ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಿಧನ

9:44 PM, Monday, December 23rd, 2013
Share
1 Star2 Stars3 Stars4 Stars5 Stars
(No Ratings Yet)
Loading...

GS Shivarudrappa

ಬೆಂಗಳೂರು : ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಸೋಮವಾರ ಮಧ್ನಾಹ್ನ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಕೆಲ ಕಾಲದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 12.16ರ ಸುಮಾರಿಗೆ ನಿಧನರಾಗಿದ್ದಾರೆ.

ಹಿರಿಯ ಕವಿ, ಲೇಖಕ, ಸಂಶೋಧನೆಕಾರ, ಜನಮೆಚ್ಚಿದ ಕವಿ ಶಿವರುದ್ರಪ್ಪ ಅವರು ಪತ್ನಿಯರಾದ ರುದ್ರಾಣಿ, ಪದ್ಮ ಹಾಗೂ ಪುತ್ರರಾದ ಜಯದೇವ್, ಶಿವಪ್ರಸಾದ್, ಪುತ್ರಿ ಜಯಂತಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

1926ರ ಫೆಬ್ರವರಿ 7 ರಂದು ಜನಿಸಿದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಶಿಕಾರಿಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮೈಸೂರಿನಲ್ಲಿ 1949ರಲ್ಲಿ ಬಿ.ಎ ಹಾಗೂ 1953ರಲ್ಲಿ ಎಂ.ಎ ಪದವಿ ಗಳಿಸಿದರು. ಶಿವರುದ್ರಪ್ಪ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಕುವೆಂಪು ಅವರ ಶಿಷ್ಯರಾಗಿದ್ದ ಶಿವರುದ್ರಪ್ಪ ಅವರು ಕುವೆಂಪು ಅವರ ಬರಹ ಹಾಗೂ ಬದುಕಿನಿಂದ ಪ್ರಭಾವಿತರಾಗಿದ್ದರು.

ರಾಷ್ಟ್ರಕವಿ ಶಿವರುದ್ರಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಳೆ (ಡಿ.24) ಸರ್ಕಾರಿ ರಜೆ ಘೋಷಿಸಿದ್ದಾರೆ. ಇಂದು ಹಾಗೂ ನಾಳೆ ಎರಡು ದಿನ ರಾಜ್ಯದಾದ್ಯಂತ ಶೋಕಾಚರಣೆ ಆಚರಿಸಲಾಗುವುದು. ಶಿವರುದ್ರಪ್ಪ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.

ಬೆಂಗಳೂರಿನ ಜ್ಞಾನ ಭಾರತಿಯ ಆವರಣದಲ್ಲಿ ರಾಷ್ಟ್ರಕವಿಗಳ ಅಂತಿಮ ಸಂಸ್ಕಾರ ನೆರವೇರಿಸಲು ವಿವಿಧ ವಿವಿ ಕುಲಪತಿಗಳಿಂದ ಮುಖ್ಯಮಂತ್ರಿಗಳಿಗೆ ಸೂಚನೆ. ಡಿ.26ರಂದು ಡಾ. ಜಿಎಸ್ ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English