ಬೆಂಬಲಿಗರ ಬಂಡಾಯ, ಮಾತುಕತೆಗೆ ಬಿಎಸ್‌ವೈ ಆಹ್ವಾನ

3:56 PM, Wednesday, March 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Yeddyurappaಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆಯಾದ ಬೆನ್ನಲ್ಲೆ ಅವರ ಬೆಂಬಲಿಗರು ಬಂಡಾಯವೆದ್ದಿದ್ದಾರೆ. ಇದು ಬಿಜೆಪಿಗೆ ನಿರೀಕ್ಷತವೇ. ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿರವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.

ಬಂಡಾಯಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಅವರ ಪರಮಾಪ್ತ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಬಿಎಸ್‌ವೈಗೆ ಬರೆದ ಪತ್ರ. ಯಡಿಯೂರಪ್ಪ ಅವರು ತಮ್ಮ ಜತೆಯಲ್ಲಿದ್ದ ನಿಷ್ಠಾವಂತರನ್ನೇ ಕಡೆಗಣಿಸಿದ್ದಾರೆ. ತಮ್ಮ ಪರ ಹೋರಾಟ ಮಾಡಿದವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ.

ಕೆಜೆಪಿ ಸ್ಥಾಪಿಸಲು ಬಿಎಸ್‌ವೈ ಅವರೊಂದಿಗೆ ಇದ್ದ ನಾಯಕರನ್ನು ಈಗ ಯಡಿಯೂರಪ್ಪ ಮರೆತಿದ್ದಾರೆ. ಅವರೆಲ್ಲ ಮುಖಭಂಗಕ್ಕೆ ಒಳಗಾಗಿದ್ದು, ಬೀದಿಪಾಲಾಗಿದ್ದಾರೆ. ಇದೆಲ್ಲ ನಿಮಗೆ ಸಮಾಧಾನ ತಂದಿದೆಯೇ ಎಂದು 15 ಪ್ರಶ್ನೆಗಳನ್ನು ಕೇಳಿ ಯಡಿಯೂರಪ್ಪ ಅವರಿಗೆ ಲಕ್ಷ್ಮೀನಾರಾಯಣ ಅವರು ನಿನ್ನೆ ಪತ್ರ ಬರೆದಿದ್ದದು.

ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ಅವರು ತಮ್ಮ ವಿರುದ್ಧ ತಿರುಗಿಬಿದ್ದಿರುವ ಬೆಂಬಲಗರನ್ನು ಸಮಾಧಾನ ಪಡಿಸಲು ತಮ್ಮ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಧನಂಜಯ್ ಕುಮಾರ್, ಲೇಹರ್ ಸಿಂಗ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ಮತ್ತೆ ಬಿಜೆಪಿ ಸೇರಿಸಿಕೊಳ್ಳಲು ಪಕ್ಷದಲ್ಲೇ ವಿರೋಧವಿದೆ. ಹೀಗಾಗಿ ಈ ಮೂವರು ಈಗ ಬಂಡಾಯದ ಹಾದಿಯಲ್ಲಿದ್ದಾರೆ. ಲಕ್ಷ್ಮೀನಾರಾಯಣ ಅವರು ಬಹಿರಂಗವಾಗಿಯೇ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದು ಯಡಿಯೂರಪ್ಪ ಅವರನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English