ಯಾಂತ್ರಿಕ ಬದುಕಲ್ಲಿ ಸಂವೇದನೆ ವಿನಾಶ

1:18 PM, Monday, February 10th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Nagathi-halli-chandrashekarಮೈಸೂರು: ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾವಸಂವೇದನೆ ನಾಶವಾಗುತ್ತಿದೆ ಎಂದು ಹೆಸರಾಂತ ಲೇಖಕ ಹಾಗೂ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದಿಸಿದರು.

ಬೆಂಗಳೂರಿನ ಸ್ವರಸಂಕುಲ ಸಂಸ್ಥೆಯು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾವಧಾರೆ ಕನ್ನಡ ಭಾವಗೀತೆಗಳ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮಗಳು ಬಂದನಂತರ ಕೇಳುವ ಹಾಗೂ ಓದುವ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಇಂತಹ ಯಾಂತ್ರಿಕ ಬದುಕಿನಿಂದಾಗಿ ಮನುಷ್ಯನ ಭಾವಸಂವೇದನೆಗಳು ನಾಶವಾಗುತ್ತಿವೆ. ಹಣ ಮಾಡಬೇಕು ಹಾಗೂ ಅಹೋ ರಾತ್ರಿಯಲ್ಲಿ ಶ್ರೀಮಂತನಾಗಬೇಕು ಎನ್ನುವುದರ ಚಿತ್ತವೇ ಪ್ರಮುಖವಾಗಿದೆ ಎಂದರು.

ಭಾವಗೀತೆಗಳ ಧಾರೆ ಅವಿಸ್ಮರಣೀಯ: ಕಾವ್ಯ ಹಾಗೂ ಸಂಗೀತ ಕಲಾ ಸಂಗಮ ವಿಸ್ಮಯ. ಚಿತ್ರಕಲೆ – ಸಂಗೀತ, ಕಾವ್ಯ – ನಾಟಕ, ಹಿಂದೂಸ್ತಾನಿ – ಕರ್ನಾಟಕ ಸಂಗೀತ, ಚರ್ಮವಾದ್ಯ- ತಂತಿವಾದ್ಯಗಳ ಜುಗಲ್‌ಬಂದಿಗಳ ಸಂಗಮ ಕಾಣಬಹುದು. ಹೀಗೆ ಎರಡು ಕಲೆಗಳು ಸೇರಿ ಮೂರನೇ ಪರಿಣಾಮವನ್ನು ಹುಡುಕುವುದು ಕುತೂಹಲದ ಸಂಗತಿ. ಬೇಂದ್ರೆ, ಕುವೆಂಪು, ಜಿಎಸ್‌ಎಸ್ ಮುಂತಾದ ಕವಿಗಳು ಅನೇಕ ಭಾವಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಭಾವಸಂವೇದನೆಗಳು ಇದ್ದ ಕಾರಣ ಜನಪ್ರಿಯವಾದವು. ನಾಡುಕಟ್ಟುವಲ್ಲಿ ಸುಗಮ ಸಂಗೀತದ ಕೊಡುಗೆ ಅನನ್ಯ. ಮೈಸೂರು ಅನಂತಸ್ವಾಮಿ, ಎಚ್.ಆರ್.ಲೀಲಾವತಿ, ಸಿ. ಅಶ್ವತ್ ಭಾವಗೀತೆಗಳ ಧಾರೆ ಅವಿಸ್ಮರಣೀಯ. ಆದರೆ ಇಂದು ಭಾವಗೀತೆಗಳ ಫಸಲು ಕಡಿಮೆಯಾಗುತ್ತಿದೆ ಎಂದರು.

ಆ ಸಂದರ್ಭದಲ್ಲಿ ಕವಿ ಜಯಪ್ಪ ಹೊನ್ನಾಳಿ ಅವರ ಕವಿತೆಗಳ ಸೀಡಿಯನ್ನು ಅವರು ಲೋರ್ಕಾಣೆಗೊಳಿಸಿದರು. ಸಂಗೀತ ಸಂಯೋಜಕಿ ಹಾಗೂ ಗಾಯಕಿ ಸುನಿತಾ ಚಂದ್ರಕುಮಾರ್, ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಇದ್ದರು.

ನಂತರ ನಡೆದ ಭಾವಧಾರೆ ಗೀತಗಾಯನದಲ್ಲಿ ಗಾಯಕ ಹಾಗೂ ಗಾಯಕಿಯರು ವಿವಿಧ ಕವಿಗಳ ಭಾವಗೀತೆಗಳನ್ನು ಹಾಡಿದರು. ಗೀತೆಗಳ ವಿವರ ಹಾಗೂ ವಿಶ್ಲೇಷಣೆ ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣೇಗೌಡ ಮನಮುಟ್ಟುವಂತೆ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English