ನವದೆಹಲಿ: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕಿದ್ದಾರೆ.
ಸಂಸತ್ತಿನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ನೂತನ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ.
ಫೆಬ್ರವರಿ 18ರಂದು ನಡೆದ ಲೋಕಸಭೆ ಕಲಾಪದಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ಕೊಂಚ ತಡವಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಸೀಮಾಂಧ್ರ ಸಂಸದರ ತೀವ್ರ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಇದೀಗ ರಾಷ್ಟ್ರಪತಿ ಅವರ ಸಹಿಯೊಂದಿಗೆ ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯಿಸಿದಂತಾಗಿದೆ.
ಈಗಾಗಲೇ ವಿಭಜನೆ ಕಾರ್ಯ ಆರಂಭಿಸಿರುವ ಕೇಂದ್ರ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗಾಗಲೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ವಿಭಜನೆಯಲ್ಲಿ ತೊಡಗಿದೆ. ಇದಕ್ಕಾಗಿ ಪ್ರಾಥಮಿಕ ಭಾಗವಾಗಿ 2 ಸಮಿತಿಗಳನ್ನು ರಚಿಸಿರುವ ಕೇಂದ್ರ ಸರ್ಕಾರ, ಒಂದು ಸಮಿತಿಗೆ ಭಾರತೀಯ ನಾಗರೀಕ ಸೇವಾ ಅಧಿಕಾರಿಗಳನ್ನು ಮತ್ತು ಮತ್ತೊಂದು ಸಮಿತಿಗೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ಹಂಚುವ ಜವಾಬ್ದಾರಿ ನೀಡಿದೆ.
Click this button or press Ctrl+G to toggle between Kannada and English