ತೆಲಂಗಾಣ ಗದ್ದಲದ ನಡುವೆ ಚಿದು ಬಜೆಟ್ ಮಂಡನೆ

2:31 PM, Monday, February 17th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

P.-Chidambaramನವದೆಹಲಿ: ತೆಲಂಗಾಣ ಸಂಸದರ ಹಾಗೂ ಸಚಿವರ ಗದ್ದಲದ ನಡುವೆಯೇ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್(ಲೇಖಾನುದಾನ) ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ತೆಲಂಗಾಣ ಪರ ಹಾಗೂ ವಿರೋಧದ ನಡುವೆಯೇ ಚಿದಂಬರಂ ಅವರು ನಾಲ್ಕು ತಿಂಗಳ ಅವಧಿಗಾಗಿ ಲೇಖಾನುದಾನ ಮಂಡಿದ್ದು, ವಿಶ್ವದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಿದೆ ಎಂದಿದ್ದಾರೆ.

ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಉಳಿತಾಯ ದರ ಶೇ.31.1ರಷ್ಟಿದೆ. ಪ್ರಸ್ತಕ ಸಾಲಿನಲ್ಲಿ ಕೃಷಿಯಲ್ಲಿ ಶೇ.4.6ರಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಒಟ್ಟಾರಿ ಕೃಷಿ ಜಿಡಿಪಿ ದರ 4.6 ರಷ್ಟು ಪ್ರಗತಿ ಕಂಡಿದೆ. ಆದರೆ ಆಹಾರ ಹಣದುಬ್ಬರ ಕಳವಳಕಾರಿ ವಿಷಯ ಎಂದು ಚಿದಂಬರಂ ಹೇಳಿದರು.

10 ವರ್ಷಗಳ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಕೇವಲ 10 ಸಾವಿರ ಕೋಟಿ ಅನುದಾನ ನಿಗದಿ ಮಾಡಲಾಗಿತ್ತು. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ 79 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 20 ಸಾವಿರ ಕಿ.ಮೀ.ರಸ್ತೆ ನಿರ್ಮಿಸಿದ್ದೇವೆ ಮತ್ತು ಕಳೆದ 9 ತಿಂಗಳಲ್ಲಿ 29 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ ಎಂದು ಚಿದು ಯುಪಿಎ-1 ಮತ್ತು 2ರ ಸಾಧನೆಗಳನ್ನು ವಿವರಿಸಿದರು.

