ನವದೆಹಲಿ: ದೆಹಲಿಯಲ್ಲಿ ಸೋಮವಾರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ರಾಜಿನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದಾರೆ. ಕೇಜ್ರಿವಾಲ್ ರಾಜಿನಾಮೆ ಅಂಗೀಕಾರ ಅಮಾನತಿನಲ್ಲಿ ವಿಧಾನಸಭೆ
ದೆಹಲಿ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಸಂಸತ್‌ನ ಎರಡೂ ಸದನಗಳಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ. ರಾಷ್ಟ್ರಪತಿ ಪ್ರಣಬ್ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಲೆ.ಗವರ್ನರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಕೇಜ್ರಿವಾಲ್ ಸರ್ಕಾರ ರಾಜಿನಾಮೆ ನೀಡಿದ ಬೆನ್ನಲ್ಲೇ ದೆಹಲಿಯ ಸ್ಥಿತಿಗತಿ ಬಗ್ಗೆ ಜಂಗ್ ಅವರು ರಾಷ್ಟ್ರಪತಿಗೆ ವರದಿ ಸಲ್ಲಿಸಿದ್ದರು. ಜತೆಗೆ, ಆಪ್ ಸರ್ಕಾರದ ರಾಜಿನಾಮೆ ಪತ್ರವನ್ನೂ ಕಳುಹಿಸಿದ್ದರು.
ಗುಜರಾತ್‌ಗೆ ಆಪ್ ಲಗ್ಗೆ: ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೇ ಪಕ್ಷಗಳ ಸಾಮ್ರಾಜ್ಯವಾಗಿದ್ದ ಗುಜರಾತ್‌ಗೆ ಆಪ್ ಲಗ್ಗೆಯಿಟ್ಟಿದೆ. ಲೋಕಸಭೆ ಚುನಾವಣೆ ವೇಳೆ ಗುಜರಾತ್ ಜನರಿಗೆ ಆಮ್ ಆದ್ಮಿ ಪಕ್ಷ ಮೂರನೇ ಪರ್ಯಾಯವಾಗಲಿದೆ. ಈ ಹಿಂದೆ ಸಣ್ಣ ಪುಟ್ಟ ಪಕ್ಷಗಳು ಇಲ್ಲಿ ಜನ್ಮತಾಳಿತ್ತಾದರೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳದೇ ಸೋತಿದ್ದವು.
ಭಿನ್ನಮತದ ಹೊಗೆ: ಆಪ್ 20 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದೆ. ನಾಗ್ಪುರದಲ್ಲಿ ಬಿಜೆಪಿ ನಾಯಕ ಗಡ್ಕರಿ ವಿರುದ್ಧ ಅಂಜಲಿ ದಮಾನಿಯಾರನ್ನು ಕಣಕ್ಕಿಳಿಸಲು ಆಪ್ ನಿರ್ಧರಿಸಿದೆ. ಆದರೆ, ಅಲ್ಲಿನ ಸ್ಥಳೀಯ ಸದಸ್ಯೆ ರೂಪಾ ಕುಲಕರ್ಣಿ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷವು ಸಾರ್ವಜನಿಕರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದಿತ್ತು. ಆದರೆ ಈಗ ಹಾಗೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇನ್ನೂ ಬಯಲು ಮಾಡುವೆ: ಮಹಾರಾಷ್ಟ್ರದ ಬಹುಕೋಟಿ ನೀರಾವರಿ ಹಗರಣದ ಮಾಹಿತಿ ಬಹಿರಂಗಪಡಿಸಿದ್ದ ಆಪ್ ಅಭ್ಯರ್ಥಿ ಅಂಜಲಿ ದಮಾನಿಯಾ ಈಗ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರ ಇನ್ನೂ 5 ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ. ಇನ್ನಷ್ಟು ಹಗರಣಗಳ ಮಾಹಿತಿ ಸಂಗ್ರಹಿಸಿದ್ದೇನೆ. ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸುತ್ತೇನೆ ಎಂದಿರುವ ಅಂಜಲಿ, ಲೋಕಸಭೆ ಚುನಾವಣೆಯಲ್ಲಿ ಗಡ್ಕರಿ ವಿರುದ್ಧ ಹೋರಾಡಲು ಸಿದ್ಧ ಎಂದಿದ್ದಾರೆ.
Click this button or press Ctrl+G to toggle between Kannada and English