ನಮಗೆ ಡಬ್ಬಿಂಗ್ ಬೇಡ.. ಎಂದು ಸಿಡಿದೆದ್ದಿರುವ ಕನ್ನಡ ಚಿತ್ರೋದ್ಯಮದಿಂದ ಇಂದು -ಬಂದ್-ಬೃಹತ್ ಮೆರವಣಿಗೆ

10:53 AM, Monday, January 27th, 2014
Share
1 Star2 Stars3 Stars4 Stars5 Stars
(No Ratings Yet)
Loading...

Strike
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೆ ತಲ್ಲಣದ ಬಿರುಗಾಳಿ ಎದ್ದಿದೆ. ಈಗ ಮತ್ತೆ ಡಬ್ಬಿಂಗ್ ಬಗ್ಗೆ ಆಕ್ರೋಶ ಗರಿಗೆದರಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಬ್ಬಿಂಗ್ ವಿರೋಧಿಸಿ ರಾಜ್ಯಾದ್ಯಂತ ಕನ್ನಡ ಚಿತ್ರರಂಗ ಇಂದು ಬಂದ್ ಘೋಷಣೆ ಮಾಡಿದೆ. ಕನ್ನಡ ಚಿತ್ರಗಳಿಗೆ ಥಿಯೇಟರ್ಸ್ ಗಳೇ ಸಿಗುತ್ತಿಲ್ಲ, ಅಂತಹುದರಲ್ಲಿ ಮತ್ಯಾರದೋ ಸ್ವಾರ್ಥ ಸಾಧನೆಗಾಗಿ ಈಗ ಡಬ್ಬಿಂಗ್ ಬಗ್ಗೆ ಕಾಳಜಿ ತೋರುತ್ತಿರುವುದು ಅತ್ಯಂತ ಖೇದಕರ ಎಂದಿದ್ದಾರೆ ನಟ ರವಿಚಂದ್ರನ್.

ಈ ಹೋರಾಟದ ಸಾರಥ್ಯವನ್ನು ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದಾರೆ. ಡಬ್ಬಿಂಗ್ ವಿರುದ್ಧ ಮೇರುನಟ ಡಾ. ರಾಜ್ ಕುಮಾರ್ ನಮಗೆ ಮಾದರಿ ಆಗಿದ್ದಾರೆ. ಬೇರೆ ಭಾಷೆಯ ಡಬ್ಬಿಂಗ್ ಚಿತ್ರಗಳು ಬಂದರೆ ನಾವು ಇಲ್ಲಿ ಇರುವ ಪರಿಸ್ಥಿತಿ ಇರದು. ನಮ್ಮ ಬದುಕು ಮುಗಿದಂತೆ ಎಂದಿದ್ದಾರೆ ನಟ ಜಗ್ಗೇಶ್.

ಕನ್ನಡ ಮಾತೆಯ ಮಕ್ಕಳಾದ ನಾವು ಕನ್ನಡ ಕ್ಕಾಗಿ ಹೊರಾದ ಬೇಕು, ಜೈಲಿಗೆ ಹೋದರು ಸರಿಯೇ ಡಬ್ಬಿಂಗ್ ಬಗ್ಗೆ ಸಿಡಿದೇಳಬೇಕು ಎಂದಿದ್ದಾರೆ ಶಿವರಾಜ್ ಕುಮಾರ್. ಇಂದು ಈ ಬೃಹತ್ ಮೆರವಣಿಗೆ ಎಸ್ಬಿಎಮ್ ಕಾಲೇಜ್ ನಿಂದ ಸೆಂಟ್ರಲ್ ಕಾಲೇಜ್ ಆವರನದವರೆಗು ನಡೆಯಲಿದೆ. ಸಮಸ್ತ ಕನ್ನಡಿಗರು ಇದರ ಪರವಾಗಿ ನಿಲ್ಲ ಬೇಕು ಎನ್ನುವ ಕಳಕಳಿ ಮನವಿ ಮಾಡಿದ್ದಾರೆ ಶಿವರಾಜ್ ಕುಮಾರ್. ಈ ಹೋರಾಟದಲ್ಲಿ ನಾವು ಜೈಲಿಗೆ ಹೋದರು ಹೋರಾಟ ಬಿಡೆವು ಎನ್ನುವ ಶಪಥ ಮಾಡಿದ್ದಾರೆ ಸಮಸ್ತ ಕಲಾವಿದರು.
ಇದಕ್ಕೆ ಕನ್ನಡ ಹೋರಾಟ ಕರ್ನಾಟಕ ಒಕ್ಕೂಟ ಎನ್ನುವ ಹೆಸರನ್ನು ಇಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English