ತೆಲಂಗಾಣ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ

Saturday, March 1st, 2014
Pranab-Mukherjee

ನವದೆಹಲಿ: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ನೂತನ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ಫೆಬ್ರವರಿ 18ರಂದು ನಡೆದ ಲೋಕಸಭೆ ಕಲಾಪದಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ಕೊಂಚ ತಡವಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಸೀಮಾಂಧ್ರ ಸಂಸದರ […]

ದೆಹಲಿಗೆ ಇನ್ನು ಜಂಗ್ ರಾಜ್ಯಭಾರ

Tuesday, February 18th, 2014
Najib--Jung

ನವದೆಹಲಿ: ದೆಹಲಿಯಲ್ಲಿ ಸೋಮವಾರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ರಾಜಿನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದಾರೆ. ಕೇಜ್ರಿವಾಲ್ ರಾಜಿನಾಮೆ ಅಂಗೀಕಾರ ಅಮಾನತಿನಲ್ಲಿ ವಿಧಾನಸಭೆ ದೆಹಲಿ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಸಂಸತ್‌ನ ಎರಡೂ ಸದನಗಳಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.  ರಾಷ್ಟ್ರಪತಿ ಪ್ರಣಬ್ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಲೆ.ಗವರ್ನರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಕೇಜ್ರಿವಾಲ್ ಸರ್ಕಾರ ರಾಜಿನಾಮೆ ನೀಡಿದ ಬೆನ್ನಲ್ಲೇ […]

ಸಂಸತ್‌ನಲ್ಲಿ ನಿಲ್ಲದ ತೆಲಂಗಾಣ ಗಲಾಟೆ

Tuesday, February 11th, 2014
Pranab-Mukherjee

ನವದೆಹಲಿ: ಸಂಸತ್ ಅಧಿವೇಶನದ ಕಲಾಪಗಳು ಪೋಲಾಗುತ್ತಿರುವ ನಡುವೆಯೇ ವಿವಾದಿತ ತೆಲಂಗಾಣ ವಿಧೇಯಕಕ್ಕೆ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಸೋಮವಾರ ಒಂದೆಡೆ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮತ್ತೊಂದೆಡೆ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರು ನಡೆಸಿದ ಗದ್ದಲ ಅತಿರೇಕಕ್ಕೆ ಹೋದವು. ತಾವು ಸದನದಲ್ಲಿದ್ದೇವೆ ಎಂಬುದನ್ನೂ ಸಂಸದರು ಮರೆತರು. ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ರಾಷ್ಟ್ರಪತಿ ಪ್ರಣಬ್ ಅವರು, ಸಂಸತ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆ ನೀಡಿದರಾದರೂ, ಓಗೊಡದ ಸಂಸದರು […]

ದೇಶದ 13ನೇ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ

Thursday, July 26th, 2012
Pranab Mukherjee

ಹೊಸದಿಲ್ಲಿ : ಪ್ರಣಬ್ ಮುಖರ್ಜಿಯವರು  ಬುಧವಾರ ಪೂರ್ವಾಹ್ನ 11.38ಕ್ಕೆ ಸರಿಯಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದೇಶದ 13 ನೇ ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್  ಹಾಲ್ ನಲ್ಲಿ  ಸುಪ್ರೀಮ್  ಕೋರ್ಟಿನ  ಮೂಖ್ಯ ನ್ಯಾಯಧೀಶರಾದ ಎಸ್‌.ಎಚ್‌. ಕಪಾಡಿಯಾ ರವರು ಪ್ರಣ್ ಬ್ ಮುಖರ್ಜಿ  ಯವರಿಗೆ  ಪ್ರಮಾಣ ವಚನ ಬೋಧಿಸಿದರು. ಈ ಸಂದಭ೯ದಲ್ಲಿ  ಉಪರರಾಷ್ಟ್ರಪತಿ ಹಮೀದ್  ಅನ್ಸಾರಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಲೋಕಸಭಾ ಸ್ಪೀಕರ್ ಮೀರಾ ಕುಮಾರ್‌, ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಹಾಗೂ ಕೇಂದ್ರದ  ಸಚಿವರು, ವಿರೋದ ಪಕ್ಶದ […]