ಕಾಸರಗೋಡು: ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಸಿಪಿಎಂ-ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ದೋಸ್ತಿ. ಕೇರಳದಲ್ಲಿ ಪರಸ್ಪರ ಕುಸ್ತಿಯಲ್ಲಿ ಏರ್ಪಟ್ಟಿದೆ. ಕೇರಳದ ಚುನಾವಣಾ ಸಭೆಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ನೇತಾರರು ಕಾಂಗ್ರೆಸ್ ಪಕ್ಷ ಭ್ರಷ್ಟರ ಕೂಟ ಎಂದರೆ ಇದೇ ನೇತಾರರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನಷ್ಟು ಉತ್ತಮ ಪಕ್ಷ ಬೇರೊಂದಿಲ್ಲ ಎಂದು ಹೊಗಳುತ್ತದೆ. ಇಂತಹ ಪಕ್ಷವನ್ನು ಸ್ವೀಕರಿಸಬೇಕೇ ಎಂಬುದನ್ನು ಕೇರಳದ ಬುದ್ಧಿವಂತ ಜನರು ತೀರ್ಮಾನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಯೆಮನ್, ಲಿಬಿಯಾ ಮೊದಲಾದೆಡೆಗಳಲ್ಲಿ ಉಗ್ರರ ಅಟ್ಟಹಾಸಕ್ಕೆ ಸಿಲುಕಿಕೊಂಡ ಕೇರಳದ ದಾದಿಯರನ್ನು ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಹಗಲು ರಾತ್ರಿಯೆನ್ನದೆ ಶ್ರಮಿಸಿ ಕೇರಳಕ್ಕೆ ಕರೆತರಲಾಯಿತು. ವಿದೇಶದಲ್ಲಿರುವ ಮಹಿಳೆಯರ ಬಗ್ಗೆ ಕೇಂದ್ರ ಸರಕಾರ ಸದಾ ಚಿಂತಿಸುತ್ತಿದ್ದರೆ, ಕೆಲವು ದಿನಗಳ ಹಿಂದೆ ಕೇರಳದಲ್ಲಿ ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದರೂ ಕೇರಳ ಸರಕಾರ ಈ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ನರೇಂದ್ರ ಮೋದಿ ಆರೋಪಿಸಿದರು. ಕಾಂಗ್ರೆಸ್ ಭ್ರಷ್ಟಚಾರದಲ್ಲಿ ಮುಳುಗಿದ್ದರೆ, ಸಿಪಿಎಂ ಹಿಂಸಾ ರಾಜಕೀಯದಲ್ಲಿ ತೊಡಗಿದೆ. ತನ್ನ ಆಶಯಗಳನ್ನು ತಿರಸ್ಕರಿಸಿದ್ದ ಸಮಾಜ ಸೇವಕ ಸದಾನಂದ ಮಾಸ್ತರ್ ಅವರ ಎರಡು ಕಾಲುಗಳನ್ನು ಸಿಪಿಎಂ ಕತ್ತರಿಸಿತು. ಸಿಪಿಎಂನ ಹಿಂಸಾ ರಾಜಕೀಯಕ್ಕೆ ಇದು ಉತ್ತಮ ಉದಾಹರಣೆ. ಸಿಪಿಎಂನ ಹಿಂಸಾ ರಾಜಕೀಯಕ್ಕೆ ಬಿಜೆಪಿಯ ನೂರಾರು ಮಂದಿ ಬಲಿಯಾಗಿದ್ದಾರೆ. ಸಿಪಿಎಂ ಹಿಂಸಾ ರಾಜಕೀಯವನ್ನು ಕೊನೆಗೊಳಿಸಿ ಅಭಿವೃದ್ಧಿಯತ್ತ ಸಾಗಲಿ ಎಂದು ಸವಾಲೆಸೆದರು.
