ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಸಾಧ್ಯ:ನರೇಂದ್ರ ಮೋದಿ

Monday, October 30th, 2017
rupay card

ಮಂಗಳೂರು: ಮೀನುಗಾರಿಕೆಗೆ ರಜಾ ಇರುವ 45 ದಿನಗಳ ಅವಧಿಯಲ್ಲಿ ಬೆಳೆಯಬಹುದಾದ ಔಷಧಿ ಮಹತ್ವದ ಜಲ ಸಸ್ಯ ಕೃಷಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ತೊಡಗಿಸಿಕೊಂಡರೆ ಮೀನುಗಾರರೂ ಸೇರಿದಂತೆ ತಳ ಸಮುದಾಯದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಜಿರೆಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಬೃಹತ್ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರುಪೇ ಕಾರ್ಡ್ ವಿತರಣೆ, ತಂತ್ರಾಂಶ ಆಧಾರಿತ […]

ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ, ಉಜಿರೆ ಭೇಟಿ ನಾಳೆ

Saturday, October 28th, 2017
Darmasthala

ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ ಬಳಿಕ ಉಜಿರೆಗೆ ರಸ್ತೆ ಮೂಲಕ ಆಗಮಿಸುವರು. ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ ಅಭಿಯಾನವನ್ನು ಪ್ರಧಾನಿ ಉದ್ಘಾಟಿಸುವರು. ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ […]

ಸಿಪಿಎಂ-ಕಾಂಗ್ರೆಸ್ ಪ.ಬಂಗಾಳದಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ : ನರೇಂದ್ರ ಮೋದಿ

Sunday, May 8th, 2016
Modi Kasaragod

ಕಾಸರಗೋಡು: ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಸಿಪಿಎಂ-ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ದೋಸ್ತಿ. ಕೇರಳದಲ್ಲಿ ಪರಸ್ಪರ ಕುಸ್ತಿಯಲ್ಲಿ ಏರ್ಪಟ್ಟಿದೆ. ಕೇರಳದ ಚುನಾವಣಾ ಸಭೆಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ನೇತಾರರು ಕಾಂಗ್ರೆಸ್ ಪಕ್ಷ ಭ್ರಷ್ಟರ ಕೂಟ ಎಂದರೆ ಇದೇ ನೇತಾರರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನಷ್ಟು ಉತ್ತಮ ಪಕ್ಷ ಬೇರೊಂದಿಲ್ಲ ಎಂದು ಹೊಗಳುತ್ತದೆ. ಇಂತಹ ಪಕ್ಷವನ್ನು ಸ್ವೀಕರಿಸಬೇಕೇ ಎಂಬುದನ್ನು ಕೇರಳದ ಬುದ್ಧಿವಂತ ಜನರು ತೀರ್ಮಾನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣಾ […]

ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್

Tuesday, March 11th, 2014
Arvind-Kejriwa

ಅಹಮದಾಬಾದ್: ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖತಃ ಭೇಟಿಯಾಗಲು ಗುಜರಾತಿಗೆ ಹೋಗಿದ್ದರಲ್ಲ. ಅದರ ಪ್ರಭಾವ/ ಪರಿಣಾಮ ಗೋಚರವಾಗಿದೆ. ಆದರೆ ಅದು ಅವರಿಗೇ ಮುಳುವಾಗಿದೆ. ಕಳೆದ ವಾರ ನಾಲ್ಕು ದಿನಗಳ ಕಾಲ ಗುಜರಾತಿನಲ್ಲಿ ಅಡ್ಡಾಡಿದ ಅರವಿಂದ್ ಕೇಜ್ರಿವಾಲಾ ಭಾರಿ ಯಶಸ್ಸು ಸಾಧಿಸಿದರು ಎಂದು AAP ಬೆಂಬಲಿಗರು ಹೇಳಿಕೊಂಡಿದ್ದರೆ ಅವರ ಟೀಕಾಕಾರರು ಅದೊಂದು ದೊಡ್ಡ ಫ್ಲಾಪ್ ಷೋ ಎಂದು ಜರಿದಿದ್ದಾರೆ. ಇನ್ನು, ಟ್ವಿಟ್ಟರ್ ಮೂಲಕ ನಡೆದಿರುವ […]

ಇಂದು ಮಹಿಳಾ ದಿನಾಚರಣೆಗೆ ಮೋದಿ ಜತೆ ಚಾಯ್ ಪೆ ಚರ್ಚಾ

Saturday, March 8th, 2014
Narendra-Modi

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಮಾ.8ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಲಿದೆ. ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ […]

