ಮಂಗಳೂರು: ಪುತ್ತೂರು ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫತ್ವಾ ಹೊರಡಿಸಿದ ಧರ್ಮಗುರುವನ್ನು ಜಿಲ್ಲಾಧಿಕಾರಿ ಆದೇಶದಂತೆ ಶಾಲೆಗೆ ಕರೆಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಧಿಕೃತವಾಗಿ ಹೇಳಿಕೆ ಪಡೆದಿದ್ದಾರೆ.
ಈ ನಡುವೆ ಕನ್ನಡಪ್ರಭ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶಾಲೆಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸುವುದಾಗಿ ತಿಳಿಸಿದರು. ಕನ್ನಡಪ್ರಭದಲ್ಲಿ ಬುಧವಾರ ‘ಮುಸ್ಲಿಂ ಹೆಣ್ಣುಮಕ್ಕಳ ನೃತ್ಯಕ್ಕೆ ಫತ್ವಾ ಅಡ್ಡಿ’ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ, ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವುದನ್ನು ನೋಡಿದೆ. ಸಾಹಿತಿಗಳು, ಪ್ರಗತಿ ಪರರು ಇದಕ್ಕೆ ಸರಿಯಾಗಿ ಉತ್ತರಿಸಿದ್ದಾರೆ.
ಫತ್ವಾ ಎಂದರೆ ಅದು ಆದೇಶ ಅಲ್ಲ. ಅವರ ಅಭಿಪ್ರಾಯ. ಯಾರ ಮೇಲೂ ಹೇರಲು ಸಾಧ್ಯವಿಲ್ಲ. ಎಲ್ಲ ಮಕ್ಕಳಿಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.
ಉಸ್ತಾದ್ ಬುಧವಾರ ಸಂಜೆ ಯಾರ ಮೇಲೂ ಹೇರುವುದಿಲ್ಲ ಕೊಡಿಪ್ಪಾಡಿ ಶಾಲೆಗೆ ಪಳ್ಳಿ ಉಸ್ತಾದ್ ಅಬೂಬಕ್ಕರ್ ಮದನಿ ಅವರನ್ನು ಕರೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಂದು ಮಾತುಕತೆ ನಡೆಸಿದರು. ‘ಕುರಾನ್‌ನಲ್ಲಿ ನೃತ್ಯ ಮಾಡಲು, ಯಕ್ಷಗಾನಕ್ಕೆ ಅವಕಾಶ ಇಲ್ಲ ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಮಾಡಬೇಕು ಎಂದು ಹೆತ್ತವರು ಅಥವಾ ಮಕ್ಕಳ ಮೇಲೆ ಹೇರುವುದಿಲ್ಲ’ ಎಂದು ಉಸ್ತಾದ್ ಹೇಳಿಕೆ ನೀಡಿದರು.
Click this button or press Ctrl+G to toggle between Kannada and English