ಮುಂಬೈ: ಲೋಕಸಭಾ ಚುನಾವಣೆ ಅಂಗವಾಗಿ ಪ್ರಚಾರಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಬುಧವಾರ ಮುಂಬೈಗೆ ಭೇಟಿ ನೀಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಆಟೋದಲ್ಲಿ ತೆರಳಿದ ಕೇಜ್ರಿವಾಲ್, ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ.
ತದ ನಂತರ ಚರ್ಚ್ಗೇಟ್ ರೈಲ್ವೇ ಸ್ಟೇಷನ್ ಬಳಿ ಲೋಕಲ್ ಟ್ರೈನ್ನಲ್ಲಿ ಏರಿದ ಅರವಿಂದ್ ಕೇಜ್ರಿವಾಲ್ ಜನತೆಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಎಎಪಿ ಕಾರ್ಯಕರ್ತರು ಹೆಚ್ಚಾಗಿ ನೆರದಿದ್ದು, ನೂಕು ನುಗ್ಗಲಾಗಿದೆ ಈ ಸಂದರ್ಭದಲ್ಲಿ ಮೆಟಲ್ ಡಿಟೆಕ್ಟರ್ ಸೇರಿದಂತೆ ಇತರೆ ಉಪಕರಣಗಳನ್ನು ಧ್ವಂಸಗೊಂಡಿವೆ ಎಂದು ತಿಳಿದು ಬಂದಿದೆ.
ಆಟೋದಲ್ಲಿ ಕುಳಿತ ಕೇಜ್ರಿವಾಲ್ ಎಎಪಿ ಪಕ್ಷದ ಪ್ರಚಾರ ಮಾಡಿದ್ದಾರೆ. ಲೋಕಲ್ ರೈಲಿನಲ್ಲೂ ಪ್ರಚಾರ ಆರಂಭಿಸಿದ ಕೇಜ್ರಿವಾಲ್ ಬಿಜಿಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಜ್ರಿವಾಲ್ಗೆ ಮುಂಬೈ ಪೊಲೀಸರು ಝಡ್ ಪ್ಲಸ್ ಭದ್ರತೆ ನೀಡಿದ್ದಾರೆ. ಭದ್ರತೆಯನ್ನು ಕೇಜ್ರಿವಾಲ್ ನಿರಾಕರಿಸಿದರೂ ಮುಂಬೈ ಪೊಲೀಸರು ಒತ್ತಡ ಹೇರಿದ್ದಾರೆ.
Click this button or press Ctrl+G to toggle between Kannada and English