ಗುಜರಾತ್ ಅಭಿವೃದ್ಧಿ ಬಗ್ಗೆ ಮೋದಿ ಹೇಳುತ್ತಿರುವುದೆಲ್ಲ ಸುಳ್ಳು: ಕೇಜ್ರಿವಾಲ್

Friday, March 7th, 2014
Arvind-Kejriwal

ಅಹಮದಾಬಾದ್: ಪದೇಪದೆ ಗುಜರಾತ್ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ಥವದಲ್ಲಿ ಗುಜರಾತ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿರುವ ಆಮ್ ಆದ್ಮಿ ಪಕ್ಷದ ನಾಯಕ, ಗುಜರಾತ್ ಅಭಿವೃದ್ಧಿಗೆ ಸಂಬಂಧಿಸಿದ 16 ಪ್ರಶ್ನೆಗಳ ಪಟ್ಟಿಯೊಂದಿಗೆ ಗುಜರಾತ್ ಮುಖ್ಯಮಂತ್ರಿಯ ನಿವಾಸಕ್ಕೆ ಭೇಟಿ […]

ನಾಳೆ ಮಹಿಳಾ ದಿನಾಚರಣೆಗೆ ಮೋದಿ ಜತೆ ‘ಚಾಯ್ ಪೆ ಚರ್ಚಾ’

Friday, March 7th, 2014
Narendra-Modi

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಮಾ.8 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ […]

ಲೋಕ ಸಮೀಕ್ಷೆಯಲ್ಲಿ ಮೋದಿ ಮುಂದು ರಾಗಾ ಹಿಂದೆ, ಎನ್‌ಡಿಎನತ್ತ ಮತದಾರ, ಯುಪಿಎ ಕಥೆ ಹರೋಹರ

Friday, March 7th, 2014
Narendra-Modi

ನವದೆಹಲಿ: ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಬ್ಬರಕ್ಕೆ ಧೂಳೀಪಟವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗದ್ದುಗೆಯ ಸನಿಹ ಬಂದು ನಿಲ್ಲಲಿದೆ. ಎನ್‌ಡಿಎ 212- 232 ಸ್ಥಾನಗಳನ್ನು ಗೆದ್ದರೆ, ಯುಪಿಎ 119ರಿಂದ 139 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಿಎನ್‌ಎನ್‌ಐಬಿನ್- ಲೋಕನೀತಿ- ಸಿಎಸ್‌ಡಿಎಸ್ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ ಅತಿದೊಡ್ಡ ಪಕ್ಷ: ಒಂದು ವೇಳೆ ತಕ್ಷಣಕ್ಕೆ ಚುನಾವಣೆ ನಡೆದರೆ ಬಿಜೆಪಿ […]

ಎಫ್‌ಡಿಐ, ಜಿಎಸ್‌ಟಿ ಇರಲಿ ಮಾರಕ ಕಾನೂನು ತೊಲಗಲಿ

Friday, February 28th, 2014
Narendra-Modi

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಪಕ್ಷದ ಆರ್ಥಿಕ ನೀತಿಯನ್ನು ಬಹಿರಂಗಪಡಿಸಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರಕು ಹಾಗೂ ಸೇವೆಗಳ ತೆರಿಗೆ(ಜಿಎಸ್‌ಟಿ) ಪಕ್ಷದ ವಿರೋಧವಿಲ್ಲ ಎಂದಿದ್ದಾರೆ. ಜಿಎಸ್‌ಟಿ ಜಾರಿಗೆ ಸಂಬಂಧಿಸಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಇದರ ಅನುಷ್ಠಾನಕ್ಕೆ ಬೇಕಾದ ಪೂರ್ವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಎಸ್‌ಟಿ ಜಾರಿಗೂ ಮುನ್ನ ಮಾಹಿತಿ ತಂತ್ರಜ್ಞಾನ ಎಲ್ಲೆಡೆ ಲಭ್ಯವಾಗಬೇಕಿದೆ. ಜತೆಗೆ, ರಾಜ್ಯ ಸರ್ಕಾರಗಳಿಗೆ ಹಣಕಾಸಿಗೆ ಸಂಬಂಧಿಸಿ ಒಂದಷ್ಟು ಕಳವಳಗಳಿವೆ. […]

ಮೋದಿ ಬಗ್ಗೆ ಖುರ್ಷಿದ್ ಹೇಳಿಕೆಗೆ ರಾಹುಲ್ ಅಸಮಾಧಾನ

Thursday, February 27th, 2014
Rahul-Gandhi

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ್ದ ‘ನಪುಂಸಕ’ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಬಳಿಕ ಖುರ್ಷಿದ್ ಹೇಳಿಕೆ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿರುವ ರಾಹುಲ್, ‘ಇಂತಹ ಭಾಷೆ ಬಳಸುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ. 2002ರ ಗುಜರಾತ್ ಗಲಭೆ ನಿಯಂತ್ರಿಸಲು ಸಾಧ್ಯವಾಗದ ಮೋದಿ ಒಬ್ಬ ‘ನಪುಂಸಕ’ ಎಂದು ಸಲ್ಮಾನ್ ಖರ್ಷಿದ್ ಹೇಳಿದ್ದರು. ಈ […]