ಕರ್ಣಾಟಕ ಬ್ಯಾಂಕ್‌ನಿಂದ ಕದ್ರಿ ಪಾರ್ಕ್‌ಗೆ 18 ಲಕ್ಷ ರೂ. ವೆಚ್ಚದ ಸೌರದೀಪ ಅಳವಡಿಕೆ

11:27 AM, Wednesday, August 17th, 2016
Share
1 Star2 Stars3 Stars4 Stars5 Stars
(No Ratings Yet)
Loading...

Karnataka Bank ಮಂಗಳೂರು: ನಗರದ ಕದ್ರಿ ಪಾರ್ಕ್‌ನ ಅಭಿವೃದ್ಧಿಗೆ ಕರ್ಣಾಟಕ ಬ್ಯಾಂಕ್‌, ಸಾರ್ವಜನಿಕರ ಸಂಜೆಯ ವಾಯುವಿಹಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉದ್ಯಾನವನದ ಕಾಲು ದಾರಿಯುದ್ದಕ್ಕೂ 18 ಲಕ್ಷ ರೂ. ವೆಚ್ಚದ ಸುಮಾರು 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಕೊಡುಗೆಯಾಗಿ ನೀಡಿದೆ .

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪ್ರಾಯೋಜಿಸಲಾಗಿರುವ ಈ ಸೋಲಾರ್‌ ದೀಪಗಳ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಜಯರಾಂಭಟ್‌ ಮಂಗಳವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕರ್ಣಾಟಕ ಬ್ಯಾಂಕ್‌ ಸುಮಾರು 6 ಕೋಟಿ ರೂ. ಅನ್ನು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌)ಯಡಿ ವ್ಯಯಿಸಿದ್ದು, ಪ್ರಸ್ತುತ ಸಾಲಿನಲ್ಲಿ ಈಗಾಗಲೇ 3 ಕೋ.ರೂ. ವ್ಯಯ ಮಾಡಿದೆ. ಸೋಲಾರ್‌ ದೀಪ ಅಳವಡಿಕೆ ಕನಸಿನ ಯೋಜನೆಯಾಗಿದ್ದು, ಸಿಎಸ್‌ಆರ್‌ ಯೋಜನೆಯಡಿಯಲ್ಲೇ ಕದ್ರಿ ಪಾರ್ಕ್‌ ಉದ್ಯಾನವನದ ಕಾಲುದಾರಿಯುದ್ದಕ್ಕೂ 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಅಳವಡಿಸಿದೆ. ಇದರಿಂದ ಸಂಜೆ ವಾಯು ವಿಹಾ ರಕ್ಕೆ ತೆರಳುವವರಿಗೆ ಸಾಕಷ್ಟು ಸಹಾ ಯಕವಾಗಲಿದೆ.

ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾ ಪ್ರಬಂಧಕ ಮಹಾಬಲೇಶ್ವರ ಎಂ.ಎಸ್‌. ಮಾತನಾಡಿ, ಕರ್ಣಾಟಕ ಬ್ಯಾಂಕ್‌ ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆಯಡಿ ಅನೇಕ ನೂತನ ಉಪಕ್ರಮ ಪ್ರಾರಂಭಿಸಿದ್ದು, ಸೋಲಾರ್‌ ವಿದ್ಯುತ್‌ ಉತ್ಪಾದನೆ ಇಂತಹ ನೂತನಉಪಕ್ರಮಗಳಲ್ಲೊಂದು. ಸೋಲಾರ್‌,ಎಲ್‌ಇಡಿ ಲೈಟ್‌ ಅಳವಡಿಸುವುದ ರಿಂದ 1.25 ಲಕ್ಷ ಕೋಟಿ ರೂ. ಉಳಿತಾಯ ಮಾಡಬಹುದು ಎಂದು ಪ್ರಧಾನಿ ತಿಳಿಸಿದ್ದು, ಬ್ಯಾಂಕ್‌ನ ಕಾರ್ಯ ಕ್ರಮವೂ ಪ್ರಧಾನಿ ಅವರ ಆಶಯಕ್ಕೆ ಅನುಗುಣವಾಗಿದೆ. ಕದ್ರಿ ಪಾರ್ಕ್‌ನಲ್ಲಿ ಸೋಲಾರ್‌ ವಿದ್ಯುತ್‌ನ ಜತೆಗೆ ಎಲ್‌ಇಡಿ ಬಲ್ಪ್ ಗಳನ್ನು ಉಪಯೋಗಿಸುವ ಮೂಲಕ ವಿದ್ಯುತ್‌ ಉಳಿತಾಯಕ್ಕೆ ಮತ್ತಷ್ಟು ಕ್ರಮ್ನ ಕೈಗೊಳ್ಳಲಾಗಿದೆ.ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುತ್‌ ದೀಪಗಳನ್ನು ಉರಿಸಲು ಹಾಗೂ ನಂದಿಸುವ ಕಾರ್ಯಕ್ಕೆ ನಿರ್ವಾಹಕರ ಅಗತ್ಯವಿಲ್ಲ.

ದೀಪಗಳಿಗೆ ಅಟೋ ಸೆನ್ಸಾರ್‌ ಅಳವಡಿಸಲಾಗಿರುವುದರಿಂದ ರಾತ್ರಿಯಾಗುತ್ತಿದ್ದಂತೆ ದೀಪಗಳು ಬೆಳಗಿ ಬೆಳಗ್ಗೆಯಾಗುತ್ತಿದ್ದಂತೆ ಆರಲಿವೆ. ಈ ಸೋಲಾರ್‌ ವಿದ್ಯುತ್‌ ದೀಪಗಳಿಂದ ಸರಕಾರಕ್ಕೆ ಮಾಸಿಕ ಕನಿಷ್ಠ 9,000ರೂ.ಗಳ ವಿದ್ಯುತ್‌ ದರ ಉಳಿತಾಯ ವಾಗಲಿದೆ ಎಂದರು.

ವಿ. ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕ ಜೆ.ಆರ್‌.ಲೋಬೋ, ಜಿ.ಪಂ. ಸಿಇಒ ಪಿ.ಐ. ಶ್ರೀವಿದ್ಯಾ, ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ವಲಯ ಮುಖ್ಯಸ್ಥ ನಾಗ‌ರಾಜ್‌ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್‌ ಕಾರ್ಯಕ್ರಮ ನಿರೂಪಿಸಿ, ಸಹಾಯಕ ನಿರ್ದೇಶಕ ಪ್ರದೀಪ್‌ ಡಿ’ಸೋಜಾ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English