ನ್ಯೂಯಾರ್ಕ್: ವಿಶ್ವಾದ್ಯಂತ ಮೊಬೈಲ್ ಮೆಸೇಜಿಂಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಾಟ್ಸ್‌ಆ್ಯಪ್ ಅನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆ.
ಬರೋಬ್ಬರಿ 12 ಲಕ್ಷ ಸಾವಿರ ಕೋಟಿ (19 ಶತಕೋಟಿ ಡಾಲರ್) ನೀಡಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ವಾಟ್ಸ್‌ಆ್ಯಪ್ ಅನ್ನು ಖರೀದಿಸಲಿದ್ದಾರೆ. ಮೊಬೈಲ್ ತಂತ್ರಜ್ಞಾನ ವಲಯದಲ್ಲೇ ಆದ ದೊಡ್ಡ ಮೊತ್ತದ ಖರೀದಿ ಪ್ರಕ್ರಿಯೆ.
ಒಪ್ಪಂದ ಪ್ರಕಾರ ಝುಕರ್‌ಬರ್ಗ್ ಮೊದಲು ವಾಟ್ಸ್‌ಆ್ಯಪ್ ಸ್ಥಾಪಕ ಜಾನ್ ಕೌಮ್‌ಗೆ 4 ಶತಕೋಟಿ ಡಾಲರ್ ನಗದಲ್ಲಿ ನೀಡಲಿದ್ದಾರೆ. ನಂತರ 12 ಶತಕೋಟಿ ಡಾಲರ್ ಮೊತ್ತದ ಫೇಸ್‌ಬುಕ್ ಷೇರುಗಳನ್ನು ನೀಡಲಿದ್ದಾರೆ. ಬಳಿಕ ಕೌಮ್, ವಾಟ್ಸ್‌ಆ್ಯಪ್ ನೌಕರರಿಗೆ 3 ಶತಕೋಟಿ ಡಾಲರ್ ಮೊತ್ತದ ಷೇರುಒದಗಿಸಲಿದ್ದಾರೆ. ಡೀಲ್ ಮುರಿದರೆ ವಾಟ್ಸ್‌ಆ್ಯಪ್‌ಗೆ 12,500 ಕೋಟಿ ಪಾವತಿಸುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿದಂತಹ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುವ ಗುರಿಯನ್ನು ಫೇಸ್‌ಬುಕ್ ಈ ಡೀಲ್ ಮೂಲಕ ಸಾಧಿಸಲಿದೆ.
Click this button or press Ctrl+G to toggle between Kannada and English