ಆಂಧ್ರ ವಿಭಜನೆ ಅಧಿಕೃತ, ಜೂ.2 ತೆಲಂಗಾಣ ಉದಯ ದಿನ

Wednesday, March 5th, 2014
Sampath

ನವದೆಹಲಿ: ತೆಲಂಗಾಣ ರಾಜ್ಯ ರಚನೆ ಈಗ ಅಧಿಕೃತವಾಗಿದ್ದು, ಜೂ.2 ತೆಲಂಗಾಣ ಉದಯ ದಿನ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರೊಂದಿಗೆ ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ತೆಲಂಗಾಣ ರಾಜ್ಯ ರಚನೆ ಮಸೂದೆ ರಾಜ್ಯಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ಮಾರ್ಚ್ 1ರಂದು ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕಿದ್ದರು. ಇದಾದ ಬಳಿಕ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವಾಲಯ, ಆಂಧ್ರಪ್ರದೇಶ ವಿಭಜನೆ ಕಾಯ್ದೆ 2014ರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಜೂನ್ 2 ತೆಲಂಗಾಣ ದಿನವನ್ನಾಗಿ ಘೋಷಿಸಿದೆ. […]

ತೆಲಂಗಾಣ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ

Saturday, March 1st, 2014
Pranab-Mukherjee

ನವದೆಹಲಿ: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ನೂತನ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ಫೆಬ್ರವರಿ 18ರಂದು ನಡೆದ ಲೋಕಸಭೆ ಕಲಾಪದಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ಕೊಂಚ ತಡವಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಸೀಮಾಂಧ್ರ ಸಂಸದರ […]

ಪದೇ ಪದೆ ಕಲಾಪ ಮುಂದೂಡಿಕೆ; ಪ್ರತಿಭಟನೆ ಮಧ್ಯೆ ತೆಲಂಗಾಣ ಬಿಲ್ ಪಾಸ್; 29ನೇ ರಾಜ್ಯ ಉದಯ

Friday, February 21st, 2014
ಪದೇ ಪದೆ ಕಲಾಪ ಮುಂದೂಡಿಕೆ; ಪ್ರತಿಭಟನೆ ಮಧ್ಯೆ ತೆಲಂಗಾಣ ಬಿಲ್ ಪಾಸ್; 29ನೇ ರಾಜ್ಯ ಉದಯ

ನವದೆಹಲಿ: ದೇಶಕ್ಕೆ ಇನ್ನೊಂದು ರಾಜ್ಯದ ಸಂತಸ. 29ನೇ ರಾಜ್ಯವಾಗಿ ತೆಲಂಗಾಣ ಉದಯಕ್ಕೆ ಗುರುವಾರ ರಾಜ್ಯಸಭೆ ಸಾಕ್ಷಿಯಾಯಿತು. ಮಂಗಳವಾರವಷ್ಟೇ ಲೋಕಸಭೆಯಲ್ಲಿ ತೆಲಂಗಾಣ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಎರಡು ದಿನಗಳ ಹಗ್ಗಜಗ್ಗಾಟದ ನಡುವೆ ಗುರುವಾರ ರಾತ್ರಿ 08.07 ಗಂಟೆಗೆ ಹೊಸ ರಾಜ್ಯದ ಉದಯವಾಯಿತು. ಆದರೆ ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೇಕು. ಆಗಷ್ಟೇ ಈ ರಾಜ್ಯ ಉದಯವಾಗಿದೆ ಎಂಬುದು ಅಧಿಕೃತವಾಗುತ್ತದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಸಮರ ನಡೆದರೂ ಕೂಡ, ಮಸೂದೆಗೆ ಬೆಂಬಲ ನೀಡುತ್ತೇವೆ ಎಂಬ […]

ತೆಲಂಗಾಣ ಸಮರ ಜಗನ್ ರೆಡ್ಡಿ ಬಂಧನ

Tuesday, February 18th, 2014
Jagan-Reddy

ನವದೆಹಲಿ: ವಿವಾದಿತ ತೆಲಂಗಾಣ ಬಗೆಗಿನ ರಾಜಕೀಯ ಸಮರ ತೀವ್ರಗೊಂಡಿದೆ. ಆಂಧ್ರ ವಿಭಜನೆ ವಿರೋಧಿಸಿ ವೈಎಸ್ಸಾರ್ ಕಾಂಗ್ರೆಸ್ ನಾಯಕ ಜಗನ್ಮೋಹನ್‌ರೆಡ್ಡಿ ಸೋಮವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸಿ, ಸಾವಿರಾರು ಬೆಂಬಲಿಗರೊಂದಿಗೆ ಬಂಧನಕ್ಕೊಳಗಾಗಿದ್ದಾರೆ. ಇದೇ ವೇಳೆ, ಆಂಧ್ರ ವಿಭಜನೆ ತಡೆಯಲು ಬಿಜೆಪಿ ಸಹಕರಿಸಿದರೆ ನಮ್ಮ ಪಕ್ಷ ಮೋದಿಗೆ ಬೆಂಬಲ ನೀಡಲಿದೆ ಎಂದೂ ಜಗನ್ ಘೋಷಿಸಿದ್ದಾರೆ.  ಈ ಎಲ್ಲ ಬೆಳವಣಿಗೆಗಳ ನಡುವೆಯೂ ಲೋಕಸಭೆಯಲ್ಲಿ ಮಂಗಳವಾರ ತೆಲಂಗಾಣ ಮಸೂದೆ ಅಂಗೀಕಾರವಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಐವರು ಸಂಸದರು ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. […]

ತೆಲಂಗಾಣ ಗದ್ದಲದ ನಡುವೆ ಚಿದು ಬಜೆಟ್ ಮಂಡನೆ

Monday, February 17th, 2014
P.-Chidambaram

ನವದೆಹಲಿ: ತೆಲಂಗಾಣ ಸಂಸದರ ಹಾಗೂ ಸಚಿವರ ಗದ್ದಲದ ನಡುವೆಯೇ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್(ಲೇಖಾನುದಾನ) ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತೆಲಂಗಾಣ ಪರ ಹಾಗೂ ವಿರೋಧದ ನಡುವೆಯೇ ಚಿದಂಬರಂ ಅವರು ನಾಲ್ಕು ತಿಂಗಳ ಅವಧಿಗಾಗಿ ಲೇಖಾನುದಾನ ಮಂಡಿದ್ದು, ವಿಶ್ವದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಿದೆ ಎಂದಿದ್ದಾರೆ. ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಉಳಿತಾಯ ದರ ಶೇ.31.1ರಷ್ಟಿದೆ. […]

ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

Saturday, February 8th, 2014
ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

ನವದೆಹಲಿ: ಅಂತೂ ಇಂತೂ ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡುವ ತೆಲಂಗಾಣ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ ಜಂಟಿ ರಾಜಧಾನಿ ಮಾಡುವುದಾಗಿ ಹೇಳಿದೆ. ಕರಡು ಮಸೂದೆಯ ಬಹುತೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಸೀಮಾಂಧ್ರ ಭಾಗದ ನಾಯಕರ ಒತ್ತಡಕ್ಕೆ ಮಣಿದಿಲ್ಲ. ಬದಲಾಗಿ […]