಿಗಳು ಮಾರ್ಚ್ 9 ಮತ್ತು 10 ರಂದು ನಡೆಯಲಿದೆ.
Click this button or press Ctrl+G to toggle between Kannada and English