ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

Tuesday, March 3rd, 2020
modi

ನವದೆಹಲಿ : ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ವಿಜಯಿಯಾಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ನಂತರ ಟ್ವೀಟ್ ಮಾಡಿದ್ದ ಕೇಜ್ರಿವಾಲ್, ಅಮಿತ್ ಶಾ ಅವರನ್ನು ಭೇಟಿಯಾಗಿ ಸಂತಸವಾಗಿದೆ. ಉತ್ತಮ ಚರ್ಚೆ ನಡೆಯಿತು. ದಿಲ್ಲಿಯ ವಿಚಾರಗಳ ಬಗ್ಗೆ ಮಾತನಾಡಲಾಗಿದೆ ಎಂದಿದ್ದರು. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅರವಿಂದ್ […]

ದೆಹಲಿ ಹಿಂಸಾಚಾರ : ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

Wednesday, February 26th, 2020
dehli

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು ಗಲಭೆ ಹತ್ತಿಕ್ಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದೆಹಲಿಯ ಜಾಫ್ರಾಬಾದ್‌, ಸೀಲಂಪುರ್ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದು 160 ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೆಹಲಿಯ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಹಾಗೂ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರುವಲ್ಲಿ ದೆಹಲಿ ಸಿಎಂ ವಿಫಲರಾಗಿದ್ದಾರೆ ಎಂದು ಆರೋಪಿಸಿ […]

ದೆಹಲಿ : ಸಮ-ಬೆಸ ಸಂಚಾರ ಪದ್ದತಿ ಮತ್ತೆ ಜಾರಿ : ಅರವಿಂದ್‌ ಕೇಜ್ರಿವಾಲ್‌

Friday, September 13th, 2019
dehali

ಹೊಸದಿಲ್ಲಿ : ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಈ ಹಿಂದೆ ಜಾರಿಗೆ ತರಲಾಗಿದ್ದ ಸಮ-ಬೆಸ ಸಂಚಾರ ಪದ್ದತಿಯನ್ನು ಮತ್ತೆ ಜಾರಿಗೊಳಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಚಳಿಗಾಲದಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗುವ ಹಿನ್ನಲೆಯಲ್ಲಿ ನವೆಂಬರ್‌ 4ರಿಂದ 15ರವರೆಗೆ ಅಂದರೆ ಒಟ್ಟು 12 ದಿನಗಳ ಕಾಲ ಸಮ-ಬೆಸ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಇದರ ಪ್ರಕಾರ ನವೆಂಬರ್‌ 4, 6, 8, 10, 12, 14ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳು ರಸ್ತೆಗಿಳಿಯಬಹುದು. ಪರ್ಯಾಯ […]

ಲೋಕಲ್ ಟ್ರೈನ್‌ನಲ್ಲಿ ಕೇಜ್ರಿವಾಲ್ ಪ್ರಚಾರ

Thursday, March 13th, 2014
Arvind-Kejriwal

ಮುಂಬೈ: ಲೋಕಸಭಾ ಚುನಾವಣೆ ಅಂಗವಾಗಿ ಪ್ರಚಾರಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಬುಧವಾರ ಮುಂಬೈಗೆ ಭೇಟಿ ನೀಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಆಟೋದಲ್ಲಿ ತೆರಳಿದ ಕೇಜ್ರಿವಾಲ್, ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ತದ ನಂತರ  ಚರ್ಚ್‌ಗೇಟ್ ರೈಲ್ವೇ ಸ್ಟೇಷನ್ ಬಳಿ ಲೋಕಲ್ ಟ್ರೈನ್‌ನಲ್ಲಿ ಏರಿದ ಅರವಿಂದ್ ಕೇಜ್ರಿವಾಲ್ ಜನತೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎಎಪಿ ಕಾರ್ಯಕರ್ತರು ಹೆಚ್ಚಾಗಿ ನೆರದಿದ್ದು, ನೂಕು ನುಗ್ಗಲಾಗಿದೆ ಈ ಸಂದರ್ಭದಲ್ಲಿ ಮೆಟಲ್ ಡಿಟೆಕ್ಟರ್ ಸೇರಿದಂತೆ ಇತರೆ ಉಪಕರಣಗಳನ್ನು […]

ಕೇಜ್ರಿವಾಲ್ ಜತೆ ಡಿನ್ನರ್ ಗೆ 20 ಸಾವಿರ ರುಪಾಯಿ ಶುಲ್ಕ!

