ಮಂಗಳೂರು : ಕಾರ್ಯಾಗಾರದಲ್ಲಿ ಹೊರಹೊಮ್ಮುವ ವಿಚಾರ,ಸಲಹೆಗಳು ರೈತ ಬಾಂಧವರಿಗೆ ತಲುಪಿಸುವಲ್ಲಿ ಜಿಲ್ಲೆಯ ಪಶುವೈದ್ಯರು ಶ್ರಮಿಸಬೇಕೆಂದು ಶ್ರೀಮತಿ ತುಳಸಿ ಮದ್ದಿನೇನಿ, ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದ.ಕ. ಜಿ.ಪಂ. ಹಾಗೂ ಪ್ರಭಾರ. ಜಿಲ್ಲಾಧಿಕಾರಿಗಳು ದಕ್ಷಿಣಕನ್ನಡ ಜಿಲ್ಲೆ ಇವರು ಪಶುವೈದ್ಯರಿಗೆ ಸೂಚಿಸಿದರು.
ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು, ಕರ್ನಾಟಕ ರಾಜ್ಯ ಸರ್ಕಾರಿ ಪಶು ವೈದ್ಯರ ಸಂಘ (ರಿ), ಜಿಲ್ಲಾ ಶಾಖೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಹಾಗೂ ಯುನೈಟೆಡ್ ಇಂಡಿಯ ಇನ್ಷೂರೆನ್ಸ್ ಕಂ. ಲಿ. ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಶುವೈದ್ಯರಿಗೆ ‘ಜಾನುವಾರುಗಳಲ್ಲಿ ಕಂಡು ಬಂದಿರುವ ಕಾಲುಬಾಯಿ ಜ್ವರ, ರೋಗೋದ್ರೇಕ ಸನ್ನದ್ಧತೆ’ ಮತ್ತು ‘2013-14 ನೇ ಸಾಲಿನಲ್ಲಿ ಜಾನುವಾರು ವಿಮಾ ಯೋಜನೆ (ಕೇಂದ್ರ ಪುರಸ್ಕೃತ ಯೋಜನೆ)’ಕುರಿತು ಒಂದು ದಿನದ ವಿಶೇಷ ತಾಂತ್ರಿಕ ಕಾರ್ಯಗಾರವನ್ನು ಇತ್ತೀಚೆಗೆ ಹೋಟೆಲ್ ದೀಪಾ ಕಂಪರ್ಟ್ಸ್ ಮಂಗಳೂರು ಇಲ್ಲಿ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ರವಿರಾಜ ಹೆಗ್ಡೆ ರವರು ಮಾತನಾಡಿ ಇತ್ತೀಚೆಗೆ ಕಾಣಿಸಿಕೊಂಡ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗದಿಂದ ಉಂಟಾಗಿದ್ದ ಆತಂಕದ ಪರಿಸ್ಥಿತಿಯನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ನಿರ್ವಹಿಸಿದ ಬಗ್ಗೆ ಪ್ರಶಂಶಿಸಿದರು,
ಅಧ್ಯಕ್ಷತೆ ವಹಿಸಿದ್ದ ಡಾ: ಕೆ. ಶಿವಕುಮಾರ್, ಅಪರ ನಿದರ್ೇಶಕರು, ಜಾನುವಾರು ಸಂಪನ್ಮೂಲ ಮತ್ತು ಪ್ರಾಯೋಜನಾ ನಿರ್ದೆಶಕರು, ಕೆ.ಎಲ್.ಡಿ.ಎ, ಪಶು ಪಾಲನಾ ಇಲಾಖೆ, ಬೆಂಗಳೂರು ರವರು ಜಿಲ್ಲೆಯಲ್ಲಿ ಇಲಾಖಾ ಪ್ರಗತಿಯು ತೃಪ್ತಿಕರವಾಗಿದ್ದು, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳನ್ನು ವಿಮೆಗೊಳಪಡಿಸುವಂತೆ ಸೂಚಿಸಿದರು.
ಶ್ರೀ ಎ.ಕೆ. ಸಿನ್ಹ ಹಿರಿಯ ವಿಭಾಗೀಯ ವ್ಯವಸ್ಥಾಪಕರು ಯುನೈಟೆಡ್ ಇಂಡಿಯ ಇನ್ಷೂರೆನ್ಸ್ ಕಂ. ಲಿ. ಮಂಗಳೂರು, ಇವರು ಜಾನುವಾರು ವಿಮೆ ಬಗ್ಗೆ ಮಾಹಿತಿ ನೀಡಿ ಇಲಾಖೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ವಂದಿಸಿ ಸಮನ್ವಯತೆ ಕಾಪಾಡುವಂತೆ ಪಶುವೈದ್ಯರನ್ನು ಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ: ಎಂ.ಡಿ. ವೆಂಕಟೇಶ್, ನಿರ್ದೆಶಕರು, ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಹೆಬ್ಬಾಳ್, ಬೆಂಗಳೂರು ರವರು ಜಾನುವಾರುಗಳಲ್ಲಿ ಕಂಡು ಬರುವ ಕಾಲು ಬಾಯಿ ಜ್ವರ ರೋಗ ನಿಯಂತ್ರಣದ ಬಗ್ಗೆ ತಾಂತ್ರಿಕ ಉಪನ್ಯಾಸ ನೀಡಿ ಹಾಗೂ ರೋಗೋದ್ರೇಕ ಕಂಡುಬಂದಾಗ ತೆಗೆದುಕೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಕಾರ್ಯಾಗಾರದಲ್ಲಿ ಇಲಾಖಾ ಹಾಗೂ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮ0ಗಳೂರಿನ ಪಶು ವೈದ್ಯರು ಭಾಗವಹಿಸಿದ್ದರು.
ಡಾ: ಕೆ.ವಿ. ಹಲಗಪ್ಪ ಉಪನಿರ್ದೆಶಕರು, ಪಶುಪಾಲನಾ ಇಲಾಖೆ, ಮಂಗಳೂರು ಇವರು ಕಾರ್ಯಾಗಾರಕ್ಕೆ ಆಗಮಿಸಿದ್ದ ಎಲ್ಲಾ ಅಧಿಕಾರಿಗಳನ್ನು ಹಾಗೂ ಇಲಾಖಾಧಿಕಾರಿಗಳನ್ನು ಸ್ವಾಗತಿಸಿದರು. ಡಾ: ಎಂ.ಎನ್.ರಾಜಣ್ಣ, ಸಹಾಯಕ ನಿರ್ದೆಶಕರು ಪಶು ಆಸ್ಪತ್ರೆ, ಮಂಗಳೂರು ರವರು ವಂದನಾರ್ಪಣೆ ಮಾಡಿದರು.
Click this button or press Ctrl+G to toggle between Kannada and English