ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ.
ಬಜೆಟ್ ಮಂಡನೆಗೆ ಮುನ್ನ “ಕಳಬೇಡ ಕೊಲಬೇಡ” ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರೇಲ್ವೆ ಬಜೆಟ್ ಮುಖ್ಯಾಂಶಗಳು
ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು ಸುರಂಗ ಮಾರ್ಗ
17 ಹೊಸ ಹವಾನಿಯಂತ್ರಣ ರೈಲು
ಪ್ರಯಾಣದರಲ್ಲಿ ಯಾವುದೇ ಬದಲಾವಣೆ ಇಲ್ಲ
ಜಮ್ಮುವಿನ ಕಾರ್ತಕ್ಕೆ ಸದ್ಯದಲ್ಲೇ ಪ್ರಯಾಣಿಕ ರೈಲು
68 ಹೊಸ ರೈಲುಗಳ ಘೋಷಣೆ
ಹೊಸ ಮಾರ್ಗಗಳು ಹಾಗು ಹೆಚ್ಚೆಚ್ಚು ಸಂಕರ್ಪ ಕಲ್ಪಿಸಲು ಒತ್ತು
2,072 ಕಿ.ಮೀ ಹೊಸ ಮಾರ್ಗ ನಿರ್ಮಾಣಕ್ಕೆ ಸಿದ್ಧವಾಗಿದೆ. ಹೊಸ ಮಾರ್ಗಗಳ ಮೂಲಕ ಹೆಚ್ಚಿನ ಸಂಪರ್ಕ ವ್ಯವಸ್ಥೆ
ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸುವ ರೈಲು
ರಾಷ್ಟ್ರೀಯ ಯೋಜನೆಗಳಿಗೆ ಅನುದಾನ
ವೈಷ್ಣೋದೇವಿ -ಕಾರ್ತ ನಡುವೆ ಶೀಘ್ರದಲ್ಲಿ ಪ್ರಯಾಣಿಕ ರೈಲು
ಜಮ್ಮು ಕಾಶ್ಮೀರದಲ್ಲಿ 11.2 ಕಿ.ಮೀ ಸುರಂಗ ಮಾರ್ಗ ವ್ಯವಸ್ಥೆ
ಈಶಾನ್ಯ ರಾಜ್ಯಗಳಿಗೆ ರೇಲ್ವೆ ಸಂಪರ್ಕ ವಿಸ್ತರಣೆ
4,000 ಕಿ.ಮೀವರೆಗೆ ವಿದ್ಯುತ್ತೀಕರಣ ಯೋಜನೆ
ಆರ್ಥಿಕವಾಗಿ ರೇಲ್ವೆ ಇಲಾಖೆ ಬಲಿಷ್ಠವಾಗುತ್ತಿದೆ
ಹೆಚ್ಚು ವೇಗದ ಹೆಚ್ಚು ಪ್ರಯಾಣಿಕ ರೈಲುಗಳು ಇದೀಗ ಇವೆ.
ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ವೇಗ ಪಡೆದುಕೊಂಡಿದೆ.
10 ಪ್ಯಾಸೆಂಜರ್, 4 ಎಂಇಎಂಯು ರೈಲು
ಬೇಡಿಕೆ ಆಧಾರದಲ್ಲಿ ಎಸಿ ರೈಲಿನಲ್ಲಿ ದರ ನಿರ್ಧಾರ
ರೈಲು ಪ್ರಾಧಿಕಾರ ಅಸ್ತಿತ್ವಕ್ಕೆ ತರಲು ನಿರ್ಧಾರ
ರೈಲು ಟಿಕೆಟ್ ದರ ನಿಗದಿಗೊಳಿಸುವುದಕ್ಕಾಗಿ ಪ್ರಾಧಿಕಾರ
ರೈಲ್ವೇ ಇಲಾಖೆಯಲ್ಲಿ ಬಂಡವಾಳ ಹೂಡಿಕೆ ಅತ್ಯಗತ್ಯ
ಲೆವೆಲ್ ಕ್ರಾಸಿಂಗ್ ಬಳಿ ಸೇತುವೆ, ಮೇಲ್ಸೇತುವೆ ನಿರ್ಮಾಣ
17 ಪ್ರೀಮಿಯಮ್, 38 ಎಕ್ಸ್‌ಪ್ರೆಸ್ ರೈಲು
ರೈಲ್ವೇ ಕ್ರಾಸಿಂಗ್ ಬಳಿ 5400 ಸಿಬ್ಬಂದಿ ನಿಯೋಜನೆ
ಒಟ್ಟು 65 ಹೊಸ ರೈಲುಗಳ ಘೋಷಣೆ
3 ಡಿಎಂಯು ರೈಲುಗಳ ಘೋಷಣೆ
Click this button or press Ctrl+G to toggle between Kannada and English