ಬಿಬಿಎಂಪಿಯಿಂದ ಸುಮಾರು 8 ಸಾವಿರ ಕೋಟಿ ಬಜೆಟ್ ಮಂಡನೆ

4:19 PM, Monday, February 17th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

mahanagara-palikeಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2014-2015ನೇ ಸಾಲಿನ ಬಜೆಟ್‌ನ್ನು ಸೋಮವಾರ ಮಂಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಮಾರು 7779.51 ಕೋಟಿ ರುಪಾಯಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್ ಶಿವಪ್ರಸಾದ್ ಅವರು ಮಂಡಿಸಿದ್ದಾರೆ.

ಬಿಬಿಎಂಪಿ ಬಜೆಟ್‌ನ ಪ್ರಮುಖ ಅಂಶಗಳು:

ಬೆಂಗಳೂರಿನ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ
ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂಪಾಯಿ
ನಗರದಲ್ಲಿ ಸ್ವಚ್ಛತೆ ಕಾಪಾಡಲು ‘ಹಸಿರು’ ಪೊಲೀಸ್ ತಂಡ ರಚನೆ
ಹೊಸ ಕೆರೆಗಳ ಅಭಿವೃದ್ಧಿಗೆ 48 ಕೋಟಿ
ನಗರದ ಮೂಲಸೌಕರ್ಯಕ್ಕೆ 2160 ಕೋಟಿ

ಬಿಬಿಎಂಪಿಗೆ ಆದಾಯದ ಮೂಲ:
ಹೊರಗುತ್ತಿಗೆ ಮೂಲಕ ಜಾಹೀರಾತು ಸಂಗ್ರಹ
ಅಂಗಡಿ ಮುಂಗ್ಟಟುಗಳ ಜಾಹೀರಾತು ಹೊರಗುತ್ತಿಗೆ
ಸುಮಾರು 6 ಕೋಟಿ ರೂಪಾಯಿ ಸಂಗ್ರಹ ಗುರಿ
ಆಪ್ಟಿಕಲ್ ಫೈಬರ್ ಕೇಬಲ್ ನೀತಿ ಜಾರಿಗೆ
ನೂತನ ನೀತಿಯಿಂದ 750 ಕೋಟಿ ಸಂಗ್ರಹ ಗುರಿ

ಆರೋಗ್ಯ ಕ್ಷೇತ್ರಕ್ಕೆ ಬಿಬಿಎಂಪಿ ಯೋಜನೆ:
ವಾಜಪೇಯಿ ನಿರಂತರ ಆರೋಗ್ಯ ಯೋಜನೆ ಮೂಲಕ ಆಸ್ಪತ್ರೆಗಳ ಉನ್ನತೀಕರಣ
ಪಾಲಿಕೆಯ 2 ಪ್ರತಿಷ್ಠಿತ ಆಸ್ಪತ್ರೆಗಳನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದರ್ಜೆಗೆ ಉನ್ನತೀಕರಣ
ಎರಡೂ ಆಸ್ಪತ್ರೆಗಳ ಉನ್ನತೀಕರಣಕ್ಕೆ 10 ಕೋಟಿ ವೆಚ್ಚ
6 ರೆಫರಲ್ ಆಸ್ಪತ್ರೆಗಳ ಆಧುನೀಕರಣ
ಸಾಮಾನ್ಯ ಮತ್ತು ಹೆರಿಗೆ ಆಸ್ಪತ್ರೆ
ಖಾಸಗಿ ಸಹಭಾಗಿತ್ವದಲ್ಲಿ ಆಧುನೀಕರಣ

ಬಡವರಿಗೆ ಒಂಟಿ ಮನೆ ನಿರ್ಮಾಣ
ಸಂದೀಪ್ ದೀನ್‌ದಯಾಳ್ ಗೃಹ ನಿರ್ಮಾಣ ಯೋಜನೆ ಮೂಲಕ ಅಲ್ಲಸಂಖ್ಯಾತರಿಗೆ ಮನೆ
ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಂಟಿ ಮನೆ ನಿರ್ಮಾಣಕ್ಕೆ 15 ಕೋಟಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English