ತೆಲಂಗಾಣ ಗದ್ದಲದ ನಡುವೆ ಚಿದು ಬಜೆಟ್ ಮಂಡನೆ

Monday, February 17th, 2014
P.-Chidambaram

ನವದೆಹಲಿ: ತೆಲಂಗಾಣ ಸಂಸದರ ಹಾಗೂ ಸಚಿವರ ಗದ್ದಲದ ನಡುವೆಯೇ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್(ಲೇಖಾನುದಾನ) ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತೆಲಂಗಾಣ ಪರ ಹಾಗೂ ವಿರೋಧದ ನಡುವೆಯೇ ಚಿದಂಬರಂ ಅವರು ನಾಲ್ಕು ತಿಂಗಳ ಅವಧಿಗಾಗಿ ಲೇಖಾನುದಾನ ಮಂಡಿದ್ದು, ವಿಶ್ವದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಿದೆ ಎಂದಿದ್ದಾರೆ. ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಉಳಿತಾಯ ದರ ಶೇ.31.1ರಷ್ಟಿದೆ. […]

ಕೇಂದ್ರ ಮಧ್ಯಂತರ ರೇಲ್ವೆ ಬಜೆಟ್ -2014 ಮಂಡನೆ

Wednesday, February 12th, 2014
Mallikarjun-karge

ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡನೆಗೆ ಮುನ್ನ “ಕಳಬೇಡ ಕೊಲಬೇಡ” ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೇಲ್ವೆ ಬಜೆಟ್ ಮುಖ್ಯಾಂಶಗಳು ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು […]