ಎತ್ತಿನಹೊಳೆ ವಿರೋಧಿಗಳ ಪರ ಬ್ಯಾಟಿಂಗ್!

1:04 PM, Saturday, March 8th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

U.T.-Kadarಮಂಗಳೂರು: ಎತ್ತಿನಹೊಳೆ ಯೋಜನೆ ಪರವಾಗಿ ಮಾತನಾಡಿಲ್ಲ. ನೆಲ, ಜಲ ಉಳಿವಿಗಾಗಿ ಹೋರಾಟ ನಡೆಸಿದ ದಕ್ಷಿಣ ಕನ್ನಡದ ಜನರನ್ನು ಸಂಘಟನೆಗಳನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

‘ಎತ್ತಿನಹೊಳೆ ಯೋಜನೆ ಪರವಾಗಿದ್ದಾರೆ’ ಎಂಬ ಆರೋಪಗಳನ್ನು ಅಲ್ಲಗಳೆದ ಯು.ಟಿ.ಖಾದರ್ ದಕ್ಷಿಣ ಕನ್ನಡ ಜಿಲ್ಲೆ ಎತ್ತಿನಹೊಳೆ  ಹೋರಾಟ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೋಲಾರದಲ್ಲಿ ಈ ಕುರಿತು ತಾವು ಯಾವುದೇ ವಿರುದ್ಧ ಹೇಳಿಕೆ ನೀಡಿಲ್ಲ ಎಂದು ಅಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹತ್ತು ನಿಮಿಷಗಳ ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸಿದರು.

ಬಿಜೆಪಿಯ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ ಯೋಜನೆಗೆ ತರಾತುರಿಯಲ್ಲಿ ಒಪ್ಪಿಗೆ ನೀಡಿದರು. ನಾವು ಆಗ ವಿರೋಧ ವ್ಯಕ್ತಪಡಿಸಿದ್ದೆವು. ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಆಸಕ್ತಿಯೇ ಇಲ್ಲ. ಕಲ್ಲಡ್ಕದ ಮಾನಸಿಕ ರೋಗದ ವ್ಯಕ್ತಿ ಈ ಬಗ್ಗೆ ಏಕೆ ಹೇಳಿಕೆ ನೀಡುತ್ತಿಲ್ಲ. ಮತಾಂಧ ಹಿಂಸಾ ಪ್ರೇಮಿ ಸಂಘಟನೆಗಳು ಏಕೆ ಈಗ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ತಪ್ಪು ಮಾಡಿಲ್ಲ. ಆವರು ಅಲ್ಲಿನ ಜನಪ್ರತಿನಿಧಿಯಾಗಿ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಜನಾರ್ದನ ಪೂಜಾರಿ ಸಂಸದರಾಗಿದ್ದರೆ ಈ ಯೋಜನೆ ಜಾರಿ ಮಾಡಲು ಬಿಡುತ್ತಿರಲೇ ಇಲ್ಲ. ಈಗ ರೈಲು ಹೋಗಿಯಾಗಿದೆ ಟಿಕೆಟ್ ಇದ್ದರೇನು ಪ್ರಯೋಜನ ಎಂಬಂತಾಗಿದೆ ಎಂದು ಪುನರುಚ್ಚರಿಸಿದರು.

ಎತ್ತಿನಹೊಳೆ ಯೋಜನೆ ಪರಿಷ್ಕೃತಗೊಳಿಸಿ ಕ್ಯಾಬಿನೆಟ್‌ನಲ್ಲಿ ಇಡಲಾಗಿತ್ತು. ಅದಕ್ಕೆ ಮಂಜೂರು ಲಭಿಸಿದೆ. ನಾವು ಕರಾವಳಿಯವರು ಮೂರು ಮಂದಿ ನಿಮಗೆ ಗೊತ್ತೇ ಇದೆ. ಸಿದ್ದರಾಮಯ್ಯ, ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಅಲ್ಲ, ಅವರು ರಾಜ್ಯದ ಮುಖ್ಯಮಂತ್ರಿ ಎಂದು ಅಸಾಹಯಕತೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟವನ್ನು ಪ್ರಶಂಶಿಸಿದರು. ಆದರೆ ಹೋರಾಟವನ್ನು ಶಂಕುಸ್ಥಾಪನೆಗೆ ಮುಂಚಿತವಾಗಿ ಮಾಡಬೇಕಿತ್ತು ಎಂದು ಕಿವಿ ಮಾತು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈಶ್ವರ ಕಟೀಲ್, ಕೃಷ್ಣ ಗಟ್ಟಿ, ಸಂತೋಷ್ ಶೆಟ್ಟಿ, ಅಮೀರ್ ಇದ್ದರು.

U.T.-Kadar

U.T.-Kadar

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English