ಬಜೆಟ್ ಮುಖ್ಯಾಂಶಗಳು

ಆಧಾರ್ ಯೋಜನೆಗೆ 57 ಕೋಟಿ ಅನುದಾನ
ಆಹಾರದಲ್ಲಿ ಸ್ವಾವಲಂಬನೆ, ಯೋಜನೆಗಳ ಸಮರ್ಪಕ ಅನುಷ್ಠಾನ
ವಿತ್ತೀಯ ಕೊರತೆ ಇಳಿಕೆಯಲ್ಲಿ ಉತ್ತಮ ಬೆಳವಣಿಗೆ
ದೇಶದ ಒಟ್ಟು ಉತ್ಪನ್ನಕ್ಕೆ ವಿತ್ತೀಯ ಕೊರತೆ ಶೇ 4.6
1013-14ರಲ್ಲಿ ಶೇ 4.6ರಷ್ಟು ವಿತ್ತೀಯ ಕೊರತೆ
2013ರಲ್ಲಿ ವಿಶ್ವ ಆರ್ಥಿಕ ಅಭಿವೃದ್ಧಿ ದರ ಶೇ. 3
6 ಲಕ್ಷ 60 ಕೋಟಿ ವೆಚ್ಚದಲ್ಲಿ 296 ಯೋಜನೆಗಳ
9 ತಿಂಗಳಲ್ಲಿ 29 ಸಾವಿರ ಮೆಗಾವ್ಯಾಟ್ ಉತ್ಪಾದನೆ
ಉಕ್ಕು, ಸಿಮೆಂಟ್, ಸ್ಟೀಲ್ ರಿಫೈನರಿ ಉತ್ಪಾದನೆಗೆ ಆದ್ಯತೆ
ರಪ್ತು ಕ್ಷೇತ್ರ ಮಂದಗತಿಯಲ್ಲಿ ಚೇತರಿಕೆ ಕಂಡಿದ
ಶಿಕ್ಷಣ ಕ್ಷೇತ್ರಕ್ಕೆ 79 ಸಾವಿರ ಕೋಟಿ ರೂಪಾಯಿ ವೆಚ್ಚ
ಈಗ ಶಿಕ್ಷಣ ಕ್ಷೇತ್ರಕ್ಕೆ 79 ಸಾವಿರ ಕೋಟಿಗೆ ಏರಿಕೆಯಾಗಿದೆ
7 ಏರ್ಪೋರ್ಟ್ಗಳ ಕಾಮಗಾರಿ ಪ್ರಗತಿಯಲ್ಲಿದೆ
ಮೂರು ಹೊಸ ಕೈಗಾರಿಕಾ ಕಾರಿಡಾರ್‌ಗಳ ಘೋಷಣೆ
ಯುಪಿಎ ಸರ್ಕಾರ ನೂತನ ಬ್ಯಾಂಕ್‌ಗಳ ಸ್ಥಾಪನೆಗೆ ಪರವಾನಗಿ ನೀಡಿದೆ
2013- 14ರಲ್ಲಿ 263 ಮಿಲಿಯ ಟನ್ ಆಹಾರ ಉತ್ಪಾದನೆ
ಸಕ್ಕರೆ ಹತ್ತಿ ಬೇಳೆಕಾಳುಗಳಲ್ಲಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ
ವಿಮಾನ ಪರೀಕ್ಷೆ ಹಾಗೂ ಉಪಗ್ರಹ ಸಂಶೋಧನೆಗೆ ಒತ್ತು
2014- 15ನೇ ಸಾಲಿನಲ್ಲಿ ಕೆಲ ವಿಮಾನಗಳ ಪರಿಕ್ಷಾರ್ಥ ಪ್ರಯೋಗ, ಉಪಗ್ರಹ ಉಡಾವಣೆಗೆ ಯೋಜನೆ
ಹಿಮಾಚಲ ಪ್ರದೇಶ ಉತ್ತರಾಖಂಡ್‌ಗೆ ವಿಶೇಷ ಸಹಾಯ, ಸೌಲಭ್ಯಗಳಿಗಾಗಿ 1 ಸಾವಿರ ಕೋಟಿ ವಿಶೇಷ ಅನುದಾನ

ಆಹಾರ ಸಬ್ಸಿಡಿಗೆ 1 ಲಕ್ಷದ 15 ಸಾವಿರ ಕೋಟಿ ಮೀಸಲು
ಆಧಾರ್ ಯೋಜನೆಗೆ 57 ಕೋಟಿ ಅನುದಾನ
ವಿವಿಧ ಇಲಾಖೆಗಳಿಗೆ 2014-15ರಲ್ಲಿ ಭಾರಿ ಅನುದಾನ
ಕೇಂದ್ರ ಶಸಸ್ತ್ರ ಪಡೆ ನವೀಕರಣಕ್ಕೆ 11,009 ಕೋಟಿ ರು. ಮೀಸಲು
8 ಸಾವಿರಕ್ಕೂ ಅಧಿಕ ಬ್ಯಾಂಕುಗಳು ಸ್ಥಾಪನೆಯಾಗಲಿವೆ
ಚೆನ್ನೈ, ಬೆಂಗಳೂರು ಮುಂಬಯಿ ಅಮೃತಸರ ಕೋಲ್ಕತಾ ಕೈಗಾರಿಕಾ ಕಾರಿಡಾರ್ ನಿರ್ಮಾಣ
6,60,000 ಕೋಟಿ ರು. ಯೋಜನೆಗಳಿಗೆ ಅನುಮೋದನೆ
ಒಟ್ಟು 296 ಯೋಜನೆಗಳಿಗೆ ಸಮಿತಿಯಿಂದ ಅನುಮೋದನೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English