ಎಲ್‌ಡಿಎಫ್-ಯುಡಿಎಫ್ ಒಪ್ಪಂದ ರಾಜಕೀಯ : ಕೇರಳದಲ್ಲಿ ಎಲ್‌ಡಿಎಫ್-ಯುಡಿಎಫ್ ಜಾರಿಗೆ ತರುವುದು ಒಪ್ಪಂದ ರಾಜಕೀಯ. ಈ ಬಾರಿ ನಾನು, ಮುಂದಿನ ಬಾರಿ ನೀನು ಎಂಬಂತೆ ಈ ಎರಡೂ ರಂಗಗಳು ಪರಸ್ಪರ ಒಪ್ಪಂದ ಮಾಡಿಕೊಂಡು ಕೇರಳ ರಾಜ್ಯವನ್ನು ಸೂರೆ ಮಾಡಿದೆ ಎಂದು ಆರೋಪಿಸಿದರು. ಈ ಕಾರಣದಿಂದ ಕೇರಳ ಅಭಿವೃದ್ಧಿಯಲ್ಲಿ ಹಿಂದೆ ಸರಿಯಿತು. ಒಂದೇ ಸಮಯದಲ್ಲಿ ಎರಡು ರೀತಿಯಲ್ಲಿ ಮಾತನಾಡುವ ಎಲ್‌ಡಿಎಫ್-ಯುಡಿಎಫ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾದರೂ ಹೇಗೆ? ಕೃಷಿಕರಿಗಾಗಿ ಏನನ್ನು ಮಾಡದ ಈ ಎರಡೂ ರಂಗಗಳು, ಕೃಷಿಕರ ಉನ್ನತಿಯ ಬಗ್ಗೆ ಶ್ರಮಿಸದೆ ಹಿಂಸಾ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ. ಕಂಗು, ರಬ್ಬರ್, ಭತ್ತ, ತೆಂಗು ಕೃಷಿಕರು ವಿವಿಧ ಸಮಸ್ಯೆಗಳನ್ನು, ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಕೇಂದ್ರ ಸರಕಾರ ಕೃಷಿಕರ ಸಮಸ್ಯೆ ಪರಿಹರಿಸಲು ಕೃಷಿ ಇನ್ಶೂರೆನ್ಸ್ ಯೋಜನೆಯನ್ನು ಜಾರಿಗೆ ತಂದಿದೆ. ಸಣ್ಣ ಸಣ್ಣ ಅಂಗಡಿ, ಉದ್ದಿಮೆ ಮೊದಲಾದವುಗಳನ್ನು ನಡೆಸಲು ಜಾಮೀನು ರಹಿತ ಸುಮಾರು 10 ಲಕ್ಷ ರೂ. ತನಕ ಸಾಲ ನೀಡುವ ಮುದ್ರಾ ಯೋಜನೆ ಜಾರಿಗೊಳಿಸಿದೆ. ಈ ಮೂಲಕ ಉದ್ಯೋಗ ಕಲ್ಪಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದರು. ಕೃಷಿ ಇನ್ಶೂರೆನ್ಸ್ ಯೋಜನೆಯಲ್ಲಿ ಪ್ರಕೃತಿ ದುರಂತ, ಕೃಷಿ ನಾಶನಷ್ಟ, ಬರಗಾಲ ಮೊದಲಾದವುಗಳಿಂದ ಕೃಷಿ ನಾಶ ಸಂ‘ವಿಸಿದರೆ ತುರ್ತು ಪರಿಹಾರ ನೀಡಲಾಗುವುದು. 2022ರ ಹೊತ್ತಿಗೆ ದೇಶದ ಕೃಷಿಕರು ಇಮ್ಮಡಿ ಆದಾಯ ಹೊಂದಲಿದ್ದಾರೆ ಎಂದು ಮೋದಿ ಹೇಳಿದರು.
ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ಸಂದಭದಲ್ಲಿ ನೂಕುನುಗ್ಗಲಿನಲ್ಲಿ ನೂರಾರು ಮಂದಿ ಭಕ್ತರು ಕೆಲವು ವರ್ಷಗಳ ಹಿಂದೆ ಸಾವಿಗೀಡಾದರೂ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಕೇಂದ್ರದಿಂದ ಯಾರೂ ವೀಕ್ಷಿಸಲು ಕೇರಳಕ್ಕೆ ಬಂದಿರಲಿಲ್ಲ. ಯಾವನೇ ಒಬ್ಬ ಸಚಿವನೂ ಬಂದಿಲ್ಲ. ಆದರೆ ಕೊಲ್ಲಂನಲ್ಲಿ ನಡೆದ ಸುಡು ಮದ್ದು ದುರಂತ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪ್ರಧಾನಿಯ ನೇತೃತ್ವದಲ್ಲಿ ವೈದ್ಯಕೀಯ ನೆರವು ಸಹಿತ ಬಂದು ಪರಿಸ್ಥಿತಿಯನ್ನು ವೀಕ್ಷಿಸಿ ರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಎಂದರು.
