ಅಂಬಿ ಚನ್ನಾಗಿದ್ದಾರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ: ಸುಮಲತ

12:22 PM, Monday, February 24th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Ambarishಬೆಂಗಳೂರು: ಅಂಬರೀಶ್ ಅವರು ಚನ್ನಾಗಿದ್ದಾರೆ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಬಿ ಧರ್ಮಪತ್ನಿ ಸುಮಲತ ಅಂಬರೀಶ್ ಅವರು ಭಾನುವಾರ ತಿಳಿಸಿದ್ದಾರೆ. ಅಂಬರೀಶ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ಅಂಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಅಂಬಿ ಅವರ ಆರೋಗ್ಯ  ಕುರಿತಾಗಿ ನಿಖರ ಮಾಹಿತಿ ಸಿಗದೇ ಅಭಿಮಾನಿಗಳು ಕಂಗಾಲಾಗಿದ್ದರು.

ಈ ಹಿನ್ನೆಲೆಯಲ್ಲಿ ಸುಮಲತ ಅವರು ಸುದ್ದಿಗೋಷ್ಠಿ ನಡೆಸಿ, ಅಂಬರೀಶ್ ಅವರು ಚನ್ನಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಇಲ್ಲ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಅಂಬಿ ಅವರ ಆರೋಗ್ಯದ ಕುರಿತಾಗಿ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು. ಅಂಬರೀಶ್ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳ ಬಳಗ ಇದೆ. ಕೆಲವೊಂದು ವದಂತಿಗಳಿಂದ ಅಭಿಮಾನಿಗಳು ಆಂತಕಕ್ಕೆ ಸಿಲುಕುತ್ತಾರೆ. ಹೀಗಾಗಿ ಯಾರು ಯಾವುದೇ ರೀತಿಯ ವದಂತಿಗಳನ್ನು ಹಬ್ಬಿಸದಂತೆ ಸುಮಾಲತ ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ, ಅಂಬರೀಶ್ ಅವರ ಅಣ್ಣನ ಮಗ ಮದನ್ ಅವರು ಸುದ್ದಿಗೋಷ್ಠಿ ನಡೆಸಿ, ಚಿಕ್ಕಪ್ಪ ಅವರ ಆರೋಗ್ಯದ ಚನ್ನಾಗಿದೆ. ಐದು ನಿಮಿಷದ ಹಿಂದೆಯಷ್ಟೇ ಮಾತನಾಡಿಸಿ ಬಂದಿದ್ದೇನೆ ಎಂದರು. ಆದರೆ ಅಭಿಮಾನಿಗಳು ಇದಕ್ಕೆ ಒಪ್ಪದೆ ಸುಮಲತ ಅವರೆ ಅಂಬಿ ಆರೋಗ್ಯದ ಕುರಿತು ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು. ಆನಂತರ ಬಂದ ಸುಮಲತ ಅವರು ಅಂಬರೀಶ್ ಅವರ ಆರೋಗ್ಯ ಚನ್ನಾಗಿದೆ ಅವರಿಗೆ ಯಾವುದೇ ತೊಂದರೆ ಇಲ್ಲ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.

ಆನಂತರ ಮಾತನಾಡಿದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ಸತೀಶ್ ಅವರು, ಕಳೆದ 24 ಗಂಟೆಗಳ ಚಿಕಿತ್ಸಾವದಿಯಲ್ಲಿ ಅಂಬರೀಶ್ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರ ದೇಹಕ್ಕೆ ಯಾವುದೇ ತೊಂದರೆ ಅಥವಾ ನೋವಾಗದಂತೆ ಮಾಡಲು ಆಂಟಿ ಬಯೋಟಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅಂಬಿ ಅವರಿಗೆ ಕೃತಕ ಉಸಿರಾಟ(ವೆಂಟಿಲೇಟರ್) ಅಳವಡಿಸಿರುವುದನ್ನು ತಾವು ತಪ್ಪಾಗಿ ಗ್ರಹಿಸಬಾರದು. ಉತ್ತಮ ಚಿಕಿತ್ಸೆ ನೀಡಲು ಹಾಗೂ ಅವರ ದೇಹಕ್ಕೆ ವಿಶ್ರಾಂತಿ ನೀಡುವುದಕ್ಕಾಗಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದರು. ಅಂಬರೀಶ್ ಅವರಿಗೆ ಇನ್ನು 24 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಆನಂತರವಷ್ಟೇ ಅವರಿಗೆ ವೆಂಟಿಲೇಟರ್ ತೆಗೆದು, ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಂಬಿ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಯ ಎದುರು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೀಡುಬಿಟ್ಟಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English