14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಪತ್ತೆ

2:37 PM, Friday, January 31st, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Ancient sculptural vestiges

ಕಾಪು: ಸ್ವಾಮಿ ವಿವೇಕಾನಂದ ಜಯಂತಿ ಸಪ್ತಾಹದ ಅಂಗವಾಗಿ ಎಳ್ಳಂಪಳ್ಳಿ ವಿಷ್ಣುಮೂರ್ತಿ ದೇವಾಲಯದ ಸಮೀಪ ಕೈಗೊಂಡ ಪುರಾತತ್ವ ಅನ್ವೇಷಣೆಯಲ್ಲಿ ಹೊಯ್ಸಳರ ಕಾಲದ ಪುರಾತನ ವಿಗ್ರಹದ ಅವಶೇಷಗಳು ಪತ್ತೆಯಾಗಿವೆ ಎಂದು ಶಿರ್ವದ ಮುಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಕಲೆಯಾಗಿರಬುಹುದಾದ ಈ ಆಕೃತಿ ಸುಮಾರು 24 ಸೆಂ.ಮೀ. ಉದ್ದದ ಬಳಪದ ಕಲ್ಲಿನ ಪೀಠಭಾಗದ ಮೇಲೆ ಎರಡು ಪಾದದ ಭಾಗ ಮಾತ್ರ ಉಳಿದಿದ್ದು, ಶಿಲ್ಪದ ಇತರ ಭಾಗಗಳು ದೊರೆತಿಲ್ಲ. ಶೈಲಿ ಮತ್ತು ಶಿಲ್ಪ ರಚನೆಗೆ ಬಳಸಿರುವ ಶಿಲೆಯ ಆಧಾರದ ಮೇಲೆ ಇದು ಹೊಯ್ಸಳರ ಕಾಲದ ಜನಾರ್ದನ ಅಥವಾ ಚೆನ್ನಕೇಶವ ವಿಗ್ರಹದ ಅವಶೇಷಗಳಾಗಿರಬೇಕು ಎಂದು ಮುರುಗೇಶಿ ಅಭಿಪ್ರಾಯಿಸಿದ್ದಾರೆ.

ಎಳ್ಳಂಪಳ್ಳಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ನಡೆದ ಕ್ಷೇತ್ರ ಕಾರ್ಯದ ವೇಳೆ ಸಂಶೋಧಕ ಶ್ರೀಧರ ಭಟ್‌ ಕಲ್ಯಾಣಪುರ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪ್ರೊ| ವೈ. ಭಾಸ್ಕರ ಶೆಟ್ಟಿ, ಸಮಿತಿ ಅಧ್ಯಕ್ಷ ಟಿ. ಜಯರಾಮ ಶೆಟ್ಟಿ, ಕಾರ್ಯದರ್ಶಿ ವೈ. ಕರುಣಾಕರ ಶೆಟ್ಟಿ, ಸದಸ್ಯರಾದ ಬಾಬಣ್ಣ ಶೆಟ್ಟಿ, ಶ್ರೀಧರ ಪುತ್ರಾಯ, ಉಮೇಶ್‌ ಶೆಟ್ಟಿ, ರಾಜೇಶ್‌ ಆಚಾರ್ಯ, ಸುರೇಶ್‌ ನಾಯಕ್‌ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English