ಮಲಯಾಳದಲ್ಲಿ ಭಾಷಣ ಆರಂಭ : ಬಿಜೆಪಿ ನೇತೃತ್ವದ ಎನ್‌ಡಿಎ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಲಯಾಳದಲ್ಲಿ ಭಾಷಣ ಆರಂಭಿಸಿ ಮಲಯಾಳ ಭಾಷೆಯಲ್ಲಿ ಕೊನೆಗೊಳಿಸಿದರು. ಸುಮಾರು 10.30 ಕ್ಕೆ ಮೋದಿ ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂಗೆ ತಲುಪಿದರು. 10.45 ಕ್ಕೆ ಆರಂಭಿಸಿ ಸುಮಾರು 35 ನಿಮಿಷ ಭಾಷಣ ಮಾಡಿದರು. ‘ಸಪ್ತ ಭಾಷಾ ಸಂಗಮ ಭೂಮಿಯಾಯ ಕಾಸರಗೋಡಿಂಡೆ ಜನಂಗಳೆ… ಎಲ್ಲಾವರುಕ್ಕು ನಮಸ್ಕಾರಂ ಎಂದು ಮಲಯಾಳದಲ್ಲಿ ಭಾಷಣ ಆರಂಭಿಸಿದರು. ಆದಿ ಶಂಕರಾಚಾರ್ಯರುಂ, ಶ್ರೀ ನಾರಾಯಣ ಗುರುವುಂ, ಚಟ್ಟಂಬಿ ಸ್ವಾಮಿಗಳುಂ ಉಳ್ಪೊಡೆಯುಳ್ಳ ನವೋತ್ಥಾನ ನೇತಾಕಳು ಜನಿಚ್ಚ ಮಣ್ಣಿಲೆ ನಡಕುನ್ನ ತೆರುಂಞಡುಪ್ಪಿಲೆ ಎನ್‌ಡಿಎ ಮಿಕಚ್ಚ ವಿಜಯಂ ನೇಡಿಕೊಡುಕಣಂಮೆನ್ನು ಮೋದಿ ವಿನಂತಿಸಿದರು. ಬಿಜೆಪಿ ಕಲ್ಲಿಕೋಟೆ ಜಿಲ್ಲಾ ಕಾರ್ಯದರ್ಶಿ ಸಿ.ಪದ್ಮನಾಭನ್ ಮೋದಿ ಅವರ ಭಾಷಣವನ್ನು ಮಲಯಾಳಕ್ಕೆ ಭಾಷಾಂತರಿಸಿದರು.
ಜನಸಾಗರ : ನಾನು ಹಿಂದೆ ಇಲ್ಲಿಗೆ ಬಂದಿದ್ದೆ. ಅಂದು ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಇತ್ತು. ಆದರೆ ಇಂದು ಇಲ್ಲಿ ಜನಸಾಗರವೇ ಸೇರಿದೆ. ಇದು ಬಿಜೆಪಿ ನೇತೃತ್ವದ ಎನ್‌ಡಿಎ ಬಗೆಗಿನ ವಿಶ್ವಾಸ ಮತ್ತು ಇದು ಗೆಲುವಿನ ಸಂಕೇತ ಎಂದು ಮೋದಿ ಹೇಳಿದರು. ಎರಡೂ ರಂಗಗಳ ಆಡಳಿತೆಯಿಂದ ರೋಸಿ ಹೋಗಿರುವ ಕೇರಳದ ಜನರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಅದು ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದರು. ಉದ್ಯೋಗ ನೀಡುತ್ತಾರೆ ಎಂಬುದನ್ನು ತೀರ್ಮಾನಿಸುವ ಚುನಾವಣೆಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಕೇರಳವನ್ನು ಪಾರು ಮಾಡುವವರು ಯಾರು ? : ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎಂಬುದು ಮುಖ್ಯವಲ್ಲ. ಕೇರಳವನ್ನು ಯಾರು ಪಾರು ಮಾಡುತ್ತಾರೆ ಎಂಬುದನ್ನು ಈ ಚುನಾವಣೆ ನಿರ್ಣಯಿಸಲಿದೆ. ಯಾರು ಕೂತುಪರಂಬ ಬಿಜೆಪಿ ಅಭ್ಯರ್ಥಿ ಸದಾನಂದ ಮಾಸ್ತರ್ ಮೊದವಲಾದವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಪಿ.ರಮೇಶ್ ಸ್ವಾಗತಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶ್ರೀಶನ್, ರಾಜ್ಯ ಉಪಾಧ್ಯಕ್ಷ ಪ್ರಮೀಳಾ ಸಿ.ನಾಕ್, ಮಡಿಕೈ ಕಮ್ಮಾರನ್, ಸಂಜೀವ ಶೆಟ್ಟಿ, ಅರಿಯಕಂಡಿ ಸಂತೋಷ್, ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೇರಳದ ಭವಿಷ್ಯ ಬಿಜೆಪಿಯಲ್ಲಿದೆ : ಎರಡೂ ಸರಕಾರಗಳ ಅಭಿವೃದ್ಧಿ ವಿರೋಧಿ ಆಡಳಿತದಿಂದ ಜನರು ಬದಲಾವಣೆಗಾಗಿ ಕಾಯುತ್ತಿದ್ದಾರೆ. ಕೇರಳದ ಅಭಿವೃದ್ಧಿ ಯಾಗಬೇಕಾದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮಾತ್ರ ಸಾಧ್ಯ ಎಂಬುದಾಗಿ ಜನರು ತಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ , ಉದುಮ ವಿಧಾನಸಭಾ ಅಭ್ಯರ್ಥಿ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾ|ಗಣೇಶ್ ಕಾರ್ಣಿಕ್, ಬಿಜೆಪಿ ನೇತಾರರಾದ ಸಿ.ಕೆ.ಪದ್ಮನಾಭನ್, ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್, ಕಾಸರಗೋಡು ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ತೃಕ್ಕರಿಪುರ ಅಭ್ಯರ್ಥಿ ಭಾಸ್ಕರನ್, ಕಾಂಞಂಗಾಡ್ ಅಭ್ಯರ್ಥಿ ಎಂ.ಪಿ.ರಾಘವನ್, ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English