ಡಬ್ಬಿಂಗ್ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದ್ದೇನು?

Tuesday, January 28th, 2014
Punith

ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಡಾ.ರಾಜ್ ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಡಬ್ಬಿಂಗ್ ಯಾಕೆ ಬೇಡ ಎಂಬುದನ್ನು ಅವರು ಬಹಳ ಸಂಯಮದಿಂದ ಹೇಳಿದರು. ಓವರ್ ಟು ಪುನೀತ್ ರಾಜ್ ಕುಮಾರ್… ನಾವು ಯಾರನ್ನೂ ದ್ವೇಷಿಸುತ್ತಿಲ್ಲ. ಯಾವ ಭಾಷೆಯನ್ನೂ ದ್ವೇಷಿಸುತ್ತಿಲ್ಲ. ನಮಗೆ ಎಲ್ಲರೂ ಬೇಕು. ಏಕೆಂದರೆ ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಕಲಾವಿದರು ಇಲ್ಲಿರಬಹುದು, ತಮಿಳುನಾಡಿನಲ್ಲಿರಬಹುದು ಎಲ್ಲಿ ಬೇಕಾದರೂ ಇರಬಹುದು. ಇದು ಒಂದು ಕುಟುಂಬ. […]

ನಮಗೆ ಡಬ್ಬಿಂಗ್ ಬೇಡ.. ಎಂದು ಸಿಡಿದೆದ್ದಿರುವ ಕನ್ನಡ ಚಿತ್ರೋದ್ಯಮದಿಂದ ಇಂದು -ಬಂದ್-ಬೃಹತ್ ಮೆರವಣಿಗೆ

Monday, January 27th, 2014
Strike

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೆ ತಲ್ಲಣದ ಬಿರುಗಾಳಿ ಎದ್ದಿದೆ. ಈಗ ಮತ್ತೆ ಡಬ್ಬಿಂಗ್ ಬಗ್ಗೆ ಆಕ್ರೋಶ ಗರಿಗೆದರಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಬ್ಬಿಂಗ್ ವಿರೋಧಿಸಿ ರಾಜ್ಯಾದ್ಯಂತ ಕನ್ನಡ ಚಿತ್ರರಂಗ ಇಂದು ಬಂದ್ ಘೋಷಣೆ ಮಾಡಿದೆ. ಕನ್ನಡ ಚಿತ್ರಗಳಿಗೆ ಥಿಯೇಟರ್ಸ್ ಗಳೇ ಸಿಗುತ್ತಿಲ್ಲ, ಅಂತಹುದರಲ್ಲಿ ಮತ್ಯಾರದೋ ಸ್ವಾರ್ಥ ಸಾಧನೆಗಾಗಿ ಈಗ ಡಬ್ಬಿಂಗ್ ಬಗ್ಗೆ ಕಾಳಜಿ ತೋರುತ್ತಿರುವುದು ಅತ್ಯಂತ ಖೇದಕರ ಎಂದಿದ್ದಾರೆ ನಟ ರವಿಚಂದ್ರನ್. ಈ ಹೋರಾಟದ ಸಾರಥ್ಯವನ್ನು ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದಾರೆ. […]