ಮಂಗಳೂರು : ಸರಕಾರಿ ನೌಕರರ ಸಭಾಭವನದಲ್ಲಿ ಜರುಗಿದ ದ.ಕ. ಸರಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ 2014-2019ನೇ ಸಾಲಿನ ಆಡಳಿತ ಮಂಡಳಿಗೆ ನಿದರ್ೇಶಕರಾಗಿ ಆಯ್ಕೆಯಾದ 13 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಫೆ.17 ಸೋಮವಾರದಂದು ಏರ್ಪಡಿಸಲಾಯಿತು. ಶ್ರೀ. ಜಾರ್ಜ್ ಪಿಂಟೋ, ಅಧ್ಯಕ್ಷರು, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ (ರಿ), ದ.ಕ. ಜಿಲ್ಲೆ, ಮಂಗಳೂರು ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಏಕಲವ್ಯ ಪ್ರಶಸ್ತಿ ವಿಜೇತ ಶ್ರೀ. ಸತೀಶ್ ಕುಮಾರ್ ಕುದ್ರೋಳಿ ಇವರು ಹಾಗೂ ದ.ಕ. ಜಿಲ್ಲಾ ವಾಹನ ಚಾಲಕರ ಸಂಘದ ಶ್ರೀ. ದಯಾನಂದ, ನಮ್ಮ ಸಂಘದ ಗೌರವ ಅಧ್ಯಕ್ಷರಾದ ಶ್ರೀ. ರಮೇಶ್ ಕಿರೋಡಿಯನ್, ಅಧ್ಯಕ್ಷರಾದ ಶ್ರೀ. ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಇವರುಗಳು ಶಾಲು ಹೊದಿಸಿ ಹೂ ಮಾಲೆ ಹಾಕಿ ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಶ್ರೀ. ಸಿರಿಲ್ ರಾಬರ್ಟ್ ಡಿ’ಸೋಜ ಸ್ವಾಗತಿಸಿ, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ನಿರೂಪಿಸಿದರು. ಶ್ರೀ. ರಮೇಶ್ ಕಿರೋಡಿಯನ್ ಧನ್ಯವಾದ ಸಮಪರ್ಿಸಿದರು.
Click this button or press Ctrl+G to toggle between Kannada and English