ಮಂಗಳೂರು : ಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಲೋಕಾಯುಕ್ತರಿಗೆ ವರದಿ ಸಲ್ಲಿಸಲು ವಿಳಂಬ ಮಾಡಿ ಕರ್ತವ್ಯ ಲೋಪವೆಸಗಿರುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ತಾಲೂಕಿನ ಕದ್ರಿ ಗ್ರಾಮದ ಸರ್ವೇ ನಂಬರ್ 266/3ಎಪಿ1 ರಲ್ಲಿ 0.10 ಎಕ್ರೆ ಜಮೀನನ್ನು ಶ್ರೀಮತಿ ದುಲ್ಸಿನ್ ಡಿಸೋಜ ಅವರಿಗೆ ಪೆಟ್ರೋಲ್ ಬಂಕ್ ಗೆ ಲೀಸ್ ಗೆ ನೀಡಲಾಗಿತ್ತು. ಅವರು ಲೀಸ್ ಗೆ ನೀಡಲಾದ ಜಮೀನನ್ನು ಹೊರತುಪಡಿಸಿ ಸರಕಾರಿ ಜಮೀನನ್ನು ಕೂಡಾ ಆಕ್ರಮಿಸಿ ಗ್ಯಾರೇಜ್ ಅಂಗಡಿ ಗಳನ್ನು ರಚಿಸಿ ಬಾಡಿಗೆ ಪಡೆಯುತ್ತಿರುವ ಬಗ್ಗೆ ಜಗನ್ನಾಥ್ ಶೆಟ್ಟಿ ಎಂಬವರು ಮಾನ್ಯ ಲೋಕಾಯುಕ್ತರಿಗೆ ದೂರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ವರದಿ ನೀಡಲು ಲೋಕಾಯುಕ್ತರು ಜಿಲ್ಲಾಧಿಕಾರಿ ಗಳಿಗೆ ಬರೆದಿರುವ ಪತ್ರದ ಬಗ್ಗೆ ನೆನಪೋಲೆ ಬಂದಾಗಲೂ ಸಹ ಕಚೇರಿ ಸಿಬ್ಬಂದಿಗಳು ಕಡತ ಸಲ್ಲಿಸದಿ ರುವುದಕ್ಕೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Click this button or press Ctrl+G to toggle between Kannada and English