ಮುಂಬಯಿ : ಮುಂಬಯಿಯಲ್ಲಿನ ಹೆಸರಾಂತ ಜೆಮಿನಿ ಟೈಲರ್ಸ ಮಾಜಿ ಪಾಲುದಾರ, ಸುಪ್ರಸಿದ್ಧ ಹೈವೇ ಟೈಲರ್ಸ ನ ಮಾಲಕ ಲೊಕೇಶ್ ಬಿ. ಅವಿೂನ್ (86.) ಅಲ್ಪ ಕಾಲದ ಅನಾರೋಗ್ಯದಿಂದ ಮತ್ತು ವೃದ್ಧಾಪ್ಯದಿಂದ ಇಂದಿಲ್ಲಿ ಬುಧವಾರ (22.01.2014) ಮುಂಜಾನೆ ಘಾಟ್ಕೋಪರ್ನ ಆಶಿರ್ವಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಮೂಲತಃ ಮಂಗಳೂರು ತಾಲೂಕಿನ ಬಜ್ಪೆ ದೊಡ್ಡಿಕಟ್ಟೆ ಮೂಲದವರಾಗಿದ್ದು, ಮುಂಬಯಿಯ ಮಾಟುಂಗದ ಮೊಗಲ್ ಲೇನ್ ನಿವಾಸಿಯಾಗಿದ್ದರು.
ಲೊಕೇಶ್ ಅವಿೂನ್ ಅವರು ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಸ್ಥಾಪಕ ಸದಸ್ಯರಾಗಿದ್ದು, ಬಿಲ್ಲವರ ಎಸೋಸಿಯೇಶನ್ನ ಮುಂಬಯಿ ಇದರ ಸೇವಾದಳದ ಸಕ್ರೀಯ ಸದಸ್ಯರಾಗಿ ಅವಿರತ ಶ್ರಮಿಸಿದ್ದರು. ಇಂಡಿಯನ್ ಕಾಂಗ್ರೇಸ್ನ ಕಾರ್ಯಕರ್ತರಾಗಿದ್ದು, ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಪಾಲ್ಗೊಂಡಿದ್ದು, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು.
ಮೃತರು ಪತ್ನಿ ಸುಶೀಲ ಎಲ್.ಅಮೀನ್, ಓರ್ವ ಸುಪುತ್ರ (ಹೆಸರಾಂತ ಸಮಾಜ ಸೇವಕ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಡುವ ಏಕೈಕ ಸರಕಾರೇತರ ಸಂಸ್ಥೆ ಎಂದೆಣಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ತುಳಸೀದಾಸ್ ಅವಿೂನ್) ಮೂರು ಹೆಣ್ಣು ಮಕ್ಕಳನ್ನು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಜಯ ಸಿ. ಸುವರ್ಣ, ಅಧ್ಯಕ್ಷ ಎಲ್.ವಿ.ಅಮೀನ್, ಗೌ| ಪ್ರ| ಕಾರ್ಯ ದರ್ಶಿ ಜ್ಯೋತಿ ಕೆ.ಸುವರ್ಣ ಮತ್ತು ಸರ್ವ ಸದಸ್ಯರು, ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಮಾಜಿಕಾರ್ಯಾಧ್ಯಕ್ಷ ಹಾಗೂ ಪ್ರಸಕ್ತ ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English