ಮಂಗಳೂರು: ಹಿಂದೂ ಯುವ ಸೇನೆಯ ವತಿಯಿಂದ ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ದೇರಳಕಟ್ಟೆಯಲ್ಲಿ ನಡೆದ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗಳ ಮೇಲೆ ಗೂಂಡ ಕಾಯ್ದೆಯನ್ನು ಹೇರಿ ಮರಣದಂಡನೆ ಶಿಕ್ಷೆ ವಿಧಿಸಬೇಕು. ದೇರಳಕಟ್ಟೆ ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಯಾವುದೇ ಆದೇಶವನ್ನು ನೀಡಿಲ್ಲ ಎಂದು ಸರ್ಕಾರವನ್ನು ಆಗ್ರಹಿಸಿದರು.
ಹಿಂದೂಗಳ ಶ್ರೇಯೋಭಿವೃದ್ದಿ ಮಾಡುವ ಸನ್ಯಾಸಿಗಳನ್ನು ತಂದು ಈ ಬಿಸಿಲಿನಲ್ಲಿ ನಿಲ್ಲಿಸಿ ಕೊಟ್ಟಿರುವ ಕಷ್ಟದ ಶಾಪ ಸರ್ಕಾರವನ್ನು ತಟ್ಟದೆ ಇರಲಾರದು. ಹಿಂದೂ ಸಮಾಜ ಹಾಗೂ ಹಿಂದೂ ಸಂಘಟನೆಗಳಿಗೆ ನೋವಾದರೂ ನಾವು ಸುಮ್ಮನಿರುವುದಿಲ್ಲ. ಸರ್ಕಾರವು ಹಿಂದೂ ಸಂಘಟನೆಗಳ ಹುಟ್ಟನ್ನು ಅಡಗಿಸಲು ನಡೆಸುವ ಹುನ್ನಾರ ನಡೆಸುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪ್ರಸನ್ನರವಿ, ಭಾಸ್ಕರಚಂದ್ರ ಶೆಟ್ಟಿ, ಪದ್ಮನಾಭ ನಾವೂರು, ಶಶಿಕಾಂತ್ ನಾಗ್ವೇಕರ್, ಮೋಹನ್ ಪಡೀಲ್, ರಾಮಚಂದ್ರ ಚೌಟ, ನಾಗರಾಜ ಆಚಾರಿ, ನಾಗೇಶ್ ಬಜಿಲಕೇರಿ, ಕಿರಣ್ ರೈ ಬಜಾಲ್, ಉಮೇಶ್ ಪೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English