ಅಹ್ಮದಾಬಾದ್: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಸುದ್ದಿ ಕೇಳಿಬರುತ್ತಿದ್ದಂತೆ, ಕೇಜ್ರಿವಾಲ್ ಇಂದಿನಿಂದ ಗುಜರಾತ್ನಲ್ಲಿ 4 ದಿನಗಳ ಪ್ರವಾಸ ಆರಂಭಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರು ಗುಜರಾತ್ನಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುವುದಕ್ಕಾಗಿಯೇ ತಾನು ಗುಜರಾತ್ ಪ್ರವಾಸ ಕೈಗೊಡಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ ಸರ್ಕಾರ ಮತ್ತು ಮಾಧ್ಯಮಗಳು ಗುಜರಾತ್ನಲ್ಲಿ ರಾಮರಾಜ್ಯ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಹೇಳುವಂತೆ ಇಲ್ಲಿ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಿದೆ, ಆರೋಗ್ಯ ಸಮಸ್ಯೆಗಳು ನಿರ್ಮೂಲನೆಯಾಗಿವೆ, ಭ್ರಷ್ಟಾಚಾರ ಇಲ್ಲಿಲ್ಲ…ಆದ್ದರಿಂದ ನಾನು ಗುಜರಾತ್ನಲ್ಲಿನ ಅಭಿವೃದ್ಧಿಯನ್ನು ನೋಡಲು ಬಂದಿದ್ದೇನೆ ಎಂದು ಗುಜರಾತ್ಗೆ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್ ಅವರು ಕಛ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸೌರಾಷ್ಟ್ರ ವಲಯದ ಆಪ್ ಪ್ರತಿನಿಧಿ ಹೇಳಿದ್ದಾರೆ.
ಏತನ್ಮಧ್ಯೆ, ಮೋದಿಯವರು ವಾರಣಾಸಿಯಿಂದ ಸ್ಪರ್ಧಿಸುವುದಾಗಿ ಸುದ್ದಿ ಇದ್ದು, ಕೇಜ್ರಿವಾಲ್ ಮೋದಿ ವಿರುದ್ಧ ಸ್ಪರ್ಧೆಗಿಳಿಯಲಿದ್ದಾರೆ ಎಂದು ಆಪ್ ನಾಯಕ ಮನೀಷ್ ಸಿಸೋಡಿಯಾ ಹೇಳಿದ್ದರು.
ಮೋದಿ ಗುಜರಾತ್ನಿಂದ ಹೊರಗೆ ಸ್ಪರ್ಧಿಸುವುದಾದರೆ ಅಲ್ಲಿ ಕೇಜ್ರಿವಾಲ್ ಮೋದಿ ವಿರುದ್ಧ ಸ್ಪರ್ಧೆಗಿಳಿಯುವುದಾಗಿ ಆಪ್ ಹೇಳಿತ್ತು.
Click this button or press Ctrl+G to toggle between Kannada and English