ಸಂಸತ್‌ನಲ್ಲಿ ನಿಲ್ಲದ ತೆಲಂಗಾಣ ಗಲಾಟೆ

2:43 PM, Tuesday, February 11th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Pranab-Mukherjeeನವದೆಹಲಿ: ಸಂಸತ್ ಅಧಿವೇಶನದ ಕಲಾಪಗಳು ಪೋಲಾಗುತ್ತಿರುವ ನಡುವೆಯೇ ವಿವಾದಿತ ತೆಲಂಗಾಣ ವಿಧೇಯಕಕ್ಕೆ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

ಸೋಮವಾರ ಒಂದೆಡೆ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮತ್ತೊಂದೆಡೆ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರು ನಡೆಸಿದ ಗದ್ದಲ ಅತಿರೇಕಕ್ಕೆ ಹೋದವು. ತಾವು ಸದನದಲ್ಲಿದ್ದೇವೆ ಎಂಬುದನ್ನೂ ಸಂಸದರು ಮರೆತರು. ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ರಾಷ್ಟ್ರಪತಿ ಪ್ರಣಬ್ ಅವರು, ಸಂಸತ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆ ನೀಡಿದರಾದರೂ, ಓಗೊಡದ ಸಂಸದರು ತಮ್ಮ ಜವಾಬ್ದಾರಿ ಮರೆತು ಹುಚ್ಚಾಟದಲ್ಲಿ ತೊಡಗಿದರು.

ಕಳೆದ ಶುಕ್ರವಾರ ಕಲಾಪಗಳಿಗೆ ಅಡ್ಡಿಯಾದ ಹಾಗೂ ನೀತಿನಿಬಂಧನೆಗಳನ್ನು ಉಲ್ಲಂಘಿಸಿದ 10 ಮಂದಿ ಸಂಸದರ ಹೆಸರನ್ನು ಓದಿ ಹೇಳುತ್ತಿದ್ದಂತೆಯೇ ರಾಜ್ಯಸಭೆಯಲ್ಲಿ ಭಾರಿ ಗದ್ದಲ ಏರ್ಪಟ್ಟಿತು. ಈ ಗಲಾಟೆ ಅತಿರೇಕಕ್ಕೆ ಹೋದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಈ ಮೂಲಕ ಸಂಸತ್ ಅಧಿವೇಶನದ 4ನೇ ದಿನವೂ ವಾಷ್‌ಔಟ್ ಆಯಿತು.

ತೆಲಂಗಾಣ, ಕೋಮುಹಿಂಸಾಚಾರ ನಿಯಂತ್ರಣ ಮಸೂದೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಕೋಲಾಹಲ ಉಂಟಾದ ಕಾರಣ ಲೋಕಸಭೆಯಲ್ಲಿ ಯಾವುದೇ ವ್ಯವಹಾರ ನಡೆಯಲಿಲ್ಲ.

ಹೌಸ್ ಬುಲೆಟಿನ್ ಹರಿದು ಬಿಸಾಕಿದ್ರು! ಎಐಎಡಿಎಂಕೆ ಸಂಸದ ವಿ. ಮೈತ್ರೇಯನ್ ಹಾಗೂ ಡಿಎಂಕೆ ಸಂಸದ ಟಿ.ಎಂ. ಸೆಲ್ವಗಣಪತಿ ಪ್ರತಿಭಟನೆ ಆರಂಭಿಸಿದರು. ಒಂದು ಹಂತದಲ್ಲಿ ಅವರ ವರ್ತನೆ ಅತಿರೇಕಕ್ಕೆ ಹೋಯಿತು. ಹೌಸ್ ಬುಲೆಟಿನ್‌ನ ಪ್ರತಿಗಳನ್ನು ಹರಿದು ಹಾಕಿದರು. ಸದನದ ಬಾವಿಯಲ್ಲಿದ್ದ ಇತರೆ ಸದಸ್ಯರೂ ದಾಖಲೆ ಪತ್ರಗಳನ್ನು ಹರಿದು ಸಭಾಪತಿಯತ್ತ ಬಿಸಾಕಿದರು. ಇದೇ ವೇಳೆ ಸಭಾಪತಿಯವರ ಮೈಕ್‌ನತ್ತ ಧಾವಿಸಿದ ಮೈತ್ರೇಯನ್ ಅವರು ಮೈಕ್ ಅನ್ನು ಕಿತ್ತೆಸೆಯಲು ಪ್ರಯತ್ನಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English