ಯಾಂತ್ರಿಕ ಬದುಕಲ್ಲಿ ಸಂವೇದನೆ ವಿನಾಶ

Monday, February 10th, 2014
Nagathi-halli-chandrashekar

ಮೈಸೂರು: ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾವಸಂವೇದನೆ ನಾಶವಾಗುತ್ತಿದೆ ಎಂದು ಹೆಸರಾಂತ ಲೇಖಕ ಹಾಗೂ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದಿಸಿದರು. ಬೆಂಗಳೂರಿನ ಸ್ವರಸಂಕುಲ ಸಂಸ್ಥೆಯು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾವಧಾರೆ ಕನ್ನಡ ಭಾವಗೀತೆಗಳ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ಬಂದನಂತರ ಕೇಳುವ ಹಾಗೂ ಓದುವ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಇಂತಹ ಯಾಂತ್ರಿಕ ಬದುಕಿನಿಂದಾಗಿ ಮನುಷ್ಯನ ಭಾವಸಂವೇದನೆಗಳು ನಾಶವಾಗುತ್ತಿವೆ. ಹಣ ಮಾಡಬೇಕು ಹಾಗೂ ಅಹೋ ರಾತ್ರಿಯಲ್ಲಿ ಶ್ರೀಮಂತನಾಗಬೇಕು ಎನ್ನುವುದರ ಚಿತ್ತವೇ ಪ್ರಮುಖವಾಗಿದೆ ಎಂದರು. […]