ಲೋಕ ಸಮೀಕ್ಷೆಯಲ್ಲಿ ಮೋದಿ ಮುಂದು ರಾಗಾ ಹಿಂದೆ, ಎನ್‌ಡಿಎನತ್ತ ಮತದಾರ, ಯುಪಿಎ ಕಥೆ ಹರೋಹರ

10:51 AM, Friday, March 7th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Narendra-Modiನವದೆಹಲಿ: ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಬ್ಬರಕ್ಕೆ ಧೂಳೀಪಟವಾಗಲಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗದ್ದುಗೆಯ ಸನಿಹ ಬಂದು ನಿಲ್ಲಲಿದೆ. ಎನ್‌ಡಿಎ 212- 232 ಸ್ಥಾನಗಳನ್ನು ಗೆದ್ದರೆ, ಯುಪಿಎ 119ರಿಂದ 139 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಿಎನ್‌ಎನ್‌ಐಬಿನ್- ಲೋಕನೀತಿ- ಸಿಎಸ್‌ಡಿಎಸ್ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.

ಬಿಜೆಪಿ ಅತಿದೊಡ್ಡ ಪಕ್ಷ: ಒಂದು ವೇಳೆ ತಕ್ಷಣಕ್ಕೆ ಚುನಾವಣೆ ನಡೆದರೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಏಕಾಂಗಿಯಾಗಿ 193ರಿಂದ 213 ಸೀಟು ಗೆಲ್ಲಲಿದೆ. ಕಾಂಗ್ರೆಸ್ 94ರಿಂದ 110 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲಿದೆ. ಇನ್ನು ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜೆಡಿಎಸ್ 1ರಿಂದ 5 ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಮತಗಳಿಕೆ ಪ್ರಮಾಣದಲ್ಲೂ ಬಿಜೆಪಿ ಮುಂದಿರಲಿದೆ. ಬಿಜೆಪಿ ಶೇ.36 ಮತಗಳನ್ನು ಸೆಳೆದರೆ, ಕಾಂಗ್ರೆಸ್ ಶೇ. 26ರಷ್ಟು ಮತಗಳನ್ನು ಗಳಿಸಲಿದೆ.

ಟಿಎಂಸಿ 3ನೇ ಅತಿದೊಡ್ಡ ಪಕ್ಷ: ಕಳೆದ ಬಾರಿ 19 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದ ತೃಣಮೂಲ ಕಾಂಗ್ರೆಸ್ ಈ ಚುನಾವಣೆಯಲ್ಲಿ 20ರಿಂದ 28 ಸ್ಥಾನಗಳನ್ನು ಗೆಲ್ಲಲಿದೆ. ಈ ಮೂಲಕ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುತ್ತದೆ ಸಮೀಕ್ಷೆ. ಸರ್ಕಾರ ರಚಿಸುವಲ್ಲಿ ಮಮತಾ ಕೃಪೆಯೂ ಬೇಕು.

ಮೋದಿ ಭಾಷಣವೇ ಪರಿಣಾಮಕಾರಿ

ಮತದಾರರು ರಾಹುಲ್, ಕೇಜ್ರಿವಾಲ್ ಭಾಷಣಕ್ಕಿಂತ ಮೋದಿ ಭಾಷಣವೇ ಪರಿಣಾಮಕಾರಿ ಎಂದಿದ್ದಾರೆ. ಮೋದಿ ಭಾಷಣ ಕೇಳಿದ್ರೆ ಅವರಿಗೇ ಮತ ಹಾಕಬೇಕು ಎಂದೆನಿಸುತ್ತದೆ ಎಂದು ಶೇ.24ರಷ್ಟು ಮಂದಿ ಹೇಳಿದ್ದಾರೆ.

ಯಶಸ್ಸು ಕಾಣದ ಚಾಯ್ ಪೇ ಚರ್ಚಾ

ಬಿಜೆಪಿಯ ಚಾಯ್ ಪೇ ಚರ್ಚಾ ಅಭಿಯಾನವು ಪಕ್ಷ ಅಂದುಕೊಂಡಷ್ಟು ಯಶಸ್ಸು ಕಂಡಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಅಭಿಯಾನದಲ್ಲಿ ನೀವು ಪಾಲ್ಗೊಳ್ಳುತ್ತೀರಾ ಎಂದು ಪ್ರಶ್ನಿಸಿದರೆ ಶೇ.17ರಷ್ಟು ಮಂದಿ ಮಾತ್ರ ಭಾಗವಹಿಸುವುದಾಗಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English