ಅಂಬಿ ಆರೋಗ್ಯದಲ್ಲಿ ಚೇತರಿಕೆ

12:41 PM, Thursday, March 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Ambarishಸಿಂಗಾಪುರ: ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ.

ಅಂಬಿ ಆರೋಗ್ಯದ ಬಗ್ಗೆ ಮಾಧ್ಯಮಕ್ಕೆ ಮಾತನಾಡಿರುವ ಅವರ ಕುಟುಂಬ, ಅಂಬರೀಷ್ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದು, ಶೀಘ್ರವೇ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂಬರೀಷ್ ಅವರು ಈಗ ಗುಣಮುಖರಾಗಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ. ಈಗ ಅವರು ಸ್ವತಂತ್ರವಾಗಿ ಉಸಿರಾಡುತ್ತಿದ್ದಾರೆ ಎಂದು ಅಂಬರೀಷ್ ಅವರ ಅಕ್ಕನ ಮಗ, ಮೈಸೂರಿನ ಖ್ಯಾತ ವೈದ್ಯ ಡಾ. ಶೇಖರ್ ಅವರು ತಿಳಿಸಿದ್ದಾರೆ.

ಇನ್ನು ತಂದೆಯ ಆರೋಗ್ಯದ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಂಬಿ ಪುತ್ರ ಅಭಿಷೇಕ್ ಗೌಡ, ನಮ್ಮ ತಂದೆಯವರಿಗೆ ಈಗ ಯಾವುದೇ ಸಮಸ್ಯೆ ಇಲ್ಲ. ವೈದ್ಯರು ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರೆ. ಅವರ ದೇಹಕ್ಕೆ ವಿಶ್ರಾಂತಿಯ ಅಗತ್ಯೆ ಇದೆ ಎಂದು ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English