‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಕದ್ರಿ ಪಾರ್ಕ್‌ನಲ್ಲಿ ಚಾಲನೆ

9:21 PM, Saturday, November 26th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

wine festಮಂಗಳೂರು : ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಸರಕಾರದ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಆಶ್ರಯದಲ್ಲಿ ಆರೋಗ್ಯಕರ ವೈನ್ ಬಳಕೆಗೆ ಉತ್ತೇಜನ ಮತ್ತು ಅರಿವು ಮೂಡಿಸುವ ಸಲುವಾಗಿ ನಗರದ ಕದ್ರಿ ಪಾರ್ಕ್‌ನಲ್ಲಿ ನ.28ರವರೆಗೆ ಬೆಳಗ್ಗೆ 11ರಿಂದ 9 ಗಂಟೆಯವರೆಗೆ ಆಯೋಜಿಸಿರುವ ‘ಮಂಗಳೂರು ದ್ರಾಕ್ಷಾರಸ ಉತ್ಸವ’ಕ್ಕೆ ಶನಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ದ್ರಾಕ್ಷಾರಸ ಆರೋಗ್ಯಕ್ಕೆ ಹಿತಕಾರಿ ಮಾತ್ರವಲ್ಲದೆ, ಔಷದಿಯ ಗುಣವನ್ನು ಇದು ಹೊಂದಿದೆ ಎಂದರು.

ನೀರಾ ಉತ್ತೇಜನಕ್ಕೆ ಸರಕಾರ ವಿಶೇಷ ಆದ್ಯತೆಯನ್ನು ನೀಡಿದೆ. ಸಮುದಾಯವೊಂದರ ಕಸುಬಾಗಿರುವ ನೀರಾ ಮೂಲಕ ಸಮುದಾಯ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಇದೇ ರೀತಿ ದ್ರಾಕ್ಷಾರಸವನ್ನು ಪ್ರಚಾರ ಮಾಡುವ ಮೂಲಕ ರಾಜ್ಯದ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಯನ್ನು ಕಾಪಾಡಬೇಕು ಎಂದರು.

wine festವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ನಮ್ಮ ರೈತರು ಬೆಳೆದ ದ್ರಾಕ್ಷಿಯ ರಸವನ್ನು ಕೊಳ್ಳುವುದರ ಮೂಲಕ ರೈತರ ಬೆಳೆಗೆ ಮಾರುಕಟ್ಟೆಯನ್ನು ಒದಗಿಸುವುದು ಹಾಗೂ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಿ, ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು, ನಿರ್ದೇಶಕ ರುಕ್ಮಾಂಗದ, ದ.ಕ. ಜಿಲ್ಲಾ ಅಬಕಾರ ಇಲಾಖೆಯ ಜಿಲ್ಲಾ ಅಕಾರಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್ ಎಚ್.ಆರ್. ಸ್ವಾಗತಿಸಿದರು.

wine fest

wine fest

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English