ನಾಳೆ ಮಹಿಳಾ ದಿನಾಚರಣೆಗೆ ಮೋದಿ ಜತೆ ‘ಚಾಯ್ ಪೆ ಚರ್ಚಾ’

11:18 AM, Friday, March 7th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Narendra-Modiಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಮಾ.8 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 25 ನಗರಗಳ 82 ಕೇಂದ್ರಗಳಲ್ಲಿ ಪ್ರಥಮ ಸುತ್ತಿನ ಚಾಯ್ ಪೆ ಚರ್ಚೆ ಯಶಸ್ವಿಯಾಗಿ ನಡೆದಿದೆ. ಎರಡನೇ ಸಂವಾದದಲ್ಲಿ 150-200 ಮಹಿಳೆಯರು ಭಾಗವಹಿಸಲಿದ್ದು, ಸ್ಥಳೀಯ ಮಹಿಳಾ ನಾಯಕರು, ಸಾಧಕರು, ವಿಶೇಷ ಆಹ್ವಾನಿತರು ಹಾಜರಿರುವರು. ಬೆಳಗಾವಿ ಮತ್ತು ಬೆಂಗಳೂರಲ್ಲಿ ನೇರವಾಗಿ ಮೋದಿ ಸಂವಾದ ನಡೆಸುವರು. ಇದೇ ವೇಳೆ ಮೋದಿ ಅಭಿವೃದ್ಧಿಪರ ವೀಡಿಯೋ ಪ್ರದರ್ಶಿಸಲಾಗುವುದು ಎಂದರು.

ಮಹಿಳೆಯರು ಎದುರಿಸುವ ಸ್ಥಳೀಯ ಸಮಸ್ಯೆಗಳನ್ನು ಹಂಚಿಕೊಳ್ಳುವುದು, ಮಹಿಳಾ ಸಬಲೀಕರಣಕ್ಕೆ ಮೋದಿ ಜತೆ ಪ್ರಶ್ನಿಸಬಹುದು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಸಲಹೆ ನೀಡಬಹುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English