Saturday, March 8th, 2014
Arvind-Kejriwal

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಊಟ ಮಾಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ. ಆದರೆ ಅದಕ್ಕಾಗಿ ನೀವು 20 ಸಾವಿರ ರುಪಾಯಿ ಖರ್ಚು ಮಾಡಬೇಕು ಅಷ್ಟೆ. ಅರವಿಂದ್ ಕೇಜ್ರಿವಾಲ್ ಅವರು ಇದೇ ಮಾರ್ಚ್ 15ರಂದು ನಗರಕ್ಕೆ ಆಗಮಿಸುತ್ತಿದ್ದು, ಈ ವೇಳೆ ಆಪ್ ನಾಯಕರು ಪಕ್ಷದ ನಿಧಿ ಸಂಗ್ರಹಣೆಗೆ ಭೋಜನಕೂಟ ಏರ್ಪಡಿಸಿದ್ದಾರೆ. ನೀವು 20 ಸಾವಿರ ರುಪಾಯಿ ಕೊಟ್ಟರೆ, ಕೇಜ್ರಿವಾಲ್ ಜತೆ ಊಟದೊಂದಿಗೆ ಸಂದರ್ಶನ ಮಾಡಬಹುದು. ಇತ್ತಿಚೀಗಷ್ಟೆ ಎಎಪಿ […]

ಶಾಂತಿ ಕಾಪಾಡಲು ಕೇಜ್ರಿವಾಲ್ ಕರೆ

Thursday, March 6th, 2014
Arvind-kejriwa

ನವದೆಹಲಿ: ಬುಧವಾರ ಬಿಜೆಪಿ ಪ್ರಧಾನ ಕಾರ್ಯಾಲಯದ ಹೊರಗೆ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆಪ್ ನಾಯಕರಾದ ಅಶತೋಷ್, ಶಾಜಿಯಾ ಇಲ್ಮೀ ಅವರ ಬಂಧನಕ್ಕೆ ಆದೇಶಿಸಿದ್ದಾರೆ. ನಿನ್ನೆ ನಡೆದ ಈ ಘಟನೆಯಲ್ಲಿ ಕನಿಷ್ಟ 14 ಆಪ್ ಕಾರ್ಯಕರ್ತರನ್ನು ಈವರೆಗೆ ಬಂಧಿಸಲಾಗಿದೆ. ಆದಾಗ್ಯೂ, ನಿನ್ನೆ ನಡೆದ ಅಹಿತಕರ ಘಟನೆಗೆ ಕ್ಷಮೆಯಾಚಿಸಿದ ಆಪ್ ನೇತಾರ  ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ನೇತಾರರಾದ ಡಾ.ಹರ್ಷವರ್ಧನ್, […]

ಅರವಿಂದ ಕೇಜ್ರಿವಾಲ್ ಬಂಧನ

Thursday, March 6th, 2014
Arvind-kejriwa

ಹಮದಾಬಾದ್: ಬುಧವಾರ ಲೋಕಸಭೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಉತ್ತರ ಗುಜರಾತ್‌ನಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಆಪ್ ನಾಯಕ ಅರವಿಂದ ಕೇಜ್ರಿವಾಲ್‌ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಘಟನೆ ದೆಹಲಿ ಹಾಗೂ ಲಖನೌನಲ್ಲಿ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಕೇಜ್ರಿ ವಶಕ್ಕೆ ತೆಗೆದುಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಆಪ್ ಕಾರ್ಯಕರ್ತರು ನವದೆಹಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಆಪ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಇದಲ್ಲದೇ ಗುಜರಾತ್‌ನ ಹಲವೆಡೆಯೂ ಬಿಜೆಪಿ-ಆಪ್ […]

ಗುಜರಾತ್‌ನಲ್ಲಿನ ರಾಮರಾಜ್ಯವನ್ನು ನೋಡಲು ಬಂದಿದ್ದೇನೆ: ಕೇಜ್ರಿವಾಲ್

Wednesday, March 5th, 2014
Arvind-Kejriwal

ಅಹ್ಮದಾಬಾದ್: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಸುದ್ದಿ ಕೇಳಿಬರುತ್ತಿದ್ದಂತೆ, ಕೇಜ್ರಿವಾಲ್ ಇಂದಿನಿಂದ ಗುಜರಾತ್‌ನಲ್ಲಿ 4 ದಿನಗಳ ಪ್ರವಾಸ ಆರಂಭಿಸಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುವುದಕ್ಕಾಗಿಯೇ ತಾನು ಗುಜರಾತ್ ಪ್ರವಾಸ ಕೈಗೊಡಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಗುಜರಾತ್ ಸರ್ಕಾರ ಮತ್ತು ಮಾಧ್ಯಮಗಳು ಗುಜರಾತ್‌ನಲ್ಲಿ ರಾಮರಾಜ್ಯ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಹೇಳುವಂತೆ ಇಲ್ಲಿ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗಿದೆ, ಆರೋಗ್ಯ ಸಮಸ್ಯೆಗಳು ನಿರ್ಮೂಲನೆಯಾಗಿವೆ, ಭ್ರಷ್ಟಾಚಾರ ಇಲ್ಲಿಲ್ಲ…ಆದ್ದರಿಂದ […]