ಮಂಗಳೂರು :ಮಂಗಳವಾರ ಕದ್ರಿ ಪಾರ್ಕ್ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು ಇದೊಂದು ಸಲಿಂಗ ಕಾಮದ ಉದ್ದೇಶದಿಂದ ನಡೆದ ಕೊಲೆ ಎಂದು ಶಂಕಿಸಲಾಗಿದೆ. ಕದ್ರಿ ಪಾರ್ಕ್ ಹೊರಗಡೆಯಿರುವ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಯುವಕನಿಗೆ ಸುಮಾರು 20 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಗಿಸಲಾಗಿದೆ. ಬಲಕಿವಿಯ ಪಕ್ಕ ರಕ್ತ ಮಡುಗಟ್ಟಿದ ಗುರುತು ಕಂಡುಬಂದಿದ್ದು, ಮೂಗಿನಲ್ಲಿ ರಕ್ತದ ಗುರುತಿದೆ.
ದಾರಿಹೊಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವಿದ್ದ ಸ್ಥಳದಲ್ಲಿ ದೊಡ್ಡ ಗಾತ್ರದ ಕಲ್ಲೊಂದು ಪತ್ತೆಯಾದರು ಈತನ ಸಾವಿಗೂ ಕಲ್ಲಿಗೂ ಯಾವುದೇ ಸಂಬಂಧವಿಲ್ಲದಂತೆ ಕಂಡುಬಂದಿದೆ. ಆದ್ದರಿಂದ ಬೇರೆಲ್ಲೋ ಕೊಲೆ ನಡೆಸಿ ಇಲ್ಲಿಗೆ ತಂದು ಎಸೆದಿರುವ ಬಗ್ಗೆಯೂ ಸಂಶಯಿಸಲಾಗಿದೆ. ಅಲ್ಲದೆ ಇಲ್ಲೇ ರಸ್ತೆ ಪಕ್ಕದಲ್ಲಿ ರಾತ್ರಿ ವೇಳೆ ಲಾರಿಗಳನ್ನು ನಿಲ್ಲಿಸಲಾಗುತ್ತಿದ್ದು ಕೊಲೆಗೀಡಾದ ಯುವಕ ಲಾರಿ ಕ್ಲೀನರ್ ಆಗಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯ ನಂತರ ಮೃತ ಪಟ್ಟ ವ್ಯಕ್ತಿ ಹಾಗೂ ಸಾವಿಗೆ ಕಾರಣದ ಬಗ್ಗೆ ಮಾಹಿತಿ ಸಿಗಬಹುದಾಗಿದೆ.
Click this button or press Ctrl+G to toggle between Kannada and English